KL Rahul-Athiya Shetty: ಅರಶಿನ ಶಾಸ್ತ್ರದ ಫೋಟೋ ಶೇರ್ ಮಾಡಿದ ಅಥಿಯಾ ಶೆಟ್ಟಿ: ಅಬ್ಬಬ್ಬಾ… ಎಷ್ಟೊಂದು ಮುದ್ದಾಗಿದೆ ಈ ಜೋಡಿ

KL Rahul-Athiya Shetty Haldi Photos: ಜನವರಿ 23ರಂದು ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮದುವೆ ಕಾರ್ಯಕ್ರಮದ ಭಾಗವಾದ ಅರಶಿನ ಶಾಸ್ತ್ರದ ಫೋಟೋಗಳನ್ನು ಅಥಿಯಾ ಶೆಟ್ಟಿ ಶೇರ್ ಮಾಡಿಕೊಂಡಿದ್ದು, ಸಖತ್ ಸುದ್ದಿಯಾಗಿದೆ.

1 /6

ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಜನವರಿ ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್ ನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

2 /6

ವಿವಾಹ ಸಮಾರಂಭದ ಫೋಟೋಗಳನ್ನು ಜೋಡಿ ಈಗಾಗಲೇ ಶೇರ್ ಮಾಡಿಕೊಂಡಿದೆ. ಇದೀಗ ಅರಶಿನ ಶಾಸ್ತ್ರದ ಫೋಟೊಗಳನ್ನು ಇಲ್ಲಿ ಕಾಣಬಹುದು.

3 /6

ಅರಿಶಿನ ಮತ್ತು ಶ್ರೀಗಂಧ ಮಿಶ್ರಿತ ಪೇಸ್ಟ್‌ ನ್ನು ಮುದ್ದಾದ ಜೋಡಿ ಒಬ್ಬರಿಗೊಬ್ಬರು ಹಚ್ಚಿಕೊಂಡು ಸಂತಸದಲ್ಲಿ ತೇಲಾಡಿದ್ದಾರೆ.

4 /6

ಮತ್ತೊಂದು ಫೋಟೋದಲ್ಲಿ ಅಥಿಯಾ ತಮ್ಮ ತನ್ನ ಸಹೋದರ ಅಹಾನ್ ಶೆಟ್ಟಿಯ ಮುಖದ ಮೇಲೆ ಅರಿಶಿನ ಪೇಸ್ಟ್ ಅನ್ನು ಹಾಕುತ್ತಿರುವುದನ್ನು ಕಾಣಬಹುದು.

5 /6

ಇನ್ನೊಂದು ಫೋಟೋದಲ್ಲಿ ಅಥಿಯಾ ಶೆಟ್ಟಿ ಸೂರ್ಯನ ಬೆಳಕಿಗೆ ವಿರುದ್ಧವಾಗಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

6 /6

ಐಪಿಎಲ್ ಸೀಸನ್ ನಂತರ ಜೋಡಿಯ ಮದುವೆಯ ಆರತಕ್ಷತೆ ನಡೆಯಲಿದೆ ಎಂದು ಸುನೀಲ್ ಬಹಿರಂಗಪಡಿಸಿದ್ದಾರೆ