ಚಿನ್ನದ ಪಕದ ತರುವಂತೆ ಪಿ.ವಿ.ಸಿಂಧುಗೆ ಆಲ್ ದಿ ಬೆಸ್ಟ್ ಹೇಳಿದ್ದ ಪುಟ್ಟ ಸೋದರಳಿಯ…

ಕ್ಯೂಟ್ ಕ್ಯೂಟ್ ಸೋದರಳಿಯನ ಮೇಲೆ ಬ್ಯಾಡ್ಮಿಂಟನ್ ಕ್ವೀನ್ ಪಿ.ವಿ.ಸಿಂಧು ಪ್ರೀತಿ.

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. 2016ರ ರಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದ ಸಿಂಧು ಟೋಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನದ ಪಕದ ಗೆಲ್ಲುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ತೈವಾನ್ ಆಟಗಾರ್ತಿ ಎದುರು ಸೋಲು ಕಂಡರು. ಆ ಮೂಲಕ ಚಿನ್ನದ ಪದಕದ ನಿರೀಕ್ಷೆ ಇಟ್ಟುಕೊಂಡಿದ್ದ ಕೋಟ್ಯಂತರ ಭಾರತಿಯರಿಗೆ ನಿರಾಸೆಯುಂಟಾಯಿತು. ಭಾನುವಾರ ನಡೆದ ಮಹತ್ವದ ಪಂದ್ಯದಲ್ಲಿ ಚೀನಾ ಆಟಗಾರ್ತಿ ವಿರುದ್ಧ 21-13, 21-15ರ ನೆರ ಸೇಟ್ ಗಳಿಂದ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಸಿಂಧು ಒಲಂಪಿಕ್ಸ್ ನಲ್ಲಿ ಸತತ 2ನೇ ಪದಕ ಸಾಧನೆ ಮಾಡಿದ್ದಾರೆ. ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳುವ ಮುನ್ನ ತಮ್ಮ ಕುಟುಂಬ ಸದಸ್ಯರೊಂದಿಗೆ ಪಿ.ವಿ.ಸಿಂಧು ಕಳೆದ ಕ್ಷಣಗಳ ಫೋಟೋಗಳು ಇಲ್ಲಿವೆ ನೋಡಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಟೋಕಿಯೊ ಒಲಂಪಿಕ್ಸ್ ಗೆ ತೆರಳುತ್ತಿದ್ದ ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ.ಸಿಂಧು ಅವರಿಗೆ ಸೋದರಳಿಯ ಆರ್ಯನ್ ಶುಭ ಹಾರೈಸಿದ್ದರು. ಈ ಬಾರಿ ಚಿನ್ನದ ಪಕದ ಗೆದ್ದು ತರುವಂತೆ ಚಿಕ್ಕಮ್ಮನಿಗೆ ಆಲ್ ದಿ ಬೆಸ್ಟ್ ಅಂತಾ ಹೇಳಿದ್ದರು. ಭಾನುವಾರ ನಡೆದ ಪಂದ್ಯದಲ್ಲಿ ಚೀನಾದ ಆಟಗಾರ್ತಿಯನ್ನು ಸೋಲಿಸುವ ಮೂಲಕ ಸಿಂಧು ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. 

2 /6

ಪಿ.ವಿ.ಸಿಂಧು ತಮ್ಮ ಸೋದರಳಿಯನ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಟೋಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನದ ಪಕದದ ನಿರೀಕ್ಷೆಯಲ್ಲಿದ್ದ ಸಿಂಧುಗೆ ನಿರಾಸೆಯುಂಟಾಗಿದೆ.  

3 /6

ಪಿ.ವಿ.ಸಿಂಧು ತನ್ನ ಸೋದರಳಿಯನಲ್ಲಿ ಜೊತೆಗೆ ಅತ್ಯುತ್ತಮ ಕ್ಷಣಗಳನ್ನು ಕಳೆದಿದ್ದಾರೆ. ಈ ಫೋಟೋ ಇಬ್ಬರ ನಡುವಿನ ಬಾಂಧವ್ಯವನ್ನು ತೋರಿಸುತ್ತದೆ.

4 /6

ಇತ್ತೀಚೆಗಷ್ಟೇ ಪಿ.ವಿ.ಸಿಂಧು ಅವರ ಕ್ಯೂಟ್ ಕ್ಯೂಟ್ ಸೋದರಳಿಯನ ಹುಟ್ಟುಹಬ್ಬವನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಆಚರಿಸಲಾಯಿತು. ಸೋದರಳಿಯನ 2ನೇ ಹುಟ್ಟುಹಬ್ಬಂದು ಸಿಂಧು ಅತ್ಯಂತ ಖುಷಿಯಾಗಿದ್ದರು.  

5 /6

ಸೋದರಳಿಯನ ಹುಟ್ಟುಹಬ್ಬದ ಸಂಭ್ರದಲ್ಲಿ ಪಿ.ವಿ.ಸಿಂಧು ಕುಟುಂಬ ಸದಸ್ಯರೆಲ್ಲರೂ ಭಾಗಿಯಾಗಿದ್ದರು. ಕುಟುಂಬ ಸದಸ್ಯರೆಲ್ಲ ಸೇರಿ ಒಟ್ಟಿಗೆ ಸಂತೋಷದ ಕ್ಷಣಗಳನ್ನು ಕಳೆದಿದ್ದರು.

6 /6

‘ಲವ್ ಯು ಬೇಬಿ ಬೂ’ ಎಂದು ಪಿ.ವಿ.ಸಿಂಧು ತಮ್ಮ ಸೋದರಳಿಯನ ಹುಟ್ಟುಹಬ್ಬದ ಕೆಲ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು.