Bajaj Pulsar: ಹೊಸ ಲುಕ್‌ನಲ್ಲಿ ಬಿಡುಗಡೆಯಾದ ಪಲ್ಸರ್‌ನ ಹಳೆಯ ಮಾಡೆಲ್‌ಗಳು!

New Bajaj Pulsar N160: ಹೊಸ ನವೀಕೃತ ಪಲ್ಸರ್ 125 ಕಾರ್ಬನ್ ಫೈಬರ್ ಸಿಂಗಲ್ ಸೀಟ್ ಬೆಲೆಯು 92,883 ರೂ.(ದೆಹಲಿಯ ಎಕ್ಸ್‌ ಶೂರೂಂ ಬೆಲೆ), ಹೊಸ ನವೀಕೃತ ಪಲ್ಸರ್ 150 ಸಿಂಗಲ್ ಡಿಸ್ಕ್ ಬೆಲೆಯು 1,13,696 ರೂ. & ಹೊಸ ಪಲ್ಸರ್ 220 ಬೆಲೆಯು 1,41,024 ರೂ. ಇದೆ.  

New Bajaj Pulsar N160: ಬಜಾಜ್ ಆಟೋ ದೇಶದ ಜನಪ್ರಿಯ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಕಂಪನಿಯಾಗಿದೆ. ಇದು ಹೊಸ ವೈಶಿಷ್ಟ್ಯಗಳೊಂದಿಗೆ ಪಲ್ಸರ್ N160ನ ಹೊಸ ವೇರಿಯೆಂಟ್ ಪರಿಚಯಿಸಿದೆ. ಇದರ ಜೊತೆಗೆ ಪಲ್ಸರ್ 125, 150 ಮತ್ತು 220F ಮಾಡಲ್‌ಗಳನ್ನು ಹೊಸ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಅಪ್‌ಡೇಟ್‌ ಮಾಡಿ ಮಾರುಕಟ್ಟೆಗೆ ಬಿಡುಡೆ ಮಾಡಿದೆ. ಈ ಮಾದರಿಗಳು ಇದೀ ವರ್ಧಿತ ಬ್ಲೂಟೂತ್-ಸಕ್ರಿಯ ಸಂಪರ್ಕವನ್ನು ಹೊಂದಿವೆ. ಪಲ್ಸರ್ N160 ಅದರ ಬ್ಲೂಟೂತ್-ಸಕ್ರಿಯಗೊಳಿಸಿದ ಇನ್‌ಸ್ಟ್ರೂಮೆಂಟ್ ಕನ್ಸೋಲ್‌ಗೆ ಸಂಯೋಜಿತವಾಗಿ ಟರ್ನ್‌ ಬೈ ಟರ್ನ್ ನ್ಯಾವಿಗೇಷನ್ ಜೊತೆಗೆ ಬರಲಿದ್ದು, ಸಂಪೂರ್ಣ ಕನೆಕ್ಟಿವಿಟಿ ಸೂಟ್ ಹೊಂದಿದೆ. ಇದರ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಹೊಸ ಪಲ್ಸರ್ N160 ಸ್ಟೈಲಿಶ್, ಸ್ಪೋರ್ಟಿ ಬೈಕ್ ಹೊಸ ಡಿಸೈನ್‌ನೊಂದಿಗೆ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ. ನಿಖರ ನಿರ್ವಹಣೆ ಮತ್ತು ಸಾಟಿಯಿಲ್ಲದ ಸವಾರಿ ಅನುಭವಕ್ಕೆ ಈ ಹೊಸ ಪಲ್ಸರ್ N160 ಶಾಂಪೇನ್ ಗೋಲ್ಡ್ 33mm USD ಫೋರ್ಕ್‌ಗಳನ್ನು ಹೊಂದಿದೆ. ಇದು ರೈನ್, ರೋಡ್ ಮತ್ತು ಆಫ್, ರೋಡ್ ರೈಡ್ ಮೋಡ್‌ಗಳನ್ನು ಹೊಂದಿದೆ. ವಿವಿಧ ರೀತಿಯ ರಸ್ತೆ ಪರಿಸ್ಥಿತಿಗಳಲ್ಲಿ ಸವಾರರಿಗೆ ಗರಿಷ್ಠ ನಿಯಂತ್ರಣ ನೀಡಲು ಪ್ರತಿ ರೈಡ್ ಮೋಡ್‌ನಲ್ಲಿ ABS ಮಟ್ಟವನ್ನು ಹೊಂದುವಂತೆ ಮಾಡಲಾಗಿದೆ.

2 /5

ಪ್ರಮಾಣಿತವಾಗಿ ರೋಡ್ ಮೋಡ್ ಹೊಂದಿಸಲಾಗಿದ್ದು, ಇದು ನಗರ ಅಥವಾ ಹೆದ್ದಾರಿಯಲ್ಲಿ ನಿಯಮಿತ ಸವಾರಿಗೆ ಸೂಕ್ತವಾಗಿರುತ್ತದೆ. ತೇವಾಂಶದ ರಸ್ತೆಗಳಿಗೆ ರೈನ್‌ಮೋಡ್ ಸೂಕ್ತವಾಗಿದ್ದು, ಜಾರು ಮೇಲ್ಮೈಗಳಲ್ಲಿ ಹೆಚ್ಚು ಆತ್ಮವಿಶ್ವಾಸ ಮತ್ತು ಸ್ಥಿರವಾದ ಬ್ರೇಕಿಂಗ್ ಅನ್ನು ಖಾತ್ರಿಗೊಳಿಸುತ್ತದೆ. ಆಫ್ ರೋಡ್ ಮೋಡ್ ಭೂಪ್ರದೇಶ ಮತ್ತು ರಸ್ತೆ ಪರಿಸ್ಥಿತಿಗಳಿಗೆ ಸೂಕ್ತವಾಗಿದ್ದು, ಒಟ್ಟಾರೆ ನಿರ್ವಹಣೆ ಅನುಭವಕ್ಕೆ ಉತ್ತಮ ನಿಯಂತ್ರಣ ನೀಡುತ್ತದೆ.

3 /5

ಬಜಾಜ್‌ನ ಹೊಸ ಪಲ್ಸರ್ N160 ರೂಪಾಂತರವು 1,39,693 ರೂ. (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇದು 164.82cc ಆಯಿಲ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, 11.7 kW(16PS @8750rpm ವರೆಗೆ ಪವರ್ ನೀಡಲು ಟ್ಯೂನ್ ಮಾಡಲಾಗಿದೆ. ಬ್ರೇಕಿಂಗ್ ವಿಷಯಕ್ಕೆ ಬಂದರೆ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್‌ ಜೊತೆಗೆ ಡ್ಯುಯಲ್-ಚಾನೆಲ್ ABS ನೀಡಲಾಗಿದೆ.

4 /5

ಪಲ್ಸರ್ 125ರ ಕಾರ್ಬನ್ ಫೈಬರ್ ಸಿಂಗಲ್ ಮತ್ತು ಸ್ಪ್ಲಿಟ್ ಸೀಟ್ ರೂಪಾಂತರಗಳು ಈಗ ಸಂಪೂರ್ಣ ಡಿಜಿಟಲ್ ಬ್ಲೂಟೂತ್ ಕನ್ಸೋಲ್, USB ಚಾರ್ಜರ್ ಮತ್ತು ಹೊಸ ಗ್ರಾಫಿಕ್ಸ್‌ನೊಂದಿಗೆ ಬರುತ್ತವೆ. ಇದೇ ರೀತಿಯ ರೂಪಾಂತರದ ಆಯ್ಕೆಯು ಪಲ್ಸರ್ 150ನಲ್ಲಿಯೂ ಲಭ್ಯವಿದೆ. ವೈಶಿಷ್ಟ್ಯಗಳು ಮತ್ತು ರಿಫ್ರೆಶ್ ಮಾಡಿದ ಸ್ಟೈಲಿಂಗ್ 220Fಗೆ ಪ್ರಮಾಣಿತವಾಗಿದೆ.

5 /5

ಹೊಸ ನವೀಕೃತ ಪಲ್ಸರ್ 125 ಕಾರ್ಬನ್ ಫೈಬರ್ ಸಿಂಗಲ್ ಸೀಟ್ ಬೆಲೆಯು 92,883 ರೂ., ಹೊಸ ನವೀಕೃತ ಪಲ್ಸರ್ 150 ಸಿಂಗಲ್ ಡಿಸ್ಕ್ ಬೆಲೆಯು 1,13,696 ರೂ. & ಹೊಸ ಪಲ್ಸರ್ 220 ಬೆಲೆಯು 1,41,024 ರೂ. ಇದೆ. ಇವೆಲ್ಲವು ದೆಹಲಿಯ ಎಕ್ಸ್‌ ಶೂರೂಂ ಬೆಲೆಗಳಾಗಿವೆ.