ವೇತನ ಮತ್ತು ಸವಲತ್ತಿನ ವಿಚಾರದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ನನ್ನೂ ಮೀರಿಸುತ್ತಾರೆ ಅಂಬಾನಿ ಮನೆಯ ಅಡುಗೆ ಭಟ್ಟ! ಸಿಂಪಲ್ ಅಡುಗೆಗೆ ಇಷ್ಟೊಂದು ಸ್ಯಾಲರಿ !

ಅಂಬಾನಿ ಕುಟುಂಬ ಎಂದ ಕೂಡಲೇ ಅವರ ಜೀವನಶೈಲಿ ಕಣ್ಣ ಮುಂದೆ ಹಾದು ಹೋಗುತ್ತದೆ. ವಿಶ್ವದ ಶ್ರೀಮಂತ ಪರಿವಾರದಲ್ಲಿ ತಯಾರಾಗುವ ಊಟ ಮಾತ್ರ ತುಂಬಾ ಸಿಂಪಲ್. ಆದರೆ ಅಡುಗೆ ಭಟ್ಟನಿಗೆ ನೀಡುವ ವೇತನ ಬಹಳ ದೊಡ್ಡದು. 
 

ಮುಂಬಯಿ : ಮುಖೇಶ್ ಅಂಬಾನಿ ಭಾರತದ ಟಾಪ್ 3 ಶ್ರೀಮಂತರಲ್ಲಿ ಒಬ್ಬರು. ಅವರು ಮುಂಬೈನ ಬಹುಮಹಡಿ ಕಟ್ಟಡ ಆಂಟಿಲಿಯಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.ಈ ಕಟ್ಟಡದಲ್ಲಿ ಹೆಲಿಪ್ಯಾಡ್, ಮಿನಿ ಡಿಸ್ಪೆನ್ಸರಿ, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ಸೌಕರ್ಯಗಳಿವೆ.ಇತ್ತೀಚೆಗಷ್ಟೇ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಂಭ್ರಮ ಸಡಗರದಿಂದ ನಡೆದಿದ್ದು, ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ .

1 /6

ದೇಶದ ಅತ್ಯಂತ ಶ್ರೀಮಂತ ಕುಟುಂಬವಾಗಿರುವುದರಿಂದ ಅಂಬಾನಿ ಕುಟುಂಬದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಎಲ್ಲರಲ್ಲೂ ಇರುವುದು ಸಹಜ.ಸಾಮಾಜಿಕ ಜಾಲತಾಣಗಳಲ್ಲಿಇವರ ಬಗ್ಗೆ ಏನೇ ಮಾಹಿತಿ ಬಂದರೂ ಜನ ಅದನ್ನು ಕುತೂಹಲದಿಂದ ತಿಳಿದುಕೊಳ್ಳುತ್ತಾರೆ.

2 /6

ಅಂಬಾನಿ ಕುಟುಂಬವೆಂದರೆ ಕೋಟ್ಯಾಧಪತಿಗಳು ಎನ್ನುವುದನ್ನು ಒತ್ತಿ ಹೇಳಬೇಕಾಗಿಲ್ಲ.ಅವರ ಜೀವನಶೈಲಿ ಕೂಡ ತುಂಬಾ ಐಷಾರಾಮಿಯಾಗಿದೆ. ಕಾರಿನಿಂದ ಹಿಡಿದು ಬಟ್ಟೆ, ಮೊಬೈಲ್, ಹೆಲಿಕಾಪ್ಟರ್, ವಿಮಾನ ಎಲ್ಲವೂ ಐಷಾರಾಮಿ.ಆದರೆ ಆಹಾರದ ವಿಷಯಕ್ಕೆ ಬಂದಾಗ ಮಾತ್ರ ಇವರದ್ದು ಬಲು ಸರಳ ಊಟ.

3 /6

ಅಂಬಾನಿ ಕುಟುಂಬದಲ್ಲಿ ಗುಜರಾತಿ ಸಸ್ಯಾಹಾರಿ ಥಾಲಿಗೆ ಹೆಚ್ಚು ಪ್ರಾಶಸ್ತ್ಯವಿದೆ. ಮುಕೇಶ್ ಅಂಬಾನಿ ಸ್ವತಃ ದಾಲ್,ಅನ್ನ, ಪಲ್ಯ, ಚಪಾತಿ ಮತ್ತು ಸಲಾಡ್ ತಿನ್ನಲು ಇಷ್ಟಪಡುತ್ತಾರೆ.ಇದರೊಂದಿಗೆ ಲಸ್ಸಿ ಅಥವಾ ಮಜ್ಜಿಗೆ ಕೂಡಾ ಬೇಕು.ಬೆಳಗಿನ ಉಪಾಹಾರದಲ್ಲಿ ಜ್ಯೂಸ್ ಕುಡಿಯಲು ಇಷ್ಟಪಡುತ್ತಾರೆ.

4 /6

ಅಂಬಾನಿ ಕುಟುಂಬದಲ್ಲಿ ಚಪಾತಿ ಮಾಡಲು ಮೆಷಿನ್ ಬಳಸಲಾಗುತ್ತದೆ.  ಅದಕ್ಕೆ 2 ಕಾರಣಗಳಿವೆ.ಒಂದು ಸ್ವಚ್ಛತೆ ಮತ್ತು ಇನ್ನೊಂದು ಕಾರಣವೆಂದರೆ ಆಂಟಿಲಿಯಾದಲ್ಲಿ 400 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಾರೆ. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ಚಪಾತಿ ಮಾಡಬೇಕಾಗುತ್ತದೆ.  

5 /6

ಇನ್ನು ಮನೆ ಕೆಲಸದವರ ಪ್ರತಿ ಮುಖೇಶ್ ಅಂಬಾನಿ ಅತ್ಯಂತ ಗೌರವದಿಂದ ನಡೆದುಕೊಳ್ಳುತ್ತಾರೆಯಂತೆ. ಹಾಗಾಗಿ ಪ್ರತಿಯೊಬ್ಬರ ಬಗ್ಗೆ ವಿಶೇಷ ಕಾಳಜಿ ವಹಿತ್ತಾರೆಯಂತೆ. 

6 /6

ಆಂಟಿಲಿಯಾದಲ್ಲಿ ಉಳಿದುಕೊಂಡಿರುವ ಎಲ್ಲಾ ಸಿಬ್ಬಂದಿಗೆ ಆಹಾರ ಮತ್ತು ಇತರ ಸೌಲಭ್ಯಗಳು ಸಂಪೂರ್ಣವಾಗಿ ಉಚಿತವಾಗಿದೆ.ತಮ್ಮ ಸಿಬ್ಬಂದಿಗೆ ಉತ್ತಮ ವೇತನ ನೀಡುತ್ತಾರೆ. ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಬಾಣಸಿಗರ ಸಂಬಳ ತಿಂಗಳಿಗೆ  2 ಲಕ್ಷ ರೂಪಾಯಿಯಂತೆ.