'ಬೆಳ್ಳಿಯ ಕಣಿವೆಗಳು' ಎಂದೇ ಹೆಸರಾದ ಪ್ರವಾಸಿಗರ ಸ್ವರ್ಗ ಕುಲು-ಮನಾಲಿಯಲ್ಲಿ ಬುಧವಾರ ಮೊದಲ ಹಿಮಪಾತವಾಗಿದೆ. ಇದರಿಂದ ಇಡೀ ನಗರದಲ್ಲಿ ಒಂದೆಡೆ ಸುಂದರ ವಾತಾವರಣ ಸೃಷ್ಟಿಯಾಗಿದ್ದರೆ, ಮತ್ತೊಂದೆಡೆ ಭಾರೀ ಹಿಮಪಾತದಿಂದ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಆದರೂ ಇಡೀ ಹಿಮಾಚಲದಲ್ಲಿ ಎಲ್ಲೆಲ್ಲೂ ಹಿಮದ ಹೊದಿಕೆ ನಿರ್ಮಾಣವಾಗಿರುವ ಸುಂದರ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.