PHOTOS : ವೇದಾ ಕೃಷ್ಣಮೂರ್ತಿಗೆ ಮೊಣಕಾಲೂರಿ ಪ್ರಪೋಸ್ ಮಾಡಿದ ಅರ್ಜುನ್‌ ಹೊಯ್ಸಳ

Veda Krishnamurthy : ಆಲ್ ರೌಂಡರ್ ವೇದಾ ಕೃಷ್ಣಮೂರ್ತಿ ಅವರನ್ನು ಕರ್ನಾಟಕದ ಕ್ರಿಕೆಟಿಗ ಅರ್ಜುನ್ ಹೊಯ್ಸಳ ವರಿಸಲಿದ್ದಾರೆ.  

Veda Krishnamurthy : ಆಲ್ ರೌಂಡರ್ ವೇದಾ ಕೃಷ್ಣಮೂರ್ತಿ ಅವರನ್ನು ಕರ್ನಾಟಕದ ಕ್ರಿಕೆಟಿಗ ಅರ್ಜುನ್ ಹೊಯ್ಸಳ ವರಿಸಲಿದ್ದಾರೆ. ಅರ್ಜುನ್ ಹೊಯ್ಸಳ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಈ ವಿಶೇಷ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದಾರೆ.

1 /4

ಭಾರತೀಯ ಮಹಿಳಾ ಕ್ರಿಕೆಟರ್‌ ವೇದಾ ಕೃಷ್ಣಮೂರ್ತಿ ಮತ್ತು ಕರ್ನಾಟಕದ ಬ್ಯಾಟರ್ ಅರ್ಜುನ್ ಹೊಯ್ಸಳ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. 

2 /4

ಭಾನುವಾರ (ಸೆಪ್ಟೆಂಬರ್ 11) ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಕ್ರಿಕೆಟಿಗರು ಪರಸ್ಪರ ಮದುವೆಯಾಗಲು ಸಿದ್ಧರಾಗಿದ್ದಾರೆಂದು ಬಹಿರಂಗಪಡಿಸಿದ್ದಾರೆ.

3 /4

ಹೊಯ್ಸಳ ಅವರು ತಮ್ಮ Instagram ಖಾತೆಯಲ್ಲಿ ಕೃಷ್ಣಮೂರ್ತಿ ಅವರನ್ನು ಟ್ಯಾಗ್ ಮಾಡಿದ ಪೋಸ್ಟ್‌ನಲ್ಲಿ ಹೃದಯಸ್ಪರ್ಶಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

4 /4

ತನ್ನ ಪ್ರೀತಿಯ ಮನದನ್ನೆಗೆ ಕರ್ನಾಟಕ ಕ್ರಿಕೆಟರ್‌ ಅರ್ಜುನ್‌ ಹೊಯ್ಸಳ, ಬೆಟ್ಟದ ತುತ್ತ ತುದಿಯಲ್ಲಿ ಮೋಡಗಳ ಮಧ್ಯೆ ಮಂಡಿಯೂರಿ ಪ್ರಪೋಸ್‌ ಮಾಡಿದ್ದಾರೆ.