ಸಾನ್ಯಾ ಅಂದ ನೋಡಲು ಸಾಲುತ್ತಿಲ್ಲ ಟಿವಿ ಪರದೆ : ಬಿಗ್‌ಬಾಸ್‌ ಸೆಂಟರ್‌ ಅಟ್ರ್ಯಾಕ್ಷನ್‌ ಈ ಬ್ಯೂಟಿ

ಕೆಲವೊಂದಿಷ್ಟು ಮಂದಿ ಬಿಗ್‌ಬಾಸ್‌ ನೋಡೋದೆ ಸಾನ್ಯ ಅಯ್ಯರ್‌ ನೋಡೋಕೆ ಅಂದ್ರೆ ತಪ್ಪಾಗಲ್ಲ. ಅಷ್ಟು ಮುದ್ದಾದ ಚಲುವೆ ದೊಡ್ಮನೆಯ ತುಂಬಾ ನಡೆದಾಡುತ್ತಿದ್ದರೆ ಸ್ವರ್ಗದಿಂದ ಬಿಗ್‌ಬಾಸ್‌ಗೆ ಊರ್ವಶಿಯೇ ಧರೆಗಿಳಿದು ಬಂದಳಾ ಎನ್ನವಂತಿದೆ. ಪುಟ್ಟಗೌರಿ ಮದುವೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಯ್ಯರ್‌ ಸದ್ಯ ದೊಡ್ಮನೆ ಸೆಂಟರ್‌ ಅಟ್ರ್ಯಾಕ್ಷನ್‌.

Sanya Iyer Photos : ಕೆಲವೊಂದಿಷ್ಟು ಮಂದಿ ಬಿಗ್‌ಬಾಸ್‌ ನೋಡೋದೆ ಸಾನ್ಯ ಅಯ್ಯರ್‌ ನೋಡೋಕೆ ಅಂದ್ರೆ ತಪ್ಪಾಗಲ್ಲ. ಅಷ್ಟು ಮುದ್ದಾದ ಚಲುವೆ ದೊಡ್ಮನೆಯ ತುಂಬಾ ನಡೆದಾಡುತ್ತಿದ್ದರೆ ಸ್ವರ್ಗದಿಂದ ಬಿಗ್‌ಬಾಸ್‌ಗೆ ಊರ್ವಶಿಯೇ ಧರೆಗಿಳಿದು ಬಂದಳಾ ಎನ್ನವಂತಿದೆ. ಪುಟ್ಟಗೌರಿ ಮದುವೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಯ್ಯರ್‌ ಸದ್ಯ ದೊಡ್ಮನೆ ಸೆಂಟರ್‌ ಅಟ್ರ್ಯಾಕ್ಷನ್‌.

1 /5

ನಟಿ ಸಾನ್ಯಾ ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಹಾಲಿನಂತ ಮೈಬಣ್ಣ.. ಹೇಳಿ ಮಾಡಿಸಿದಂತ ಮೈಮಾಟ.. ಕ್ಯೂಟ್‌ ಕ್ಯೂಟಾಗಿ ಮಾತನಾಡುತ್ತ ಬಿಗ್‌ಹೌಸ್‌ನಲ್ಲಿ ಓಡಾಡುತ್ತಿದ್ದರೆ ಎಲ್ಲರ ಕಣ್ಣು ಅವರ ಮೇಲಿರುತ್ತೆ. 

2 /5

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಸಾನ್ಯಾ ಅಯ್ಯರ್ ಕುಟುಂಬದಲ್ಲಿ ಬಹಳಷ್ಟು ಜನ ಕಲಾವಿದರಿದ್ದಾರೆ. ಅಲ್ಲದೆ ಓದಿನಲ್ಲಿ ಮುಂದಿರುವ ನಟಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. 

3 /5

ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಅವರು ಈಗ ಬಿಗ್‌ಬಾಸ್‌ನಲ್ಲಿ ಮಿಂಚುತ್ತಿದ್ದಾರೆ. ಬಿಗ್‌ಬಾಸ್‌ ಓಟಿಟಿಯಲ್ಲಿ ಪ್ರೇಕ್ಷರಿಗೆ ಮೋಡಿ ಮಾಡಿದ್ದ ಚೆಲುವೆ ಸದ್ಯ ಬಿಗ್‌ಬಾಸ್‌ ಸೀಸನ್‌ 9ರಲ್ಲಿಯೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

4 /5

ಎಲ್ಲೋ ಒಂದು ಕಡೆ ರೂಪೇಶ್‌ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್‌ ನಡುವೆ ಏನಾದ್ರೂ ಗುಟ್ಟಾಗಿ ಲವ್‌ ನಡಿತಿದೆಯಾ ಎನ್ನುವ ಸಂಶಯ ಪ್ರೇಕ್ಷಕರಲ್ಲಿದೆ.

5 /5

ಇನ್ನು ಮಲ್ಟಿ ಟ್ಯಾಲೆಂಟೆಡ್ ಗರ್ಲ್‌ ಸಾನ್ಯಾ ಒಂದಿಷ್ಟು ಶಾರ್ಟ್ ಮೂವಿ, ಆಲ್ಬಂ ಸಾಂಗ್, ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಬಾಲ್ಯದಲ್ಲಿ ಗೌರಿ ಪಾತ್ರದಲ್ಲಿ ನಟಿ ಸಾನ್ಯಾ ಅಯ್ಯರ್ ಕಾಣಿಸಿಕೊಂಡಿದ್ದರು.