Bollywood: ಮದುವೆಯ ಬಳಿಕವೂ ಅಕ್ರಮ ಸಂಬಂಧ ಬೆಳೆಸಿದ ಬಾಲಿವುಡ್ ಸ್ಟಾರ್ ನಟ ನಟಿಯರು!

Bollywood Stars Extra-marital Affairs: ಮದುವೆಯಾದ ಹೊರತಾಗಿಯೂ ಅಕ್ರಮ ಸಂಬಂಧ ಬೆಳೆಸಿಕೊಂಡಿರುವ ಅನೇಕ ಸೆಲೆಬ್ರಿಟಿಗಳ ಇದ್ದಾರೆ. ಈ ಸೆಲೆಬ್ರಿಟಿಗಳಲ್ಲಿ ಅನೇಕರು ತಮ್ಮ ಮೊದಲ ಹೆಂಡತಿಗೆ ವಿಚ್ಛೇದನ ನೀಡಿ ಎರಡನೇ ಬಾರಿಗೆ ವಿವಾಹವಾದರು. ಅಥವಾ ವಿವಾಹೇತರ ಸಂಬಂಧದಿಂದಾಗಿ ಅವರ ಪತ್ನಿಯೊಂದಿಗಿನ ಸಂಬಂಧವನ್ನು ಕೆಡಿಸಿಕೊಂಡವರಿದ್ದಾರೆ. ಅಂತಹ ಕೆಲವು ಸ್ಟಾರ್‌ಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.  

1 /5

ಪ್ರಿಯಾಂಕಾ ಚೋಪ್ರಾ ಜೊತೆ ಶಾರುಖ್ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಜೊತೆಗೆ ಆಫ್ ಸ್ಕ್ರೀನ್ ಕೆಮಿಸ್ಟ್ರಿ ಕೂಡ ಬೆಳಕಿಗೆ ಬಂದಿತ್ತು. ಪತಿ ಜೊತೆ, ಪ್ರಿಯಾಂಕಾ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ತಿಳಿದ ಪತ್ನಿ ಗೌರಿ ಖಾನ್ ವಾರ್ನ್ ಮಾಡಿದ್ದರಂತೆ. ಶಾರುಖ್‌ ಜೊತೆ ಪ್ರಿಯಾಂಕಾ ಯಾವುದೇ ಸಿನಿಮಾ ಮಾಡದಂತೆ ಷರತ್ತು ವಿಧಿಸಿದ್ದರಂತೆ. ಇದಾದ ಬಳಿಕ ಶಾರುಖ್ ಪ್ರಿಯಾಂಕಾ ಜೊತೆ ಕಾಣಿಸಿಕೊಂಡಿರಲಿಲ್ಲ.

2 /5

ಗೋವಿಂದ ಮತ್ತು ರಾಣಿ ಮುಖರ್ಜಿ ‘ಹದ್ ಕರ್ ದಿ ಆಪ್ನೆ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರಂತ. ಈ ವಿಚಾರ ತಿಳಿದ ಗೋವಿಂದನ ಪತ್ನಿ ಸುನೀತಾ, ಗಲಾಟೆ ಮಾಡಿದ್ದರು. ಅಷ್ಟೇ ಅಲ್ಲದೆ, ಸಂಬಂಧ ಮುರಿದುಬೀಳುತ್ತಿದೆ ಎನ್ನಲಾಗಿತ್ತು. ಆದರೆ ಅಂತಿಮವಾಗಿ ರಾಣಿಯಿಂದ ದೂರವಾದ ಗೋವಿಂದ್ ತನ್ನ ದಾಂಪತ್ಯ ಕಾಪಾಡಿಕೊಂಡರು.

3 /5

ಧರ್ಮೇಂದ್ರ ಅವರ ಮೊದಲ ಮದುವೆ ಪ್ರಕಾಶ್ ಕೌರ್ ಅವರೊಂದಿಗೆ ಆಗಿದೆ. ಈ ಮದುವೆಯನ್ನು ಧರ್ಮೇಂದ್ರ ಕುಟುಂಬ ಸದಸ್ಯರ ಒಪ್ಪಿಗೆಯೊಂದಿಗೆ ಮಾಡಲಾಗಿತ್ತು. ಈ ಜೋಡಿ ನಾಲ್ಕು ಮಕ್ಕಳಿಗೆ ಪೋಷಕರಾಗಿದ್ದಾರೆ. ಆದರೆ ಇದಾದ ನಂತರ ಸಿನಿಮಾದಲ್ಲಿ ಕೆಲಸ ಮಾಡುವಾಗ ಹೇಮಾ ಮಾಲಿನಿಗೆ ಧರ್ಮೇಂದ್ರ ಹತ್ತಿರವಾದರು. ಬಳಿಕ ಧರ್ಮೇಂದ್ರ ಹೇಮಾಳನ್ನು ತನ್ನ ಎರಡನೆಯ ಹೆಂಡತಿಯಾಗಿ ಸ್ವೀಕರಿಸಿದರು. ಆದರೆ ಇಂದಿಗೂ ಪ್ರಕಾಶ್ ಕೌರ್ ಗೆ ವಿಚ್ಛೇದನವನ್ನು ನೀಡಿಲ್ಲ.

4 /5

ಮಲೈಕಾ ಅರೋರಾ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ಆದರೆ 19 ವರ್ಷಗಳ ನಂತರ ಈ ಮದುವೆ ಮುರಿದುಬಿತ್ತು. ಇಬ್ಬರೂ 2017 ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನದ ಕಾರಣವನ್ನು ಇಬ್ಬರೂ ಹೇಳಲಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಮಲೈಕಾ ಮದುವೆಯಾದ ತಕ್ಷಣ ಅರ್ಜುನ್ ಕಪೂರ್‌ನೊಂದಿಗೆ ಸಂಬಂಧ ಹೊಂದಲು ಪ್ರಾರಂಭಿಸಿದರು. ಇದೇ ಕಾರಣಕ್ಕಾಗಿ ಅರ್ಬಾಜ್‌ನಿಂದ ವಿಚ್ಛೇದನ ಪಡೆದಿದ್ದಾಳೆ ಎನ್ನಲಾಗಿತ್ತು. ವಿಚ್ಛೇದನದ ನಂತರ ಮಲೈಕಾ ಅರ್ಜುನ್ ಜೊತೆಗಿನ ಸಂಬಂಧವನ್ನು ಅಧಿಕೃತಗೊಳಿಸಿದರು.

5 /5

ರಾಜ್ ಬಬ್ಬರ್ ಅವರ ಮೊದಲ ಮದುವೆ ನಾದಿರಾ ಬಬ್ಬರ್ ಅವರೊಂದಿಗೆ ನಡೆದಿತ್ತು. ಇಬ್ಬರೂ ತಮ್ಮ ಕುಟುಂಬದಲ್ಲಿ ಸಂತೋಷವಾಗಿದ್ದರು, ಆದರೆ ನಂತರ ಚಲನಚಿತ್ರಗಳಲ್ಲಿ ಕೆಲಸ ಮಾಡುವಾಗ, ಸ್ಮಿತಾ ಪಾಟೀಲ್ ಅವರಿಗೆ ರಾಜ್ ಹತ್ತಿರವಾದರು. ಬಳಿಕ ಸ್ಮಿತಾ ಅವರನ್ನು ವಿವಾಹವಾದರು. ಗರ್ಭಾವಸ್ಥೆಯಲ್ಲಿರುವಾಗ ಸಮಸ್ಯೆ ಎದುರಾಗಿ ಸ್ಮಿತಾ ನಿಧನರಾದರು. ಮತ್ತೆ ರಾಜ್ ತನ್ನ ಮೊದಲ ಹೆಂಡತಿಯ ಬಳಿಗೆ ಬಂದರು.