Business Idea: ಇಂದೇ ಈ ಬಿಸ್ನೆಸ್ ಆರಂಭಿಸಿ ತಿಂಗಳಿಗೆ 10 ಲಕ್ಷ ರೂ. ಸಂಪಾದಿಸಿ

Business idea: ನೀವು ಸಹ ನಿಮ್ಮ ಸ್ವಂತ ಉದ್ಯಮವನ್ನು ಆರಂಭಿಸಲು ಯೋಜನೆ ರೂಪಿಸುತ್ತಿದ್ದಾರೆ ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗಾಗಿ ಒಂದು ವಿಶೇಷವಾದ ಉದ್ಯಮದ ಪರಿಕಲ್ಪನೆಯನ್ನು ಹೇಳಿಕೊಡುತ್ತಿದ್ದೇವೆ, 

Business idea: ನೀವು ಸಹ ನಿಮ್ಮ ಸ್ವಂತ ಉದ್ಯಮವನ್ನು ಆರಂಭಿಸಲು ಯೋಜನೆ ರೂಪಿಸುತ್ತಿದ್ದಾರೆ ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗಾಗಿ ಒಂದು ವಿಶೇಷವಾದ ಉದ್ಯಮದ ಪರಿಕಲ್ಪನೆಯನ್ನು ಹೇಳಿಕೊಡುತ್ತಿದ್ದೇವೆ, ಇದನ್ನು ನೀವು ಹಳ್ಳಿ - ನಗರದಲ್ಲಿ ಎಲ್ಲಿ ಬೇಕಾದರೂ ಮಾಡಬಹುದು. ಈ ವ್ಯವಹಾರದಲ್ಲಿ ನೀವು ಬಂಪರ್ ಆದಾಯವಿದೆ ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಇದರಲ್ಲಿ ನಷ್ಟದ ಸಾಧ್ಯತೆಗಳು ಕೂಡ ತುಂಬಾ ಕಡಿಮೆಯಾಗಿವೆ. ಇದರ ಬೇಡಿಕೆ ಎಷ್ಟರಮಟ್ಟಿಗಿದೆ ಎಂದರೆ ನೀವು ಪ್ರತಿ ತಿಂಗಳು 5 ರಿಂದ 10 ಲಕ್ಷ ರೂಪಾಯಿಗಳನ್ನು ಸುಲಭವಾಗಿ ಸಂಪಾದಿಸಬಹುದು. ಈ ವ್ಯವಹಾರದ ಬಗ್ಗೆ ವಿಸ್ತೃತ ಮಾಹಿತಿಯನ್ನು ಪದೆದುಕೊಳ್ಳೋಣ ಬನ್ನಿ

 

ಇದನ್ನೂ ಓದಿ-Post Office Scheme: ಈ ಸೂಪರ್ ಹಿಟ್ ಯೋಜನೆಯಲ್ಲಿ 50 ಸಾವಿರ ಠೇವಣಿ ಇರಿಸಿ, 3300 ಪಿಂಚಣಿ ಪಡೆಯಿರಿ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
    

1 /6

ನೀವೂ ಕೂಡ ನಿಮ್ಮ ಕೆಲಸದಿಂದ ಬೇಸತ್ತು ಹೋಗಿದ್ದರೆ ಮತ್ತು ನೀವು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದ್ದರೆ ಈ ಲೇಖನ ನಿಮಗಾಗಿ. ಇಂದು ನಾವು ನಿಮಗೆ ಒಂದು ಅದ್ಭುತವಾದ ಉದ್ಯಮದ ಪರಿಕಲ್ಪನೆಯನ್ನು ಹೇಳಿಕೊಡಲಿದ್ದೇವೆ, ಈ ಉದ್ಯಮದ ಮೂಲಕ ನೀವು ಬಂಪರ್ ಲಾಭವನ್ನು ಪಡೆಯಬಹುದು. ನೀವು ಈ ಉದ್ಯಮವನ್ನು ಎಲ್ಲಿ ಬೇಕಾದರೂ ಪ್ರಾರಂಭಿಸಬಹುದು ಮತ್ತು ಉತ್ತಮ ಹಣವನ್ನು ಗಳಿಸಬಹುದು. ಹೌದು, ನಾವು ಹೇಳುತ್ತಿರುವ ವ್ಯಾಪಾರದ ಕಲ್ಪನೆ ರಟ್ಟಿನ ಬಾಕ್ಸ್ ಅಥವಾ ಕಾರ್ಟೂನ್ ಬಾಕ್ಸ್ ತಯಾರಿಸುವ ಉದ್ಯಮ.

2 /6

ಇತ್ತೀಚಿನ ದಿನಗಳಲ್ಲಿ ರಟ್ಟಿನ ಪೆಟ್ಟಿಗೆಗಳ ಬೇಡಿಕೆ ಸಾಕಷ್ಟು ಹೆಚ್ಚಾಗಿದೆ. ಅಂಗಡಿಯಿಂದ ಹಿಡಿದು ಮನೆಗೆ ಬದಲಾಯಿಸುವವರೆಗೋ ಇದೊಂದು ಅತ್ಯಗತ್ಯ ಸಂಗತಿಯಾಗಿ ಮಾರ್ಪಟ್ಟಿದೆ. ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವಸ್ತುಗಳನ್ನು ಪ್ಯಾಕ್ ಮಾಡಲು ಕಾರ್ಡ್ಬೋರ್ಡ್ ಬಾಕ್ಸ್ ಅಗತ್ಯವಿದೆ. ಮಹತ್ವದ ವಿಷಯವೆಂದರೆ ಇದಕ್ಕೆ ಯಾವುದೇ ಒಂದು ನಿರ್ಧಿಷ್ಟ ಸೀಜನ್ ಇಲ್ಲ . ಪ್ರತಿ ತಿಂಗಳು ಪ್ರತಿಯೊಂದು ಸೀಜನ್ ನಲ್ಲಿ ಇದರ ಬೇಡಿಕೆ ಇರುತ್ತದೆ. ಈ ವ್ಯವಹಾರದಲ್ಲಿ ನಷ್ಟದ ಸಾಧ್ಯತೆಗಳು ಅತ್ಯಲ್ಪವಾಗಿರಲು ಇದು ಕೂಡ ಒಂದು ಕಾರಣವಾಗಿದೆ. ಆನ್‌ಲೈನ್ ವ್ಯವಹಾರದಲ್ಲಿ ಇದರ ಅವಶ್ಯಕತೆ ಹೆಚ್ಚಾಗಿದೆ.

3 /6

ಏಕರೂಪದ ಪ್ಯಾಕಿಂಗ್ ಮತ್ತು ಅದರ ಸುರಕ್ಷತೆಗಾಗಿ ಕಾರ್ಡ್ಬೋರ್ಡ್ ಬಾಕ್ಸ್  ಅನ್ನು ಬಳಸಲಾಗುತ್ತದೆ. ಈ ದಪ್ಪ ಕವರ್ (ಕಾರ್ಡ್ಬೋರ್ಡ್) ಅನ್ನು ಬೈಂಡಿಂಗ್ ಕೆಲಸದಲ್ಲಿ ಬಳಸಲಾಗುತ್ತದೆ. ಇದನ್ನು ಪುಸ್ತಕಗಳನ್ನು ಮುಚ್ಚಲು ಸಹ ಬಳಸಲಾಗುತ್ತದೆ. ಭಾರವಾದ ಉತ್ಪನ್ನಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಇದನ್ನು ಬಳಸಲಾಗುತ್ತದೆ. ಇದಕ್ಕಾಗಿ, ಕ್ರಾಫ್ಟ್ ಪೇಪರ್ ಕಚ್ಚಾ ವಸ್ತು ಇರುವುದು ತುಂಬಾ ಮಹತ್ವದ್ದಾಗಿದೆ. ಇದರ ಮಾರುಕಟ್ಟೆ ಬೆಲೆ ಕೆಜಿಗೆ 40 ರೂ. ಬಳಸಿದ ಉತ್ತಮ ಗುಣಮಟ್ಟದ ಕ್ರಾಫ್ಟ್ ಪೇಪರ್ ನಿಂದ, ಉತ್ತಮ ಗುಣಮಟ್ಟದ ಬಾಕ್ಸ್ಗಳನ್ನು ತಯಾರಿಸಲಾಗುತ್ತದೆ.

4 /6

ಈ ವ್ಯಾಪಾರವನ್ನು ಪ್ರಾರಂಭಿಸಲು, ನೀವು ಸುಮಾರು 5000 ಚದರ ಅಡಿ ಜಾಗವನ್ನು ಹೊಂದಿರಬೇಕು. ಇದಲ್ಲದೇ ಇದಕ್ಕಾಗಿ ಸ್ಥಾವರವನ್ನೂ ಕೂಡ ಸ್ಥಾಪಿಸಬೇಕು. ನಂತರ, ಸರಕುಗಳನ್ನು ಇಡಲು ಗೋದಾಮಿನ ಅವಶ್ಯಕತೆ ಇದೆ. ಇದಕ್ಕಾಗಿ ನಿಮಗೆ ಎರಡು ರೀತಿಯ ಯಂತ್ರಗಳು ಬೇಕಾಗುತ್ತವೆ. ಒಂದು ಅರೆ ಸ್ವಯಂಚಾಲಿತ ಯಂತ್ರ ಮತ್ತು ಮತ್ತೊಂದು ಸಂಪೂರ್ಣ ಸ್ವಯಂಚಾಲಿತ ಯಂತ್ರ.

5 /6

ಈ ವ್ಯವಹಾರದಲ್ಲಿ ಹೂಡಿಕೆಯ ಬಗ್ಗೆ ಹೇಳುವುದಾದರೆ, ನೀವು ಇದನ್ನು ಸಣ್ಣ ವ್ಯಾಪಾರದ ರೂಪದಲ್ಲಿಯೂ ಕೂಡ ಪ್ರಾರಂಭಿಸಬಹುದು, ನಂತರ ಅದನ್ನು ದೊಡ್ಡ ಮಟ್ಟಕ್ಕೆ ನೀವು ಬೆಳೆಸಬಹುದು. ನೀವು ಈ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಪ್ರಾರಂಭಿಸಲು ಬಯಸಿದರೆ, ನೀವು ಕನಿಷ್ಠ 20 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಇದಕ್ಕಾಗಿ ಅರೆ-ಸ್ವಯಂಚಾಲಿತ ಯಂತ್ರಗಳ ಅವಶ್ಯಕತೆ ಇದೆ. ಇದೇ ವೇಳೆ  ಸಂಪೂರ್ಣ ಸ್ವಯಂಚಾಲಿತ ಯಂತ್ರಗಳ ಮೂಲಕ ಪ್ರಾರಂಭಿಸಲು 50 ಲಕ್ಷ ರೂಪಾಯಿಗಳವರೆಗೆ ಖರ್ಚು ಮಾಡಬಹುದು.

6 /6

ಈ ವ್ಯವಹಾರದಲ್ಲಿ ನಿಮ್ಮ ಲಾಭವೂ ಅದ್ಭುತವಾಗಿರುತ್ತದೆ. ಹೌದು, ಈ ಉದ್ಯಮಕ್ಕೆ ಬೇಡಿಕೆಯು ಬಹಳಷ್ಟು ಹೆಚ್ಚಾಗಿದೆ, ಆದ್ದರಿಂದ ಇದರಲ್ಲಿ ಲಾಭದ ಪ್ರಮಾಣವೂ ಹೆಚ್ಚಾಗಿದೆ. ನೀವು ಇದನ್ನು ಉತ್ತಮ ರೀತಿಯಲ್ಲಿ ಮಾಡಿದರೆ ಮತ್ತು ಉತ್ತಮ ಗ್ರಾಹಕರನ್ನು ಗಳಿಸಿದರೆ, ಈ ವ್ಯವಹಾರವನ್ನು ಪ್ರಾರಂಭಿಸಿ ನೀವು ಪ್ರತಿ ತಿಂಗಳು 10 ಲಕ್ಷ ರೂಪಾಯಿಗಳವರೆಗೆ ಸುಲಭವಾಗಿ ಗಳಿಸಬಹುದು.