Shikhar dhawan Wedding Photos: ಸ್ಟಾರ್ ಕ್ರಿಕೆಟಿಗ ಶಿಖರ್ ಧವನ್ ಎರಡನೇ ಮದುವೆ ವದಂತಿಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ.. ಆದರೆ ಇದೀಗ ಮದುವೆ ನಡೆದೇ ಹೋಯ್ತು ಎನ್ನುವಂತೆ ಕೆಲವು ಪೋಟೋಗಳು ವೈರಲ್ ಆಗುತ್ತಿವೆ.. ಹಾಗಾದ್ರೆ ಆ ಚಿತ್ರಗಳಲ್ಲಿನ ಅಸಲಿಯತ್ತೇನು? ಇಲ್ಲಿ ತಿಳಿಯಿರಿ..
ಶಿಖರ್ ಧವನ್ ಮತ್ತು ಹುಮಾ ಖುರೇಷಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವೈರಲ್ ಫೋಟೋಗಳ ಹಿಂದಿನ ಸತ್ಯವನ್ನು ತಿಳಿಯಲು ನೆಟಿಜನ್‌ಗಳು ಕಾತರರಾಗಿದ್ದಾರೆ. ಶಿಖರ್ ಮತ್ತು ಹುಮಾ ಸಂಬಂಧದ ಬಗ್ಗೆ ಅನೇಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ..
ಕ್ರಿಕೆಟಿಗ ಶಿಖರ್ ಧವನ್ ಮತ್ತು ನಟಿ ಹುಮಾ ಖುರೇಷಿ ಮದುವೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ ಇವರಿಬ್ಬರ ಮದುವೆ ಫೋಟೋಗಳು ಕೂಡ ವೈರಲ್ ಆಗಿವೆ. ಈ ವೈರಲ್ ಫೋಟೋಗಳಲ್ಲಿ, ಶಿಖರ್ ಮತ್ತು ಹುಮಾ ಮದುವೆಯಾಗಿದ್ದಾರೆ..
ಶಿಖರ್ ಮತ್ತು ಹುಮಾ ವಧು-ವರರ ಉಡುಪಿನಲ್ಲಿ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಮದುವೆ ಫೋಟೋ ನೋಡಿ ನೆಟ್ಟಿಗರ ಮನದಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಶಿಖರ್ ಮತ್ತು ಹುಮಾ ಯಾವಾಗ ಒಟ್ಟಿಗೆ ಸೇರಿದರು ಎಂದು ಅಭಿಮಾನಿಗಳು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ..
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕೆಲವು ಫೋಟೋಗಳು ಶಿಖರ್ ಮತ್ತು ಹುಮಾ ನಡುವಿನ ನಿಕಟತೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ. ಇದು ಯಾವಾಗ ನಡೆಯಿತು ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಆದರೆ ಈ ಫೋಟೋಗಳ ಹಿಂದಿನ ಸತ್ಯ ಸ್ವಲ್ಪ ವಿಭಿನ್ನವಾಗಿದೆ.
ಶಿಖರ್ ಧವನ್ ಮತ್ತು ಹುಮಾ ಖುರೇಷಿ ಅವರ ಈ ಫೋಟೋಗಳು ಸಂಪೂರ್ಣವಾಗಿ ನಕಲಿ. ಇಬ್ಬರ ಫೋಟೋಗಳನ್ನು AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮೂಲಕ ಎಡಿಟ್ ಮಾಡಲಾಗಿದೆ. ಇಂದಿನ AI ಯುಗದಲ್ಲಿ, ಏನು ಬೇಕಾದರೂ ಸಾಧ್ಯ ಎಂಬುದು ಶಿಖರ್-ಹುಮಾ ಅವರ ಫೋಟೋಗಳಿಂದ ಸ್ಪಷ್ಟವಾಗಿದೆ.
ಈ ಹಿಂದೆ ಇನ್ನೂ ಕೆಲವು ಸೆಲೆಬ್ರಿಟಿಗಳ ಫೋಟೋಗಳನ್ನು ಕೂಡ ಇದೇ ರೀತಿ ಎಡಿಟ್ ಮಾಡಿ ವೈರಲ್ ಮಾಡಲಾಗಿತ್ತು. ಐಶ್ವರ್ಯಾ ರೈ-ಸಲ್ಮಾನ್ ಖಾನ್, ವಿವೇಕ್ ಒಬೆರಾಯ್-ಸಲ್ಮಾನ್ ಖಾನ್, ಸುಶಾಂತ್ ಸಿಂಗ್ ರಜಪೂತ್-ಸಾರಾ ಅಲಿ ಖಾನ್, ಸಿದ್ಧಾರ್ಥ್ ಶುಕ್ಲಾ-ಶೆಹನಾಜ್ ಗಿಲ್ ಅವರ ಫೋಟೋಗಳನ್ನು ಸಹ AI ಸಹಾಯದಿಂದ ಎಡಿಟ್ ಮಾಡಿ ವೈರಲ್ ಮಾಡಿಲಾಗಿತ್ತು..