One Rupee Coin: ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ, ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿ ಮನೆಯ ಮೇಲೆ ಪ್ರಭಾವ ಬೀರುತ್ತಿದ್ದರೆ, ಅದರಲ್ಲೂ ಹೆಚ್ಚಾಗಿ ಮಕ್ಕಳ ಮೇಲೆ ಪ್ರಭಾವ ಬೀರುತ್ತಿದ್ದರೆ ಕೇವಲ ಒಂದೇ 1 ರೂ. ನಾಣ್ಯದಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
One Rupee Coin: ಒಂದು ರೂ. ನಾಣ್ಯಕ್ಕೆ ನಿಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ಇದೆ. ಈ 1 ರೂ. ನಾಣ್ಯದಿಂದ ಸಾಕಷ್ಟು ಲಾಭಗಳಿವೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ನಮ್ಮ ಶರೀರದ ಮಾನಸಿಕ, ಶಾರೀರಿಕ ಸಮಸ್ಯೆಗಳನ್ನು ಸಹ ಬಗೆಹರಿಸುತ್ತದೆ ಈ 1 ರೂ. ನಾಣ್ಯ. ಹಾಗಾದ್ರೆ ಈ 1 ರೂ.ನ ನಾಣ್ಯದಿಂದ ಏನೆಲ್ಲಾ ಲಾಭಗಳಿವೆ ಅನ್ನೋದನ್ನು ತಿಳಿದುಕೊಳ್ಳಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ, ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿ ಮನೆಯ ಮೇಲೆ ಪ್ರಭಾವ ಬೀರುತ್ತಿದ್ದರೆ, ಅದರಲ್ಲೂ ಹೆಚ್ಚಾಗಿ ಮಕ್ಕಳ ಮೇಲೆ ಪ್ರಭಾವ ಬೀರುತ್ತಿದ್ದರೆ ಕೇವಲ ಒಂದೇ 1 ರೂ. ನಾಣ್ಯದಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ಒಂದು ವೇಳೆ ಬೇರೆಯವರ ಕೆಟ್ಟ ದೃಷ್ಟಿ, ದುಷ್ಟ ದೃಷ್ಟಿ, ಆರೋಗ್ಯ ದೃಷ್ಟಿ ನಿಮ್ಮನ್ನು ಕಾಡುತ್ತಿದ್ದರೆ ರಾತ್ರಿ ಮಲಗುವಾಗ 1 ರೂ. ನಾಣ್ಯ ತೆಗೆದುಕೊಂಡು ಕಾಲಿನಿಂದ ತಲೆಯ ತನಕ ಹಾಗೂ ತಲೆಯಿಂದ ಕಾಲಿನ ತನಕ 7 ಬಾರಿ ನಿವಾಳಿಸಿ ಯಾರೂ ನೋಡದ ಹಾಗೆ 1 ರೂ. ನಾಣ್ಯವನ್ನು ಬಚ್ಚಿಡಬೇಕು.
ಈ ಕೆಲಸವನ್ನು ಮಾಡಬೇಕಾದರೆ ಯಾರೂ ಸಹ ನಿಮ್ಮನ್ನು ನೋಡಬಾರದು. ರಾತ್ರಿ ಕಳೆದ ನಂತರ ಮರುದಿನ ಹರಿಯುವ ನದಿಯಲ್ಲಿ ಅಥವಾ ಹರಿಯುವ ನೀರಿನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಆ 1 ರೂ. ನಾಣ್ಯವನ್ನು ತೇಲಿ ಬಿಡಬೇಕು.
ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ದುಷ್ಟಶಕ್ತಿಗಳ ಪ್ರಭಾವ ನಿವಾರಣೆಯಾಗುತ್ತದೆ. ಒಂದು ವೇಳೆ ಹರಿಯುವ ನದಿಯಲ್ಲಿ ಬಿಡಲು ಸಾಧ್ಯವಾಗದಿದ್ದರೆ, ಆಗ 1 ರೂ. ನಾಣ್ಯವನ್ನು ಯಾರು ಓಡಾಡದಿರುವ ಜಾಗದಲ್ಲಿ ಒಂದು ಗುಂಡಿ ತೆಗೆದು ನಾಣ್ಯವನ್ನು ಅಲ್ಲಿ ಹಾಕಿ ನಂತರ ಮಣ್ಣಿನಿಂದ ಮುಚ್ಚಬೇಕು.
ಈ ಕೆಲಸ ಮಾಡಬೇಕಾದರೆ ಯಾರ ಹತ್ತಿರವೂ ಕೆಲಸದ ಬಗ್ಗೆ ಮಾಹಿತಿ ಹಂಚಿಕೊಳ್ಳಬಾರದು. ಈ ಕೆಲಸ ಮಾಡಬೇಕಾದರೆ ಯಾರೂ ಕೂಡ ನೋಡಬಾರದು. ಈ ರೀತಿ ಮಾಡುವುದರಿಂದ ನಿಮಗಿರುವ ಎಲ್ಲಾ ಕಷ್ಟಗಳು ದೂರವಾಗುತ್ತದೆ ಮತ್ತು ನೀವು ಸುಖ-ಶಾಂತಿ ಹಾಗೂ ನೆಮ್ಮದಿಯಿಂದ ಜೀವನ ನಡೆಸಬಹುದು.