ʼಲಿಪ್‌ ಕಿಸ್‌ʼ ಮಾಡೋದು ತಪ್ಪಲ್ಲ.. ಆಗ ಅದು ಚನ್ನಾಗಿತ್ತು.. ಈಗ..! ಖ್ಯಾತ ಆ್ಯಂಕರ್ ಹೇಳಿಕೆ ವೈರಲ್‌

Anasuya Bharadwaj on Chinmayi sripada : ಸೋಷಿಯಲ್‌ ಮೀಡಿಯಾದಲ್ಲಿ ಆ್ಯಂಕರ್ ಅನಸೂಯಾ ಕ್ರೇಜ್ ಹೇಳತೀರದು. ಬೆಳ್ಳಿತೆರೆಯಲ್ಲಿ ಆ್ಯಂಕರ್ ಆಗಿ ಛಾಪು ಮೂಡಿಸಿದ್ದ ಸುಂದರಿ, ಸಧ್ಯ ಬಿಗ್‌ಸ್ಕ್ರೀನ್‌ ಮೇಲೆ ಮಿಂಚುತ್ತಿದ್ದಾರೆ.. ವಿಭಿನ್ನ ವಿಶೇಷ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.. ಸಧ್ಯ ಗಾಯಕಿ ಚಿನ್ಮಯಿ ಶ್ರೀಪಾದ ಅವರ ಹೇಳಿಕೆಗೆ ಅನಸೂಯ ಪ್ರತಿಕ್ರಿಯೆ ನೀಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..

1 /7

ಇತ್ತೀಚಿಗೆ ಗಾಯಕಿ ಚಿನ್ಮಯಿ ಶ್ರೀಪಾದ ಅನಸೂಯಾಗೆ ಸಂಬಂಧಿಸಿದ ಹಳೆಯ ವಿಡಿಯೋವೊಂದು ಹಂಚಿಕೊಂಡಿದ್ದರು. ಟಿವಿ ಶೋವೊಂದರಲ್ಲಿ ಏಳು ವರ್ಷದ ಬಾಲಕನಿಗೆ ಲಿಪ್ ಕಿಸ್ ನೀಡುವ ದೃಶ್ಯ ವಿಡಿಯೋದಲ್ಲಿತ್ತು. ಇದೀಗ ಇದು ವಿವಾದಕ್ಕೆ ಕಾರಣವಾಗಿದೆ. ಸಧ್ಯ ಸಿಂಗರ್‌ ಮಾತಿಗೆ ಅನಸೂಯಾ ಸಖತ್ ಕೌಂಟರ್ ಕೊಟ್ಟಿದ್ದಾರೆ.  

2 /7

ನಟಿಯಾಗಿ ಅನಸೂಯಾ ಸಿನಿಮಾದಿಂದ ಸಿನಿಮಾಗೆ ತಮ್ಮ ವಿಶಿಷ್ಟ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಹೊಸ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅನಸೂಯಾ ಸಾಕಷ್ಟು ವಿವಾದಗಳನ್ನೂ ಸಹ ಎದುರಿಸುತ್ತಿದ್ದಾರೆ..   

3 /7

ಅದರಲ್ಲೂ ಟ್ವಿಟ್ಟರ್‌ನಲ್ಲಿ ಕೆಲವು ವಿಚಾರಗಳ ಬಗ್ಗೆ ಅನಸೂಯಾ ಮಾಡಿರುವ ಕಾಮೆಂಟ್‌ಗಳು ವೈರಲ್ ಆಗಿವೆ. ವಿಜಯ್ ದೇವರಕೊಂಡ ಹಾಗೂ ಅನುಸೂಯ ನಡುವೆ ಆಗಾಗ ಕಾಮೆಂಟ್‌ ವಾರ ನಡೆಯುತ್ತಿರುತ್ತದೆ.. ಈ ಹಿನ್ನೆಲೆಯಲ್ಲಿ ಅನಸೂಯಾ ಅವರ ಹಳೆಯ ವಿಡಿಯೋ ಒಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  

4 /7

ಟಿವಿ ಶೋವೊಂದರಲ್ಲಿ ಭಾಗವಹಿಸಿದ್ದ ಅನಸೂಯಾ ಏಳು ವರ್ಷದ ಬಾಲಕನನ್ನು ಎತ್ತಿಕೊಂಡು ಕೆನ್ನೆ ಮತ್ತು ತುಟಿಗಳಿಗೆ ಮುತ್ತಿಟ್ಟರು. ಇದರೊಂದಿಗೆ ನೆಟ್ಟಿಗರು ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಅನಸೂಯಾ ಚಿಕ್ಕ ಮಕ್ಕಳಿಗೆ ಏನು ಕಲಿಸುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.    

5 /7

ಸ್ಟಾರ್ ಸಿಂಗರ್ ಚಿನ್ಮಯಿ ಕೂಡ ಈ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಸೂಯಾಳ ಹೆಸರನ್ನು ಹೇಳದೆ ಕಿಡಿಕಾರಿದ್ದರು. ಟಿವಿ ಕಾರ್ಯಕ್ರಮವೊಂದರಲ್ಲಿ ನಟಿ ಚಿಕ್ಕ ಮಗುವಿಗೆ ಚುಂಬಿಸುವುದನ್ನು ಸರಿಯಾದ ನಡೆಯಲ್ಲ.. ಇದು ತುಂಬಾ ಭಯಾನಕ ಅಂತ ಚಿನ್ಮಯಿ ಹೇಳಿದ್ದಾರೆ..    

6 /7

ಅಲ್ಲದೆ, ಇಂತಹ ಕಾರ್ಯಗಳು ಮಕ್ಕಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ಚಿಕ್ಕ ಮಕ್ಕಳಿಗೆ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶವನ್ನು ತಿಳಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಇಂತಹ ಕ್ರಮಗಳು ಸಮಾಜಕ್ಕೆ ಸರಿಯಾದ ಸಂದೇಶ ಸಾರುವುದಿಲ್ಲ ಎಂದು ಗಾಯಕಿ ಬರೆದುಕೊಂಡಿದ್ದರು.    

7 /7

ಸಧ್ಯ ಚಿನ್ಮಯಿ ಕಾಮೆಂಟ್‌ಗಳಿಗೆ ಅನಸೂಯಾ ಸಖತ್ ಕೌಂಟರ್ ಕೊಟ್ಟಿದ್ದಾರೆ. 'ಅದು ಹತ್ತು ವರ್ಷಗಳ ಹಿಂದೆ ಮಾಡಿದ ಕಾರ್ಯಕ್ರಮ. ಆಗ ಅದು ತಪ್ಪಲ್ಲ. ಆಗ ಇದ್ದ ಪರಿಸ್ಥಿತಿ ಈಗ ಇಲ್ಲ. ಈಗ ಮಾಡಿದ್ರೆ ಖಂಡಿತ ತಪ್ಪು. ಆ ವೀಡಿಯೋಗೆ ಪ್ರತಿಕ್ರಿಯಿಸಿದ ಗಾಯಕರು ನೋಡಿ ಪ್ರತಿಕ್ರಿಯಿಸಬೇಕು. ಅಂತ ಈ ಮಾತನ್ನ ಹೇಳಿದ್ರೆ ಅದು ತಪ್ಪು. ಈ ಸಮಯದಲ್ಲಿ ಇದು ಅನ್ವಯಿಸುವುದಿಲ್ಲ. ಎಂದು ಇನ್‌ಸ್ಟಾ ಲೈವ್‌ನಲ್ಲಿ ಅನಸೂಯಾ ಹೇಳಿದ್ದಾರೆ.