close

News WrapGet Handpicked Stories from our editors directly to your mailbox

Photos:ಮತ ಚಲಾಯಿಸಿದ ಬಾಲಿವುಡ್ ಸೆಲೆಬ್ರಿಟಿಗಳಾದ ಅಮೀರ್ ಖಾನ್, ಮಾಧುರಿ ದೀಕ್ಷಿತ್, ಸೋನಾಲಿ ಬೇಂದ್ರೆ!

  ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ.

Apr 29, 2019, 12:44 PM IST

ನವದೆಹಲಿ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ಮಹಾರಾಷ್ಟ್ರದ 17 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮೊದಲ ಎರಡು ಗಂಟೆಗಳಲ್ಲಿ ಶೇ.6.82ರಷ್ಟು ಮತದಾನ ನಡೆದಿದೆ. ಸಾಮಾನ್ಯ ಮತದರರೊಂದಿಗೆ ಬಾಲಿವುಡ್ ನಟರಾದ ಅಜಯ್ ದೇವಗನ್, ಆರ್.ಮಾಧವನ್, ಟೈಗರ್ ಶ್ರಾಫ್, ಮಾಧುರಿ ದೀಕ್ಷಿತ್, ಅಮೀರ್ ಖಾನ್, ಸೋನಾಲಿ ಬೆಂದ್ರೆ, ಭಾಗ್ಯಶ್ರೀ ಮತ್ತು ಅನುಪಮ್ ಖೇರ್ ಸಹ ಮತಗಟ್ಟೆಗೆ ಆಗಮಿಸಿ ಸಾಲಿನಲ್ಲಿ ನಿಂತು ಸೋಮವಾರ ಬೆಳಿಗ್ಗೆ ಮತ ಚಲಾಯಿಸಿದ್ದಾರೆ.
 

1/8

ಅನುಪಮ್ ಖೇರ್

ನಟ ಅನುಪಮ್ ಖೇರ್ ಅವರು ಜುಹೂ ಮತಗಟ್ಟೆ ಸಂಖ್ಯೆ 235-240ರಲ್ಲಿ ಮತ ಚಲಾಯಿಸಿದರು.

2/8

ಭಾಗ್ಯಶ್ರೀ

ವಿಲೇ ಪಾರ್ಲೆಯ ಮತದಾನ ಕೇಂದ್ರವೊಂದರಲ್ಲಿ ಮತ ಚಲಾಯಿಸಿದ ನಟಿ ಭಾಗ್ಯಶ್ರೀ.

3/8

ಸೋನಾಲಿ ಬೆಂದ್ರೆ

ತನ್ನ ಪತಿ ಗೋಲ್ಡಿಯೊಂದಿಗೆ ನಟಿ ಸೋನಾಲಿ ಬೆಂದ್ರೆ ಮತ ಚಲಾಯಿಸಿದರು. ಮತದಾನ ಖಂಡಿತವಾಗಿಯೂ ನಿಮ್ಮ ಹಕ್ಕು. ಅದನ್ನು ತಪ್ಪದೇ ಚಲಾಯಿಸಿ ಎಂದು ಈ ಸಂದರ್ಭದಲ್ಲಿ ಸೋನಾಲಿ ಹೇಳಿದರು.

4/8

ಅಮೀರ್ ಖಾನ್

ಬಾಂದ್ರಾದಲ್ಲಿನ ಮತಗಟ್ಟೆಯಲ್ಲಿ ಮತಚಲಾಯಿಸಿದ ಬಳಿಕ ನಟ ಅಮೀರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ಅವರು ಫೋಟೋಗೆ ಫೋಸ್ ನೀಡಿದ್ದು ಹೀಗೆ...

5/8

ಮಾಧುರಿ ದೀಕ್ಷಿತ್

ಜುಹೂ ಕ್ಷೇತ್ರದ ಮತಕೇಂದ್ರದಲ್ಲಿ ಮತ ಚಲಾಯಿಸಿದ ನಟಿ ಮಾಧುರಿ ದೀಕ್ಷಿತ್

6/8

ಟೈಗರ್ ಶ್ರಾಫ್

ಮುಂಬೈನಲ್ಲಿ ಮತ ಚಲಾಯಿಸಿದ ನಟ ಟೈಗರ್ ಶ್ರಾಫ್

7/8

ಆರ್.ಮಾಧವನ್

ನಟ ಆರ್.ಮಾಧವನ್ ಸಹ ಮುಂಬೈನಲ್ಲಿ ಮತ ಚಲಾಯಿಸಿದರು.

8/8

ಅಜಯ್ ದೇವಗನ್

ಬಾಲಿವುಡ್ ನಟ ಅಜಯ್ ದೇವಗನ್, ಪತ್ನಿ ಕಾಜೋಲ್ ಜೊತೆ ಆಗಮಿಸಿ ಮತದಾನ ಮಾಡಿದರು.