Astro Tips: ಸಾವಿನ ಮನೆಯಲ್ಲಿ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬಾರದು!

Garuda Purana Astro Tips: ಸಾವಿನ ಮನೆಯಲ್ಲಿ ಜೋರಾಗಿ ನಗುವುದು, ತಮಾಷೆಯ ಮಾತನಾಡುವುದು, ಜೋರಾಗಿ ಸಂಗೀತ ಅಥವಾ ಹಾಡು, ಅಬ್ಬರದ ಮ್ಯೂಸಿಕ್ ಹಾಕುವುದು ನಿಷಿದ್ಧವಾಗಿದೆ. ಆತ್ಮವನ್ನು ಮೌನವಾಗಿ ಮತ್ತು ಶಾಂತಿಯುತವಾಗಿ ಕಳುಹಿಸಿಕೊಡಬೇಕಾಗಿರುವುದು ನಮ್ಮೆಲ್ಲಾ ಕರ್ತವ್ಯವಾಗಿದೆ.

Garuda Purana: ಸಾವಾಗಿರುವ ಮನೆಯಲ್ಲಿ ಎಷ್ಟೇ ಹತ್ತಿರದವರಾದರೂ ಅಥವಾ ದೂರದವರಾದರೂ ಕೆಲವೊಂದು ಕೆಲಸಗಳನ್ನು ಮಾಡುವುದು ಹಿಂದೂ ಧರ್ಮದ ಶಾಸ್ತ್ರದ ಪ್ರಕಾರ ನಿಷಿದ್ಧವಾಗಿದೆ. ಅವು ಯಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಹಿಂದೂ ಧರ್ಮದ 18 ಪುರಾಣಗಳಲ್ಲಿ ಗರುಡ ಪುರಾಣಕ್ಕೆ ಪ್ರಮುಖ ಸ್ಥಾನವಿದೆ. ಗರುಡ ಪುರಾಣದಲ್ಲಿ ಸಾವಿನ ಮೊದಲು & ನಂತರದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಹೀಗಾಗಿಯೇ ಈ ಪುರಾಣವನ್ನು ಸತ್ತವರಿಗೆ ಪಠಿಸಲಾಗುತ್ತದೆ. ಸಾವಿನ ಮನೆಯಲ್ಲಷ್ಟೇ ಗರುಡ ಪುರಾಣ ಪಠಿಸಲಾಗುತ್ತದೆ. ಗರುಡ ಪುರಾಣದ ಪ್ರಕಾರ ಮನುಷ್ಯ ಮರಣ ಹೊಂದಿದ ನಂತರ ಆತನ ಪಾಪಗಳಿಗೆ ಅನುಗುಣವಾಗಿ ಶಿಕ್ಷೆ ನೀಡಲಾಗುತ್ತದಂತೆ.

2 /5

ಸಾವು ಎನ್ನುವುದು ಒಂದು ರೀತಿಯ ಶೂನ್ಯತೆಯ ಭಾವ. ಯಾರೋ ಒಬ್ಬರನ್ನು ದೈಹಿಕವಾಗಿ ಕಳೆದುಕೊಳ್ಳುವುದು ಅವರನ್ನು ಅವಲಂಬಿಸಿದವರಿಗೆ ಮಾನಸಿಕವಾಗಿ ಅತೀವ ದುಃಖ ನೀಡುವ ವಿಚಾರ. ಇಂತಹ ಮನೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದು ನಿಷಿದ್ಧವಾಗಿದೆ.

3 /5

ಗರುಡ ಪುರಾಣದ ಪ್ರಕಾರ ಸಾವಿನ ಮನೆಯಲ್ಲಿ ಒಲೆ ಹಚ್ಚಬಾರದು. ಗರುಡ ಪುರಾಣದ ಪ್ರಕಾರ ಸಾವಿನ ಮನೆಯಲ್ಲಿ ಒಲೆ ಉರಿಸಿದರೆ ಆ ಆತ್ಮಕ್ಕೆ ಮುಕ್ತಿ ಸಿಗುವುದಿಲ್ಲ. ಅಂತ್ಯ ಸಂಸ್ಕಾರ ನಡೆಯುವ ಮೊದಲೇ ಒಲೆ ಉರಿಸಿದರೆ ಆ ಆತ್ಮವು ಲೌಕಿಕ ಮೋಹದಿಂದ ಮುಕ್ತವಾಗಿ ಪರಲೋಕ ಸೇರುವುದಿಲ್ಲವಂತೆ.

4 /5

ಅದೇ ರೀತಿ ಸಾವಿನ ಮನೆಯಲ್ಲಿ ಜೋರಾಗಿ ನಗುವುದು, ತಮಾಷೆಯ ಮಾತನಾಡುವುದು, ಜೋರಾಗಿ ಸಂಗೀತ ಅಥವಾ ಹಾಡು, ಅಬ್ಬರದ ಮ್ಯೂಸಿಕ್ ಹಾಕುವುದು ನಿಷಿದ್ಧವಾಗಿದೆ. ಆತ್ಮವನ್ನು ಮೌನವಾಗಿ & ಶಾಂತಿಯುತವಾಗಿ ಕಳುಹಿಸಿಕೊಡಬೇಕಾಗಿರುವುದು ನಮ್ಮೆಲ್ಲಾ ಕರ್ತವ್ಯವಾಗಿದೆ.

5 /5

ಗರುಡ ಪುರಾಣದ ಪ್ರಕಾರ ಸಾವು ಹತ್ತಿರದಲ್ಲಿದ್ದಾಗ ಸಾವನ್ನಪ್ಪಿರುವ ಹಿರಿಯರು ಕಾಡುತ್ತಾರಂತೆ. ಸಾಯುವ ವ್ಯಕ್ತಿಯ ಸುತ್ತಲೂ ಹಿಂದೆ ಇಹಲೋಕ ತ್ಯಜಿಸಿದ ಜನರ ನೆರಳುಗಳು ಸಹ ಅವರಿಗೆ ಕಾಣಿಸುತ್ತದೆ ಎನ್ನಲಾಗುತ್ತದೆ. ಒಂದು ರೀತಿಯಲ್ಲಿ ಹಿರಿಯರು ತನ್ನನ್ನು ಕರೆಯುತ್ತಿದ್ದಾರೆನ್ನುವ ಭಾವನೆ ಮೂಡುತ್ತದಂತೆ.