Actress Life : ಸಿನಿಮಾ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಈ ನಟಿ ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟಳು. 17 ನೇ ವಯಸ್ಸಿನಲ್ಲಿ ಸೂಪರ್ ಹೀರೋಯಿನ್ ಆಗಿ ಮಿಂಚಿದಳು. ಯಶಸ್ಸಿನ ನಂತರ ತಕ್ಷಣವೇ ಫ್ಲಾಪ್ ಎದುರಿಸಬೇಕಾಯಿತು. ಆಗಾಗಿ ಸಿನಿಮಾದಿಂದ ದೂರ ಉಳಿದಳು.. ಯಾರ್ ಗೊತ್ತೆ ಈಕೆ..? ಬನ್ನಿ ತಿಳಿಯೋಣ..
ಈಕೆ ಯಾರೂ ಅಲ್ಲ, ಬಾಲಿವುಡ್ ನಟಿ ಆಲಿಯಾ ಭಟ್ ಸಹೋದರಿ.. ಮಹೇಶ್ ಭಟ್ ಮಗಳು ಪೂಜಾ ಭಟ್. ನಟಿ ಪೂಜಾ ಭಟ್ ಕೇವಲ 17 ನೇ ವಯಸ್ಸಿನಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ತಮ್ಮ ವೃತ್ತಿಜೀವನದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಸ್ಟಾರ್ಡಮ್ ಮತ್ತು ಸೋಲು ಎರಡನ್ನೂ ಕಂಡರು.
90ರ ದಶಕದಲ್ಲಿ, ನಿರ್ದೇಶಕರು ಮತ್ತು ನಿರ್ಮಾಪಕರು ಪೂಜಾ ಭಟ್ ಅವರಿಗಾಗಿ ಕಾಯುತ್ತಿದ್ದರು. ತನ್ನ ಸೌಂದರ್ಯ ಮತ್ತು ನಟನಾ ಕೌಶಲ್ಯದಿಂದ ಈಕೆಗೆ ವಿಶೇಷ ಮನ್ನಣೆ ಸಿಕ್ಕಿತು. ಆದರೆ ಇದು ಹೆಚ್ಚು ದಿನಗಳು ಉಳಿಯಲಿಲ್ಲ. 24 ವರ್ಷಗಳ ನಂತರ ಸ್ಟಾರ್ ಡಮ್ ಕಡಿಮೆಯಾಗುತ್ತಿದ್ದಂತೆ ನಟನೆಯಿಂದ ದೂರ ಸರಿದು ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟರು.
ಪೂಜಾ ಭಟ್ ಅವರ ನೇರ ನುಡಿ, ಬೋಲ್ಡ್ ನೆಸ್ ಹಾಗೂ ಹಾಲಿವುಡ್ ಲುಕ್ ಇವರ ಪಾಲಿಗೆ ಕೂಡಿ ಬಂದಿತ್ತು. ದೊಡ್ಡ ಸಿನಿಮಾ ನಿರ್ಮಾಪಕರ ಮಗಳಾಗಿದ್ದರೂ ಕಷ್ಟಪಟ್ಟು ದುಡಿದು ನಟನಾ ಲೋಕದಲ್ಲಿ ವಿಶೇಷ ಹೆಸರು ಮಾಡಿದವರು. ಅದರೆ, ಪೂಜಾ ಭಟ್ ಅವರ ಸಿನಿಮಾ ಜೀವನ ಹೆಚ್ಚು ಕಾಲ ಉಳಿಯಲಿಲ್ಲ.
ಪೂಜಾ ಭಟ್ ಅವರ ವೃತ್ತಿಜೀವನವು ಎಷ್ಟು ವೇಗವಾಗಿ ಮೇಲೇರಿತು ಅಷ್ಟೇ ವೇಗವಾಗಿ ಕೆಳಗಿಳಿಯಿತು. ಹಿಟ್ ಸಿನಿಮಾಗಳ ನಂತರ ಸಾಲು ಸಾಲು ಸೋಲು ಅನುಭವಿಸಬೇಕಾಯಿತು. ಆಕೆಯ ವೃತ್ತಿಜೀವನದ ಗ್ರಾಫ್ ತುಂಬಾ ವೇಗವಾಗಿ ಏರಿ ಕೆಲವು ವರ್ಷಗಳ ನಂತರ ಸಂಪೂರ್ಣವಾಗಿ ಕುಸಿಯಿತು.
ಈ ಹಿಂದೆ ಮ್ಯಾಗಜಿನ್ ಕವರ್ಗಾಗಿ ಅಪ್ಪನಿಗೆ ಮುತ್ತಿಟ್ಟ ಕಾರಣ, ಕೆಲವೊಮ್ಮೆ ಬೋಲ್ಡ್ ಲುಕ್ ನಿಂದಾಗಿ, ಚಿಕ್ಕಂದಿನಲ್ಲೇ ಕುಡಿತದ ಚಟದಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಗುರಿಯಾಗಿದ್ದರು. ಪೂಜಾ ಭಟ್ ತಮ್ಮ ವೃತ್ತಿ ಜೀವನದಲ್ಲಿ ಸೂಪರ್ಸ್ಟಾರ್ಗಳ ಜೊತೆಯೂ ಕೆಲಸ ಮಾಡಿದ್ದಾರೆ.
ಶಾರುಖ್ ಖಾನ್ ಅವರೊಂದಿಗೆ 'ಚಾಹಾತ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ರಾಹುಲ್ ರಾಯ್ ಮತ್ತು ಅಮೀರ್ ಖಾನ್ ಎದುರು ದಿಲ್ ಹೈ ಕಿ ಮಂಥಾ ನಹೀಂನಲ್ಲಿ ನಟಿಸಿದ್ದಾರೆ. ಜಿಸ್ಮ್ 2, ಕಜ್ರಾರೆ, ಹಾಲಿಡೇ, ಧೋಕಾ, ಪಾಪ್ ಮತ್ತು ಜಿಸ್ಮ್ 3 ನಂತಹ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.