BBK9 Finale : ಬಿಗ್ ಬಾಸ್ ಐವರು ಫೈನಲಿಸ್ಟ್‌ಗಳಿಗೂ ಇದೆ ಒಂದೊಂದು ಪ್ಲಸ್​ ಪಾಯಿಂಟ್​

BBK9 Finale : ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಕೊನೆಯ ಹಂತ ತಲುಪಿದೆ. ಡಿಸೆಂಬರ್​ 30 ಮತ್ತು 31ರಂದು ಬಿಗ್​ ಬಾಸ್​ ಕನ್ನಡ ಸೀಸನ್​ 9 ರ ಫಿನಾಲೆ ಅದ್ಧೂರಿಯಾಗಿ ನಡೆಯಲಿದೆ. ಇದೀಗ ಐವರು ಫೈನಲಿಸ್ಟ್‌ಗಳು ಮನೆಯಲ್ಲಿದ್ದೂ, ಇವರಲ್ಲಿ ಯಾರು ವಿನ್ನರ್‌ ಆಗಲಿದ್ದಾರೆ ಎಂಬ ಕಾತುರ ಹೆಚ್ಚಾಗಿದೆ. 

BBK9 Finale : ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಕೊನೆಯ ಹಂತ ತಲುಪಿದೆ. ಡಿಸೆಂಬರ್​ 30 ಮತ್ತು 31ರಂದು ಬಿಗ್​ ಬಾಸ್​ ಕನ್ನಡ ಸೀಸನ್​ 9 ರ ಫಿನಾಲೆ ಅದ್ಧೂರಿಯಾಗಿ ನಡೆಯಲಿದೆ. ಇದೀಗ ಐವರು ಫೈನಲಿಸ್ಟ್‌ಗಳು ಮನೆಯಲ್ಲಿದ್ದೂ, ಇವರಲ್ಲಿ ಯಾರು ವಿನ್ನರ್‌ ಆಗಲಿದ್ದಾರೆ ಎಂಬ ಕಾತುರ ಹೆಚ್ಚಾಗಿದೆ. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ದಿವ್ಯಾ ಉರುಡುಗ ಇವರಲ್ಲಿ ಯಾರು ಬಿಗ್‌ ಬಾಸ್‌ ಟ್ರೋಪಿ ಎತ್ತಲಿದ್ದಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. 

1 /5

ಒಟಿಟಿ ಸೀಸನ್​ ವಿನ್ನರ್‌ ನಗು ಮೊಗದ ರೂಪೇಶ್​ ಶೆಟ್ಟಿ ಟಿವಿ ಸೀಸನ್‌ನಲ್ಲಿಯೂ ಸಖತ್‌ ಆಗಿ ಆಡಿದ್ದಾರೆ. ತುಳುನಾಡಿನವರಾದ ರೂಪೇಶ್‌ ಆ ಭಾಗದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ, ಅಲ್ಲದೇ ಸಾನ್ಯಾ ಅಯ್ಯರ್​ ಫ್ಯಾನ್ಸ್‌ ಸಹ ಇವರಿಗೆಯೇ ವೋಟ್‌ ಮಾಡುವ ಚಾನ್ಸ್‌ ಹೆಚ್ಚಾಗಿದೆ. 

2 /5

ಕೂಲ್​ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆದಿರುವ ರಾಕೇಶ್​ ಅಡಿಗ, ಒಟಿಟಿ ಸೀಸನ್​ನಿಂದ ಇಲ್ಲಿಯತನಕ ಬಂದಿದ್ದಾರೆ. ಇವರ ಕಾಮ್‌ ಆಂಡ್‌ ಕಂಪೋಸ್ಡ್‌ ಪರ್ಸನಾಲಿಟಿಯೇ ಅವರ ಪ್ಲಸ್‌ ಪಾಯಿಂಟ್‌ ಆಗಿದೆ. 

3 /5

ಕನ್ನಡ ಪರ ಹೋರಾಟಗಾರ ರೂಪೇಶ್​ ರಾಜಣ್ಣ ತಮ್ಮ ಹೋರಾಟದ ಮೂಲಕ ಗುರುತಿಸಿಕೊಂಡವರು. ಅವರ ನೇರ ನಿಷ್ಠುರ ನಡೆ ನುಡಿಯೇ ಬಿಗ್‌ ಬಾಸ್‌ ಮನೆಯಲ್ಲಿ ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ.  

4 /5

ಕದಿವ್ಯಾ ಉರುಡುಗ ಕಳೆದ ಸೀಸನ್​ನಲ್ಲೂ ಫಿನಾಲೆ ತನಕ ಬಂದಿದ್ದರು. ದಿವ್ಯಾ ಉರುಡುಗ ತಮ್ಮದೇ ಆದ ಫ್ಯಾನ್‌ ಬೇಸ್‌ ಹೊಂದಿದ್ದು, ಅರವಿಂದ್​ ಕೆಪಿ ಅವರ ಅಭಿಮಾನಿಗಳು ಕೂಡ ದಿವ್ಯಾ ಅವರಿಗೆಯೇ ವೋಟ್‌ ಮಾಡುವ ಚಾನ್ಸ್‌ ಹೆಚ್ಚಾಗಿದೆ. 

5 /5

ಕಿರುತೆರೆಯಲ್ಲಿ ನಾಗಿಣಿ ಸಿರೀಯಲ್‌ ಮೂಲಕ ಖ್ಯಾತಿ ಪಡೆದವರು ದೀಪಿಕಾ ದಾಸ್​. ಹಳೇ ಸ್ಪರ್ಧಿ ಆಗಿದ್ದು, ತಮ್ಮದೇ ಆದ ಫ್ಯಾನ್‌ ಬೇಸ್‌ ಹೊಂದಿದ್ದಾರೆ.