ಯುವಕರು ಅತಿಯಾಗಿ ಬಳಸುವ ದೇಸಿ ಆಪ್ ಗಳಿವು..!

ಯುವಕರು ಅತಿ ಹೆಚ್ಚಾಗಿ ಬಳಸುವ ಐದು ಸ್ವದೇಶಿ ಆಪ್‌ಗಳ ಪಟ್ಟಿ ಇಲ್ಲಿದೆ. 

ನವದೆಹಲಿ : ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ನಮ್ಮ ಎಲ್ಲಾ ಕೆಲಸ ಮತ್ತು ಮನರಂಜನೆ ಕೆಲವು ಅಪ್ಲಿಕೇಶನ್‌ಗಳ ಮೂಲಕವೇ ನಡೆದು ಹೋಗುತ್ತದೆ.  ಯುವಕರು ಅತಿ ಹೆಚ್ಚಾಗಿ ಬಳಸುವ ಐದು ಸ್ವದೇಶಿ ಆಪ್‌ಗಳ ಪಟ್ಟಿ ಇಲ್ಲಿದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಇದು ಗೇಮಿಂಗ್ ಮತ್ತು ಇ-ಸ್ಪೋರ್ಟ್ಸ್ ಸಮುದಾಯಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೊಬೈಲ್ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಬಳಕೆದಾರರು ತಮ್ಮ ಪ್ರೊಫೈಲ್ ಅನ್ನು ಕಸ್ಟಮೈಸ್ ಮಾಡಬಹುದು. ಅವರ ಗೇಮಿಂಗ್ ಅಂಕಿಅಂಶಗಳನ್ನು ಶೇರ್ ಮಾಡಬಹುದು. ಈ ಅಪ್ಲಿಕೇಶನ್‌ ಮೂಲಕ  ವಿವಿಧ ಗೇಮರ್‌ಗಳೊಂದಿಗೆ ಸಂಪರ್ಕ ಸಾಧಿಸಬಹುದು. 

2 /5

ಲೆಹರ್ ಲೈವ್  ಡಿಸ್ಕಶನ್  ಅಪ್ಲಿಕೇಶನ್ ಆಗಿದ್ದು, ಇದರಲ್ಲಿ ಬಳಕೆದಾರರು ಅವರಿಗೆ ಆಸಕ್ತಿಯಿರುವ ಲೈವ್ ಮತ್ತು  ರಿಯಲ್ ಟೈಮ್ ಡಿಸ್ಕಶನ್ ಭಾಗವಾಗಬಹುದು. ಈ ಚರ್ಚೆಗಳನ್ನು ಆಡಿಯೋ-ಓನ್ಲಿ ಅಥವಾ ಲೈವ್-ವಿಡಿಯೋ ಸ್ವರೂಪದಲ್ಲಿ ಡಿಸ್ಕಶನ್ ಮಾಡಬಹುದು. ಇಲ್ಲಿ ಡಿಸ್ಕಶನ್  ಶುರು ಮಾಡಬಹುದು. ಅಥವಾ ಚಾಲ್ತಿಯಲ್ಲಿರುವ್ ಡಿಸ್ಕಶನ್  ಭಾಗವಾಗಬಹುದು. 

3 /5

13 ರಿಂದ 18 ವರ್ಷಗಳ ನಡುವಿನ ಬಳಕೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ, ಈ ಅಪ್ಲಿಕೇಶನ್‌ನಲ್ಲಿ ವಿಶೇಷವಾದ  ಮಾರ್ಕೆಟ್ ಪ್ಲೇಸ್ ಅನ್ನು ರಚಿಸಲಾಗಿದೆ ಇದರಿಂದ ಬಳಕೆದಾರರು ಉನ್ನತ ಬ್ರಾಂಡ್‌ಗಳ ಉತ್ಪನ್ನಗಳನ್ನು ಖರೀದಿಸಬಹುದು.  ಇದರಲ್ಲಿ ಸ್ನೇಹಿತರನ್ನು ಸಹ ಮಾಡಬಹುದು ಮತ್ತು ಯುವಕರು ತಮ್ಮದೇ ಆದ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ.

4 /5

Zoro ಅಪ್ಲಿಕೇಶನ್‌ನ ಸಹಾಯದಿಂದ, ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಆನ್‌ಲೈನ್‌ನಲ್ಲಿ ವ್ಯಕ್ತಪಡಿಸಬಹುದು. ಇಲ್ಲಿ ನಿಮ್ಮ ನಿಜವಾದ ಹೆಸರು ಮತ್ತು ಮಾಹಿತಿಯನ್ನು ನೀಡುವ ಅಗತ್ಯವಿರುವುದಿಲ್ಲ. 

5 /5

ಸ್ವೆಲ್ ಧ್ವನಿ ಆಧಾರಿತ ಸಾಮಾಜಿಕ ವೇದಿಕೆಯಾಗಿದ್ದು, ಇದರಲ್ಲಿ ನೀವು ಚಿತ್ರಗಳು ಮತ್ತು ಲಿಂಕ್‌ಗಳ ಜೊತೆಗೆ ಐದು ನಿಮಿಷಗಳವರೆಗೆ ಆಡಿಯೊವನ್ನು ಲಗತ್ತಿಸಬಹುದು. ನಿಮ್ಮ ಸ್ವಂತ 'ಸ್ವೆಲ್‌ಕಾಸ್ಟ್' ಅನ್ನು ರಚಿಸುವ ಮೂಲಕ ಈ ಅಪ್ಲಿಕೇಶನ್‌ನಲ್ಲಿ ಪ್ರೊಫೈಲ್ ಅನ್ನು ರಚಿಸಬಹುದು.  ಇದರಲ್ಲಿ ನಿಮ್ಮ ಭಾಷೆಯಲ್ಲಿ ಆಡಿಯೊಗಳನ್ನು ಹಾಕಬಹುದು.