ಸೌಂದರ್ಯ ಕಾಪಾಡಿಕೊಳ್ಳಬೇಕಾದರೆ ಈ ಆಹಾರಗಳಿಂದ ದೂರವಿರಿ


ಬೆಂಗಳೂರು : ಪ್ರತಿಯೊಬ್ಬರೂ ತಾವು ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾರೆ. ಆದರೆ, ನಮ್ಮ ದೈನಂದಿನ ಜೀವನದಲ್ಲಿ, ನಮ್ಮ ಚರ್ಮಕ್ಕೆ ತುಂಬಾ ಹಾನಿಕಾರಕವಾದ ಆಹಾರವನ್ನು ನಾವು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತೇವೆ. ಇಂದಿನಿಂದಲೇ ಈ ಆಹಾರಗಳಿಗೆ ಕಡಿವಾಣ ಹಾಕಿ... ಸುಂದರ ತ್ವಚೆ ನಿಮ್ಮದಾಗಬೇಕಾದರೆ ಕೆಲವೊಂದು  ಆಹಾರಗಳಿಂದ ದೂರವಿರಬೇಕು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ದೇಹದಲ್ಲಿನ ಕೆಫೀನ್ ಪ್ರಮಾಣವು ನಿಮ್ಮ ಚರ್ಮವನ್ನು ಒಣಗಿಸುತ್ತದೆ. ಹಾಗಾಗಿ ಚಿಕ್ಕವಯಸ್ಸಿನಲ್ಲೇ ವಯಸ್ಸಾದವರಂತೆ ಕಾಣುತ್ತದೆ. ಇದನ್ನು ತಪ್ಪಿಸಲು, ಇಂದೇ ಕೆಫೀನ್ ಸೇವನೆಯನ್ನು ಮಿತಗೊಳಿಸಿ.

2 /5

ಹೆಚ್ಚುವರಿ ಉಪ್ಪು ಸೇವನೆಯಿಂದ ಚರ್ಮದ ಕಾಂತಿಯೂ ಕಡಿಮೆಯಾಗುತ್ತದೆ. ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಹೆಚ್ಚು ಉಪ್ಪನ್ನು ತಿನ್ನುವುದನ್ನು ತಪ್ಪಿಸಿ. 

3 /5

ಯಾವುದೇ ಸಂದರ್ಭದಲ್ಲಿಯೂ ಆಲ್ಕೊಹಾಲ್ ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲ. ಇದನ್ನು ಸೇವಿಸುವುದರಿಂದ ಉಂಟಾಗುವ ನಿರ್ಜಲೀಕರಣವು ಚರ್ಮದ ಮೇಲೆ ಪರಿಣಾಮ ಬೀರುತ್ತದೆ.

4 /5

ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಉತ್ಪನ್ನಗಳು ನಿಮ್ಮ ದೇಹಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತವೆ. ಅಂತಹ ಉತ್ಪನ್ನಗಳನ್ನು ತಿನ್ನುವುದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಸಮತೋಲನವನ್ನು ಹಾಳುಮಾಡುತ್ತದೆ. ಮೊಡವೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ಹೆಚ್ಚು ಸಕ್ಕರೆ, ಜೇನುತುಪ್ಪ ಅಥವಾ ಬೆಲ್ಲವನ್ನು ತಿನ್ನಲು  ಹೋಗಬೇಡಿ. 

5 /5

ಮೈದಾದಿಂದ ಮಾಡಿದ ಪದಾರ್ಥಗಳು ಉತ್ತಮ ರುಚಿಯನ್ನು ಹೊಂದಿರುತ್ತದೆ. ಆದರೆ ಈ ಆಹಾರಗಳನ್ನು ತಿನ್ನುವುದರಿಂದ ಚರ್ಮಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ.  ಬದಲಿಗೆ ಇದು ಹಾನಿಕಾರಕ. ಮೈದಾ ತಿನ್ನುವುದು ಚರ್ಮಕ್ಕೆ ಮಾತ್ರವಲ್ಲದೆ ನಿಮ್ಮ ಆರೋಗ್ಯಕ್ಕೂ ಹಾನಿಕಾರಕ.  ( ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು  ಆಧರಿಸಿದೆ. ಇವುಗಳನ್ನು ಅಳವಡಿಸುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ .  Zee ಮೀಡಿಯಾ ಇದನ್ನು ದೃಢಪಡಿಸುವುದಿಲ್ಲ  )