DA Hike Salary Update: ತುಟ್ಟಿಭತ್ಯೆಯನ್ನು ಶೇ. 46 ರಷ್ಟು ಏರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಕ್ಟೋಬರ್ ತಿಂಗಳ ವೇತನದಲ್ಲಿ ಡಿಎ ಮೊತ್ತ, ಅರಿಯರ್ಸ್ ಲಭ್ಯವಾಗಲಿದೆ.
DA Hike Salary Update : ಕೇಂದ್ರ ಸರ್ಕಾರ ದೀಪಾವಳಿಗೂ ಮುನ್ನವೇ ನೌಕರರು ಮತ್ತು ಪಿಂಚಣಿದಾರರಿಗೆ ಉಡುಗೊರೆ ನೀಡಿದೆ. ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಅಂದರೆ ಶೇ. 46 ರಷ್ಟು ಏರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಹೆಚ್ಚಿಸಿರುವ ಡಿಎ ಜುಲೈ 1 ರಿಂದಲೇ ಅನ್ವಯವಾಗಲಿದೆ. ಹೀಗೆ ಮೂರು ತಿಂಗಳ ಬಾಕಿ ಡಿಎ ವೇತನದ ಜೊತೆಗೆ ಸಿಗಲಿದೆ. ಅಕ್ಟೋಬರ್ ತಿಂಗಳ ವೇತನದಲ್ಲಿ ಡಿಎ ಮೊತ್ತವನ್ನು ಹೆಚ್ಚಿಸಲಾಗುವುದು. ಇದರೊಂದಿಗೆ 11 ಲಕ್ಷಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಕಾರ್ಯಕ್ಷಮತೆ ಸಂಬಂಧಿತ ಬೋನಸ್ ನೀಡಲು ನಿರ್ಧರಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಅಂದರೆ ಶೇ. 46 ರಷ್ಟು ಏರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೆಚ್ಚಿಸಿರುವ ಡಿಎ ಜುಲೈ 1 ರಿಂದಲೇ ಅನ್ವಯವಾಗಲಿದೆ.
ಹೆಚ್ಚಿಸಲಾಗಿರುವ ಡಿಎ ಜುಲೈ 1 ರಿಂದಲೇ ಜಾರಿಗೆ ಬರುವಂತೆ ಆದೇಶದಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲಿ ಮೂರು ತಿಂಗಳ ಬಾಕಿ ಡಿಎ ಕೂಡಾ ಈ ಬಾರಿ ವೇತನದ ಜೊತೆಗೆ ಸಿಗಲಿದೆ. ಹಾಗಿದ್ದರೆ ಈ ಬಾರಿ ವೇತನದಲ್ಲಿ ಎಷ್ಟು ಮೊತ್ತ ಹೆಚ್ಚಿಗೆ ಸಿಗಲಿದೆ ಎನ್ನುಅ ಲೆಕ್ಕಾಚಾರ ಇಲ್ಲಿದೆ.
ಮೂಲ ವೇತನ - 56,900 ರೂ., ಹೊಸ ಡಿಎ (ಶೇ 46) - ತಿಂಗಳಿಗೆ 26,174 .ರೂ , ಹಿಂದಿನ ಡಿಎ (ಶೇ 42) - ತಿಂಗಳಿಗೆ 23,898 .ರೂ, ತುತ್ತಿಭತ್ಯೆಯಲ್ಲಿನ ಹೆಚ್ಚಳ - ತಿಂಗಳಿಗೆ 2,276 ರೂ. ವಾರ್ಷಿಕ ಹೆಚ್ಚಳ - 27,312. ಹೈಯರ್ ಬ್ಯಾಂಡ್ ಉದ್ಯೋಗಿಗಳ ವೇತನವು ತುಟ್ಟಿಭತ್ಯೆಯ ರೂಪದಲ್ಲಿ ತಿಂಗಳಿಗೆ 2,276 ರೂ. ಹೆಚ್ಚಳವಾಗುವುದು.
ಈ ಬಾರಿ ವೇತನಕ್ಕೆ ಮೂರು ತಿಂಗಳ ಬಾಕಿ ಹಾಗೂ ಅಕ್ಟೋಬರ್ ತಿಂಗಳ ಡಿಎ ಹಣ ಸೇರ್ಪಡೆಯಾಗಲಿದೆ. ಅಂದರೆ ಈ ಬಾರಿ ಮಾಸಿಕ ವೇತನದಲ್ಲಿ 2276*4=9,104 ರೂ. ಹೆಚ್ಚಿಗೆ ಸಿಗಲಿದೆ. ಇದಲ್ಲದೇ ಉದ್ಯೋಗಿಗಳಿಗೆ ಅಡ್ಹಾಕ್ ಬೋನಸ್ ಕೂಡಾ ಸಿಗಲಿದೆ.
ಮೂಲ ವೇತನ - ರೂ 18,000, ಹೊಸ ಡಿಎ (ಶೇ 46) - ತಿಂಗಳಿಗೆ 8280 .ರೂ ಪ್ರಸ್ತುತ ಡಿಎ (ಶೇ 42) - ತಿಂಗಳಿಗೆ 7560.ರೂ, ಡಿಎ ಯಲ್ಲಿನ ಹೆಚ್ಚಳ - ತಿಂಗಳಿಗೆ 720 . ರೂ, ವಾರ್ಷಿಕ ಹೆಚ್ಚಳ - 8640 . ರೂ
ಇದರ ಪ್ರಕಾರ ಮೂರು ತಿಂಗಳ ಬಾಕಿ ಮತ್ತು ಅಕ್ಟೋಬರ್ ತಿಂಗಳ ಡಿಎ ವೇತನಕ್ಕೆ ಸೇರ್ಪಡೆಯಾಗಲಿದೆ. ಅಂದರೆ ನಿಮ್ಮ ಮಾಸಿಕ ವೇತನಕ್ಕಿಂತ 720*4=2840 ರೂ. ಹೆಚ್ಚಿಗೆ ಹಣ ಸಿಗಲಿದೆ. ಇದಲ್ಲದೇ ಪ್ರತ್ಯೇಕವಾಗಿ ಬೋನಸ್ ಕೂಡಾ ಸಿಗಲಿದೆ.