ವೃಷಭ ರಾಶಿಗೆ ಅಂಗಾರಕ.! ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ. ತಿಳಿಯಿರಿ ನಿಮ್ಮ ಯೋಗ.!

ಎಲ್ಲಾ ಗ್ರಹಗಳ ಸೇನಾಧಿಪತಿ ಮಂಗಳ (Mars) ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.  ಮಂಗಳ (Mangal) ಈಗ ಮೇಷ ರಾಶಿಯಲ್ಲಿದ್ದಾನೆ. ಆದರೆ, ಫೆ. 22ರಂದು ಆತ ವೃಷಭ (Tauras) ರಾಶಿ ಪ್ರವೇಶಿಸಲಿದ್ದಾನೆ.
 

ಬೆಂಗಳೂರು :  ಎಲ್ಲಾ ಗ್ರಹಗಳ ಸೇನಾಧಿಪತಿ ಮಂಗಳ (Mars) ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.  ಮಂಗಳ (Mangal) ಈಗ ಮೇಷ ರಾಶಿಯಲ್ಲಿದ್ದಾನೆ. ಆದರೆ, ಫೆ. 22ರಂದು ಆತ ವೃಷಭ (Tauras) ರಾಶಿ ಪ್ರವೇಶಿಸಲಿದ್ದಾನೆ. ಏಪ್ರಿಲ್ 13ರ ತನಕ ಇದೇ ರಾಶಿಯಲ್ಲಿರಲಿದ್ದಾನೆ ಅಂಗಾರಕ.  ಇದು ತುಂಬಾ ಮುಖ್ಯ. ಯಾಕೆಂದರೆ, ವೃಷಭ ರಾಶಿಯಲ್ಲಿ ಈಗಾಗಲೇ ರಾಹು ಕುಳಿತಿದ್ದಾನೆ. ರಾಹು (Rahu) ಮತ್ತು ಮಂಗಳ ಸೇರಿದಾಗ ಅಂಗಾರಕ ಯೋಗ ಸೃಷ್ಟಿಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಂಗಾರಕ ಯೋಗ (Angaraka Yoga)  ಒಳ್ಳೆಯದಲ್ಲ. ಇದರಿಂದ ಜಗಳ, ಕದನ, ವಿವಾದ, ಹಿಂಸೆ ಇಂಥ ಫಲಗಳೇ ಕಾಣಿಸಿಕೊಳ್ಳುತ್ತವೆ. ಅಂಗಾರಕನ ಈ ಪರಿವರ್ತನೆ 12 ರಾಶಿಗಳಲ್ಲಿ ಯಾವ ಫಲ ನೀಡುತ್ತದೆ ತಿಳಿಯಿರಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /12

ಮೇಷ (Aries) ರಾಶಿಯವರಿಗೆ ಭರ್ಜರಿ ದುಡ್ಡು ಕಾಸು :  ಇಲ್ಲಿಯವರೆಗೆ ನಿಂತಿದ್ದ ಕೆಲಸ ಸರಾಗವಾಗಿ ಮುಂದುವರಿಯುತ್ತದೆ. ಹೊಸ ಅವಕಾಶಗಳು ಸಿಗುತ್ತವೆ. ಉದ್ಯೋಗದಲ್ಲಿ ಪ್ರಗತಿ ಸಿಗುತ್ತದೆ. ದುಡ್ಡು ಕಾಸು ಭರ್ಜರಿಯಾಗಿ ಬರುತ್ತದೆ. ಆದರೆ ಕೋಪ ಮತ್ತು ಕೋಪದಿಂದ ಬರುವ ಮಾತು ಎರಡರ ಮೇಲೂ ನಿಯಂತ್ರಣ ಅತ್ಯವಶ್ಯಕ. ಹಠ ಮತ್ತು ಆವೇಶಕ್ಕೆ ಬಿದ್ದು ಯಾವ ಕೆಲಸವನ್ನೂ ಮಾಡಬೇಡಿ  

2 /12

ವೃಷಭ (Taurus) ರಾಶಿಯವರು ಆರೋಗ್ಯದ ಕಡೆ ಗಮನ ಇಡಬೇಕು :  ನಿಮ್ಮ ಆರೋಗ್ಯ ಮತ್ತು ಮಾನ ಸಮ್ಮಾನದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.  ಸಫಲತೆ ಬೇಕಾದರೆ ಸಾಕಷ್ಟು ಬೆವರು ಹರಿಸಬೇಕು. ಕ್ರೋಧ ಬಿಟ್ಟು ಬಿಡಲೇ ಬೇಕು. ವಿವಾದದಿಂದ ದೂರ ಇರಬೇಕು. ಅಧಿಕಾರಿಗಳೊಂದಿಗೆ ಮನಸ್ತಾಪ, ವಿವಾದ ಉಂಟಾಗಬಹುದು. ಎಚ್ಚರವಿರಿ.

3 /12

ಮಿಥುನ (Gemini) ರಾಶಿಯವರಿಗೆ ಸಿಕ್ಕಾಪಟ್ಟೆ ಖರ್ಚು : ಮಿಥುನ ರಾಶಿಯವರಿಗೆ ಇದು ಕಷ್ಟದ ಕಾಲ. ಮುಷ್ಟಿ ಬಿಗಿ ಹಿಡಿದುಕೊಳ್ಳಿ. ಯಾಕೆಂದರೆ ಸಿಕ್ಕಾಪಟ್ಟೆ ಖರ್ಚು ಒದಗಿ ಬರಲಿದೆ. ಹಣಕಾಸು ಸ್ಥಿತಿ ಕಷ್ಟಕರವಾಗಬಹುದು. ಸಾಲ ಕೊಡುವಾಗ ಮತ್ತು ಪಡೆಯುವಾಗ ಎಚ್ಚರವಿರಲಿ. ದೇಹಾರೋಗ್ಯ ಮತ್ತು ಡ್ರೈವಿಂಗ್ ವೇಳೆ ಎಚ್ಚರವಿರಿ.

4 /12

ಕರ್ಕ (Cancer) ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ : ನಿಮಗೆ ಖಂಡಿತಾ ಶುಭಯೋಗ. ಯಶಸ್ಸು ನಿಮ್ಮ ಬೆನ್ನ ಹಿಂದೆ ಇರುತ್ತದೆ. ಮಾನ ಸಮ್ಮಾನ ಹೆಚ್ಚುತ್ತದೆ. ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ. ಮನೆ ಖರೀದಿಸಬಹುದು. ಆಸ್ತಿ ಸಂಪಾದಿಸಬಹುದು. ವಿದ್ಯಾರ್ಥಿಗಳಿಗೂ ಇದು ಶುಭ ಸಮಯ..

5 /12

ಸಿಂಹ (Leo) ರಾಶಿಯವರಿಗೆ ಉನ್ನತಿ : ಸಿಂಹ ರಾಶಿಯವರಿಗೆ  ಉನ್ನತಿಯ ಯೋಗ ಇದೆ. ವ್ಯಾಪಾರ ಅಭಿವೃದ್ಧಿಯಾಗುತ್ತದೆ. ಜಮೀನು ತಕರಾರು ಬಗೆಹರಿಯುತ್ತದೆ.  ಯಾವುದೇ ಹೊಸ ಕಾರ್ಯ ಆರಂಭಿಸಲು ಸಕಾಲ. ಹೊಸ ಆಸ್ತಿ ಮನೆ ಖರೀದಿಸಲು ಸಕಾಲ. ಆದರೆ, ಮೈಮರೆವು ಒಳ್ಳೆಯದಲ್ಲ.

6 /12

ಕನ್ಯಾ (Virgo) ರಾಶಿಗೆ ಮಿಶ್ರ ಫಲ : ವಿದ್ಯಾರ್ಥಿಗಳಿಗೆ ಶುಭ ಸಮಯ. ವಿದೇಶದಲ್ಲಿ ನೌಕರಿ ಪಡೆಯಲು ಮಾಡಿದ ಪ್ರಯತ್ನ ಸಾರ್ಥಕವಾಗುತ್ತದೆ. ಸರ್ಕಾರಿ ಕೆಲಸ ಮುಂದೆ ಸಾಗುವುದಿಲ್ಲ. ಕೋಪ, ತಾಪದ ನಿರ್ಣಯಗಳಿಂದ ದೂರ ಇರಿ. ಸಂಯಮ ಅತೀ ಅಗತ್ಯ.  ಆರೋಗ್ಯ ಚೆನ್ನಾಗಿರುತ್ತದೆ.

7 /12

ತುಲಾ (Libra) ರಾಶಿಯವರು ಎಚ್ಚರದಿಂದಿರಿ : ಆರೋಗ್ಯದ ಮೇಲೆ ಗಮನ ಇಡಿ. ಜಗಳ, ಕದನ ವಿವಾದದಿಂದ ದೂರ ಇರಿ. ಪ್ರಯಾಣ ಮಾಡುವಾಗ ಎಚ್ಚರವಿರಲಿ. ಈ ಹೊತ್ತಿನಲ್ಲಿ ನಿಮ್ಮ ಜೀವನದಲ್ಲಿ ಬರುವ ವ್ಯಕ್ತಿಗಳು ನಿಮಗೆ ಅಶುಭ ಫಲ ನೀಡಬಹುದು. ಆರ್ಥಿಕ ಕಷ್ಟ ಕೂಡಾ ಎದುರಾಗಬಹುದು.

8 /12

ವಶ್ಚಿಕ (Scorpio) ರಾಶಿಯವರು ಆರೋಗ್ಯದ ಕಡೆ ಗಮನ ಇಡಿ: ವಶ್ಚಿಕ ರಾಶಿಯ ದೇವರು ಮಂಗಳ. ದಾಂಪತ್ಯ ಹದಗೆಡಬಹುದು. ಸಂಬಂಧ ಬಿಗಡಾಯಿಸಬಹುದು. ಆರೋಗ್ಯ ಹಾಳಾಗಬಹುದು.  ಹೊಸ ಬಿಸಿನೆಸ್ ಶುರುಮಾಡಲು ಸಕಾಲ. ನೌಕರಿ ಜೀವನ ಸಮತೋಲನದಲ್ಲಿರಲಿ. ನೌಕರಿ ಬದಲಾಯಿಸುವ ಯೋಚನೆ ಸದ್ಯಕ್ಕೆ ಬೇಡ.

9 /12

 ಧನು (Sagittarius) ರಾಶಿಗಿದು ಗುಡ್ ಟೈಂ : ನಿಮ್ಮ ರಹಸ್ಯ ಶತ್ರುಗಳಿಂದಲೂ ನಿಮಗೆ ಗೆಲುವು ಸಿಗುತ್ತದೆ. ಏನೂ ಪ್ರಯತ್ನ ಪಡದೆಯೂ ಕೆಲವೊಂದು ಲಾಭ ಆಗಲಿದೆ. ನಿಮ್ಮ ಯಾತ್ರೆಯ ಉದೇಶ ಈಡೇರುತ್ತದೆ. ವಿದ್ಯಾರ್ಥಿಗಳು ಕಷ್ಟ ಪಡಬೇಕು. ಮೇಲಾಧಿಕಾರಿಗಳು ಪ್ರಸನ್ನರಾಗುತ್ತಾರೆ. ಜಮೀನು ತಕರಾರು ಪರಿಹಾರವಾಗುತ್ತದೆ.   

10 /12

ಮಕರ (Capricorn) ರಾಶಿಗೆ ಮಿಶ್ರ ಫಲ : ವಿದ್ಯಾರ್ಥಿಗಳಿಗೆ ಗುಡ್ ಟೈಂ. ಆರೋಗ್ಯದ ಕಡೆ ಗಮನ ಇಡಬೇಕು.  ವಿದೇಶ ಯಾತ್ರೆಯ ಯೋಗ ಇದೆ. ಅವಸರದಲ್ಲಿ ಯಾವ ನಿರ್ಧಾರವೂ ಬೇಡ. ಹೊಸ ಬಿಸಿನೆಸ್ ಶುರು ಮಾಡಿ. ನೌಕರಿ ಬದಲಾಯಿಸಬೇಡಿ. ದಾಂಪತ್ಯ ಜೀವನದಲ್ಲಿ ಏರಿಳಿತವಿದೆ.    

11 /12

ಕುಂಭ (Aquarius) ರಾಶಿಯವರ ಟೆನ್ಶನ್ ಹೆಚ್ಚಾಗಲಿದೆ : ಟೆನ್ಶನ್ ಹೆಚ್ಚುತ್ತದೆ. ಆರೋಗ್ಯದ ಕಡೆ ಜಾಗ್ರತೆ. ಹಾನಿ ಆಗುತ್ತದೆ. ಷಡ್ಯಂತ್ರಕ್ಕೆ ಬಲಿಯಾಗುತ್ತೀರಿ.  ಆದರೆ, ಆರ್ಥಿಕ ಸಮಸ್ಯೆ ಬಗೆ ಹರಿಯುತ್ತದೆ. ಮನೆ ಖರೀದಿಸಬಹುದು.

12 /12

 ಮೀನ ರಾಶಿಗೆ (Pisces) ಆನಂದಮಯ ಸಮಯ : ಇದೊಂದು ರೀತಿಯ ವರದಾನದ ಸಮಯ. ಆರೋಗ್ಯ, ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಕಾಲ. ಸರ್ಕಾರಿ ನೌಕರಿ ಯೋಗ ಇದೆ. ಆದರೆ, ಪ್ರಯತ್ನ ಪಡಬೇಕು.  ಕೊಡು-ಕೊಳ್ಳುವ ವಿಚಾರದಲ್ಲಿ ಮೋಸ ಹೋಗಬೇಡಿ..