In Pics: Anurag Kashyap ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ Payal Ghosh ಯಾರು?

ಇತ್ತೀಚೆಗಷ್ಟೇ ಪಾಯಲ್ ಘೋಷ್ ಖ್ಯಾತ ಬಾಲಿವುಡ್ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದಾಳೆ. ಬಳಿಕ ಪಾಯಲ್ ಇದೀಗ ಭಾರಿ ಹೆಡ್ಲೈನ್ ಸೃಷ್ಟಿಸಿದ್ದಾಳೆ. 

Sep 20, 2020, 04:15 PM IST

ನವದೆಹಲಿ: ಇತ್ತೀಚೆಗಷ್ಟೇ ಪಾಯಲ್ ಘೋಷ್ ಖ್ಯಾತ ಬಾಲಿವುಡ್ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದಾಳೆ. ಬಳಿಕ ಪಾಯಲ್ ಇದೀಗ ಭಾರಿ ಹೆಡ್ಲೈನ್ ಸೃಷ್ಟಿಸಿದ್ದಾಳೆ. ಆಕೆಯ ಕುರಿತು ವಿಷಯ ಅರಿಯಬೇಕು ಎನ್ನುವಷ್ಟು ದೊಡ್ಡ ನಟಿ ಪಾಯಲ್ ಅಲ್ಲ. ಆದರೆ, ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬಳಿಕ #payalghosh ಹೆಸರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟ್ರೆಂಡ್ ಮಾಡಲಾರಂಭಿಸಿದೆ. ಹಾಗಾದರೆ ಬನ್ನಿ ಈ ಪಾಯಲ್ ಘೋಷ್ ಯಾರು ಎಂಬುದನ್ನು ಸ್ವಲ್ಪ ತಿಳಿಯೋಣ.

1/6

ಎಲ್ಲಕ್ಕಿಂತ ಮೊದಲು ಪಾಯಲ್ ಘೋಷ್ ಮಾಡಿರುವ ಆರೋಪದ ಕುರಿತು ಮಾತನಾಡೋಣ. ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಆರೋಪ ಮಾಡಿರುವ ಪಾಯಲ್ ಘೋಷ್, ಅನುರಾಗ್ ತಮ್ಮ ಮೇಲೆ ಬಲವಂತ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಪಾಯಲ್, 2014-15ರಲ್ಲಿ ತಾವು ಅನುರಾಗ್ ಅವರನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ. ಈ ವೇಳೆ ಸಾರಾಯಿ ಕುಡಿದ ಮತ್ತಿನಲ್ಲಿ ಅನುರಾಗ್ ತಮ್ಮ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪಾಯಲ್ ಆರೋಪಿಸಿದ್ದಾರೆ.

2/6

ಓರ್ವ ನಟಿಯಾಗಿ ಪಾಯಲ್ ವೃತ್ತಿಜೀವನದ ಕುರಿತು ಹೇಳುವುದಾದರೆ. ಹಿಂದಿ ಚಲನಚಿತ್ರಗಳ ಜೊತೆಗೆ ಪಾಯಲ್ ದಕ್ಷಿಣ ಹಾಗೂ ಪಂಜಾಬಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಪಾಯಲ್ ಪರೇಶ್ ರಾವಲ್ ಹಾಗೂ ರಿಷಿ ಕಪೂರ್ ರಂತಹ ದಿಗ್ಗಜ ನಟರ ಜೊತೆಗೂ ಕೂಡ ಕಾಣಿಸಿಕೊಂಡಿದ್ದಾರೆ.

3/6

2017 ರಲ್ಲಿ ತೆರೆಕಂಡ ಚಿತ್ರ ಪಟೇಲ್ ಕಿ ಪಂಜಾಬಿ ಶಾದಿ ಮೂಲಕ ಪಾಯಲ್ ಬಾಲಿವುಡ್ ಗೆ ಡೆಬ್ಯೂ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ರಿಷಿಕಪೂರ್ ಹಾಗೂ ಪರೇಶ್ ರಾವಲ್ ರಂತಹ ಖ್ಯಾತನಾಮರ ಜೊತೆಗೆ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಳು.

4/6

ಚಲನಚಿತ್ರಗಳ ಜೊತೆಗೆ ಪಾಯಲ್ ಕಿರುತೆರೆಯಲ್ಲಿ ಮೂಡಿಬಂದ ಪಾಪ್ಯುಲರ್ ದಾರಾವಾಹಿ 'ಸಾಥ್ ನಿಭಾನಾ ಸಾಥಿಯಾ'ನಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಅವಳು ರಾಧಿಕಾ ಹೆಸರಿನ ಪಾತ್ರ ನಿರ್ವಹಿಸಿದ್ದಳು.

5/6

ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಭಾರಿ ಸಕ್ರೀಯಳಾಗಿರುವ ಪಾಯಲ್ ಘೋಷ್ ಆಗಾಗ ತನ್ನ ಬೋಲ್ಡ್ ಭಾವಚಿತ್ರಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾಳೆ.  ಇಂಗ್ಲಿಷ್ ಟೆಲಿಫಿಲ್ಮ್ Sharpes Peril ಮೂಲಕ ತನ್ನ 17 ನೆ ವಯಸ್ಸಿನಲ್ಲಿ ಪಾಯಲ್ ನಟನಾ ವೃತ್ತಿ ಆರಂಭಿಸಿದ್ದಾಳೆ.

6/6

ಪಾಯಲ್ ಒಂದು ಕೆನಡಿಯನ್ ಫಿಲ್ಮ್ ನಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾಳೆ. ತನ್ನ ನೆರೆಹೊರೆಯ ಕೆಲಸಗಾರನ ಪ್ರೀತಿಯಲ್ಲಿ ಬೀಳುವ ಓರ್ವ ಸ್ಕೂಲ್ ಗರ್ಲ್ ಪಾತ್ರದಲ್ಲಿ ಪಾಯಲ್ ಕಾಣಿಸಿಕೊಂಡಿದ್ದಳು.