Business Idea: ಹೊಸ ವರ್ಷದಲ್ಲಿ ಕೇವಲ ರೂ.50 ಸಾವಿರ ಹೂಡಿಕೆ ಮಾಡಿ ಈ ಉದ್ಯಮ ಆರಂಭಿಸಿ, ಕೈತುಂಬಾ ಸಂಪಾದನೆ ಮಾಡಿ

Potato Chips Business: ಚಳಿಗಾಲವಿರಲಿ, ಬೇಸಿಗೆ ಇರಲಿ ಮನೆಯಲ್ಲೇ ಕುಳಿತಿರಿ ಅಥವಾ ಪ್ರಯಾಣದಲ್ಲಿರಿ, ಆಲೂಗೆಡ್ಡೆ ಚಿಪ್ಸ್‌ಗೆ ಯಾವಾಗಲೂ ಬೇಡಿಕೆ ಇದ್ದೆ ಇರುತ್ತದೆ. 5 ರೂಪಾಯಿಯಿಂದ ಆರಂಭವಾಗಿ ಇದರ ಪ್ಯಾಕೆಟ್ 50 ರಿಂದ 100 ರೂಪಾಯಿವರೆಗೆ ಮಾರಾಟವಾಗುತ್ತದೆ.
 

Potato Chips Business: ಚಳಿಗಾಲವಿರಲಿ, ಬೇಸಿಗೆ ಇರಲಿ ಮನೆಯಲ್ಲೇ ಕುಳಿತಿರಿ ಅಥವಾ ಪ್ರಯಾಣದಲ್ಲಿರಿ, ಆಲೂಗೆಡ್ಡೆ ಚಿಪ್ಸ್‌ಗೆ ಯಾವಾಗಲೂ ಬೇಡಿಕೆ ಇದ್ದೆ ಇರುತ್ತದೆ. 5 ರೂಪಾಯಿಯಿಂದ ಆರಂಭವಾಗಿ ಇದರ ಪ್ಯಾಕೆಟ್ 50 ರಿಂದ 100 ರೂಪಾಯಿವರೆಗೆ ಮಾರಾಟವಾಗುತ್ತದೆ. ಹೌದು, ಸದ್ಯದ ಸ್ಥಿತಿಯಲ್ಲಿ ಚಿಪ್ಸ್ ತಯಾರಿಸಿ ಮಾರಾಟ ಮಾಡುವ ವ್ಯಾಪಾರ ಉತ್ತಮವಾಗಿದೆ. ಅಷ್ಟೇ ಅಲ್ಲ, ಕಡಿಮೆ ಹೂಡಿಕೆಯಲ್ಲಿ ಇದರಿಂದ ನೀವು ಉತ್ತಮ ಆದಾಯವನ್ನು ಕೂಡ ಗಳಿಸಬಹುದು.

 

ಇದನ್ನೂ ಓದಿ-Investment Tips: ಈ ಸೂಪರ್ ಹಿಟ್ ಯೊಜನೆಯಲ್ಲಿ ನಿತ್ಯ ಕೇವಲ 200 ಹೂಡಿಕೆ ಮಾಡಿ ಬಂಬಾಟ್ ಲಾಭ ಸಿಗುತ್ತೆ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Potato Chips Business Planning: ಚಿಪ್ಸ್ ಮಾರುಕಟ್ಟೆಯಲ್ಲಿ, ಅತಿ ಚಿಕ್ಕ ಲೋಕಲ್ ಬ್ರಾಂಡ್ ನಿಂದ ಹಿಡಿದು, ಅಂತಾರಾಷ್ಟ್ರೀಯ ಬ್ರಾಂಡ್ ವರೆಗೆ ಎಲ್ಲಾ ರೀತಿಯ ಚಿಪ್ಸ್ ಗಳು ಮಾರಾಟವಾಗುತ್ತವೆ. ಆದರೂ ಕೂಡ ಚಿಪ್ಸ್ ಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ, ಈ ಬೇಡಿಕೆಯನ್ನು ಪೂರೈಸಲು ತಯಾರಕರಿಗೆ ಸಾಧ್ಯವಾಗುತ್ತಿಲ್ಲ. ನೀವು ಸಹ ಈ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ನೀವು ಮೊದಲು ಉತ್ತಮ ಗುಣಮಟ್ಟದ ಚಿಪ್ಸ್ ತಯಾರಕರಾಗಿರಬೇಕು.  

2 /5

ಈ ವ್ಯವಹಾರದಲ್ಲಿ ಆರಂಭಿಕ ಹೂಡಿಕೆ ಕೂಡ ಅಷ್ಟೊಂದು ಜಾಸ್ತಿ ಇಲ್ಲ. 30ರಿಂದ 35 ಸಾವಿರ ರೂಪಾಯಿಗೆ ಚಿಪ್ಸ್ ತಯಾರಿಕೆಯ ಚಿಕ್ಕ ಯಂತ್ರ ಸಿಗುತ್ತದೆ. ಇದಲ್ಲದೆ, ನೀವು ಪ್ಯಾಕಿಂಗ್ ಯಂತ್ರವನ್ನು ಸಹ ಖರೀದಿಸಬೇಕು.  ಯಾವುದೇ ಯಂತ್ರ ಖರೀದಿಸದೆಯೂ ಕೂಡ ನೀವು 50,000 ಅಥವಾ ಅದಕ್ಕಿಂತ ಕಡಿಮೆ ವೆಚ್ಚದಲ್ಲಿ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಆದರೆ ಎರಡೂ ಯಂತ್ರಗಳನ್ನು ಖರೀದಿಸುವುದರಿಂದ ನಿಮ್ಮ ವೆಚ್ಚ ಹೆಚ್ಚಾಗುತ್ತದೆ. ಆರಂಭದಲ್ಲಿ ಯಂತ್ರವಿಲ್ಲದೆ ಕೆಲಸವನ್ನು ಪ್ರಾರಂಭಿಸುವ ಮೂಲಕ ನೀವು ಪ್ರಯೋಗವನ್ನು ಸಹ ಮಾಡಬಹುದು.  

3 /5

ನೀವು ಮನೆಯಲ್ಲಿ ಒಂದು ಸಣ್ಣ ಸ್ಥಳ ಅಥವಾ ಕೋಣೆಯಿಂದ ಈ ಉದ್ಯಮವನ್ನು ಪ್ರಾರಂಭಿಸಬಹುದು. ಕಚ್ಚಾ ವಸ್ತುವಾಗಿ, ನಿಮಗೆ ಉತ್ತಮ ಗುಣಮಟ್ಟದ ಆಲೂಗಡ್ಡೆ, ಉಪ್ಪು, ಚಾಟ್ ಮಸಾಲಾ, ಮೆಣಸಿನ ಪುಡಿ, ಎಣ್ಣೆ ಮತ್ತು ಅಡಿಗೆ ಸೋಡಾ ಇತ್ಯಾದಿಗಳು ಬೇಕಾಗುತ್ತವೆ. ನಿಮ್ಮ ಸಹಾಯಕ್ಕಾಗಿ ನೀವು ಕುಟುಂಬ ಸದಸ್ಯರ ಸಹಾಯವನ್ನು ಪಡೆದುಕೊಳ್ಳಬಹುದು ಅಥವಾ ನೀವು ಸಿಬ್ಬಂದಿಯನ್ನು ನೇಮಿಸಿಕೊಳ್ಳಬಹುದು.  

4 /5

ಈ ಕೆಲಸವನ್ನು ಪ್ರಾರಂಭಿಸಲು, ನಿಮ್ಮ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೊದಲು ನೀವು ನಿಮ್ಮ ಉದ್ಯಮವನ್ನು ನೋಂದಾಯಿಸಿಕೊಳ್ಳಬೇಕು. ಮೊದಲು ನೀವು MSME ಅಡಿಯಲ್ಲಿ ನೋಂದಾಯಿಸಿಕೊಳ್ಳಿ. ಇದರ ನಂತರ, ಟ್ರೇಡ್ ಲೈಸೆನ್ಸ್ ತೆಗೆದುಕೊಳ್ಳುವ ಅವಶ್ಯಕತೆ ಇರುತ್ತದೆ. ಇದಲ್ಲದೆ, ನೀವು ಸಂಸ್ಥೆ ಅಥವಾ ಕಂಪನಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್, ಜಿಎಸ್‌ಟಿ ಸಂಖ್ಯೆಯನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಆಹಾರ ಇಲಾಖೆಯಿಂದ ಉತ್ಪನ್ನವನ್ನು ಪರೀಕ್ಷಿಸಿದ ನಂತರ, ನೀವು FSSAI ಪರವಾನಗಿಯನ್ನು ಪಡೆಯಬಹುದು.  

5 /5

ಆರಂಭದಲ್ಲಿ, ನಿಮ್ಮ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಸಾಮಾಜಿಕ ಮಾಧ್ಯಮ ಇತ್ಯಾದಿಗಳ ಮೂಲಕ ಪ್ರಚಾರ ಮಾಡಬಹುದು. ಬೇಡಿಕೆ ಹೆಚ್ಚಾದಾಗ ಕ್ರಮೇಣ ವ್ಯಾಪಾರವನ್ನು ಹೆಚ್ಚಿಸಬಹುದು. ಬೇಡಿಕೆ ಒಂದೊಮ್ಮೆ ಹೆಚ್ಚಾದ ಬಳಿಕ ನೀವು ಯಂತ್ರವನ್ನೂ ಖರೀದಿಸಬಹುದು.