ಎ.ಆರ್‌. ರೆಹಮಾನ್‌ ಡಿವೋರ್ಸ್‌ ನೀಡುತ್ತಿದ್ದಂತೆ ತನ್ನ ಗಂಡನಿಗೂ ವಿಚ್ಛೇದನ ನೀಡಿದ 29 ವರ್ಷದ ಮೋಹಿನಿ..! ಯಾರಿಕೆ..?

Mohini Dey divorce : ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರು ತಮ್ಮ ಪತ್ನಿ ಸಾಯಿರಾ ಬಾನು ಅವರಿಗೆ ವಿಚ್ಛೇದನದ ನೀಡಿದ್ದಾರೆ. ಈ ಸುದ್ದಿಯನ್ನು ಅವರ ಅಭಿಮಾನಿಗಳು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಡುವೆ ಮತ್ತೊಂದು ಆಘಾತಕಾರಿ ಸುದ್ದಿ ಬಹಿರಂಗವಾಗಿದೆ. ಎಆರ್ ರೆಹಮಾನ್ ಅವರ ತಂಡದ ಸದಸ್ಯೆ, ಬಾಸ್ ವಾದಕಿ ಮೋಹಿನಿ ಡೇ ಸಹ ತಮ್ಮ ಪತಿಯಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ.
 

1 /5

ಎಆರ್ ರೆಹಮಾನ್ ಡಿವೋರ್ಸ್‌ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದೆ. ಇದರ ನಡುವೆ ಅವರ ತಂಡದ ಸದಸ್ಯೆ, ಬಾಸ್ ವಾದಕಿ ಮೋಹಿನಿ ಡೇ ಸಹ ತಮ್ಮ ಪತಿ ಮಾರ್ಕ್ ಹಾರ್ಟ್ಸುಚ್ ಅವರಿಗೆ ವಿಚ್ಛೇದನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.. ಇದೀಗ ಈ ವಿಚಾರದ ಕುರಿತು ನೆಟ್ಟಿಗರು ಚರ್ಚೆ ಪ್ರಾರಂಭಿಸಿದ್ದಾರೆ..   

2 /5

ಹೌದು.. ಬಾಸ್ ವಾದಕ ಮೋಹಿನಿ ಡೇ ಡಿವೋರ್ಸ್‌ ನೀಡುವುದಾಗಿ ಹೇಳಿಕೊಂಡಿದ್ದಾರೆ. ಎಆರ್ ರೆಹಮಾನ್ ಮತ್ತು ಸಾಯಿರಾ ಬಾನು ಡಿವೋರ್ಸ್‌ ನಿರ್ಧಾರ ಹಂಚಿಕೊಂಡ ಕೆಲವೇ ಗಂಟೆಗಳ ನಂತರ ಮೋಹಿನಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಈ ಸುದ್ದಿಯನ್ನು ರಿವೀಲ್‌ ಮಾಡಿದ್ದಾರೆ.   

3 /5

ವಿಚ್ಛೇದನ ವಿಚಾರ ಪರಸ್ಪರ ನಿರ್ಧಾರ ಎಂದು ಮೋಹಿನಿ ಡೇ ಮತ್ತು ಮಾರ್ಚ್ ಹಾರ್ಟ್ಸುಚ್ ದಂಪತಿಗಳು ಹೇಳಿಕೊಂಡಿದ್ದಾರೆ.. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ, "ಮಾರ್ಕ್ ಮತ್ತು ನಾನು ಬೇರ್ಪಟ್ಟಿದ್ದೇವೆ ಎಂದು ಘೋಷಿಸುತ್ತೇವೆ. ಪರಸ್ಪರ ಒಪ್ಪಂದದ ಮೂಲಕ ಈ ನಿರ್ಧಾರಕ್ಕೆ ಬಂದಿದ್ದೇವೆ. ಇದು ಉತ್ತಮ ಮಾರ್ಗ ಎಂದು ನಾವು ನಂಬಿದ್ದೇವೆ" ಎಂದು ದಂಪತಿಗಳು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.  

4 /5

ಅಲ್ಲದೆ, ಸಂಸಾರಿಕವಾಗಿ ಬೇರೆಯಾಗಲು ನಿರ್ಧರಿಸಿದ್ದರೂ, ಇದು ವೃತ್ತಿಪರ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಪ್ರಾಜೆಕ್ಟ್‌ಗಳನ್ನು ಒಟ್ಟಾಗಿ ಮುಂದುವರೆಸುವುದಾಗಿ ಹೇಳಿಕೊಂಡಿದ್ದಾರೆ.. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಎಂದು ಪೋಸ್ಟ್‌ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.   

5 /5

29 ವರ್ಷ ವಯಸ್ಸಿನ ಮೋಹಿನಿ ಡೇ ಅವರು ವಿಶ್ವಾದ್ಯಂತ ರೆಹಮಾನ್ ಅವರೊಂದಿಗೆ 40 ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ, 29 ವರ್ಷಗಳ ದಾಂಪತ್ಯದ ನಂತರ, ಎಆರ್ ರೆಹಮಾನ್ ಮತ್ತು ಸೈರಾ ಬಾನು ನವೆಂಬರ್ 19 ರಂದು ಡಿವೋರ್ಸ್‌ ಘೋಷಣೆ ಮಾಡಿದರು.