ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಚತುರ್ಗ್ರಹಿ ಯೋಗ, 3 ರಾಶಿಗಳ ಜನರಿಗೆ ಭಾರಿ ಧನಾಗಮನ ಭಾಗ್ಯ ಪ್ರಾಪ್ತಿ!

Chaturgrahi Yog In Pisces: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯಲ್ಲಿ ಚತುರ್ಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ಒಳ್ಳೆಯ ದಿನಗಳು ಆರಂಭಗೊಳ್ಳುತ್ತಿದ್ದು, ಇವರಿಗೆ ಅಪಾರ ಧನ ಪ್ರಾಪ್ತಿಯ ಭಾಗ್ಯ ಕರುಣಿಸಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನೂ ಒಮ್ಮೆ ತಿಳಿದುಕೊಳ್ಳೋಣ,
 

Chaturgrahi Yog In Pisces: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹ ತನ್ನ ರಾಶಿಯನ್ನು ಪರಿವರ್ತಿಸಿದಾಗ ಅಥವಾ ಯಾವುದೇ ಇತರ ಗ್ರಹದ ಜೊತೆಗೆ ಮೈತ್ರಿ ಮಾಡಿಕೊಂಡಾಗ, ಅದರ ನೇರ ಪ್ರಭಾವ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಉಂಟಾಗುತ್ತದೆ. ಇಂದು ಮಾರ್ಚ್ 22 ಮೀನ ರಾಶಿಯಲ್ಲಿ ಚತುರ್ಗ್ರಹಿ ಯೋಗ ನಿರ್ಮಾಣಗೊಂಡಿದೆ. ಸೂರ್ಯ, ಚಂದ್ರ, ಗುರು ಹಾಗೂ ಬುಧರ ನಡುವೆ ಏರ್ಪಟ್ಟ ಮೈತ್ರಿಯ ಕಾರಣ ಈ ಚತುರ್ಗ್ರಹಿ ಯೋಗ ನಿರ್ಮಾಣಗೊಂಡಿದೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಉಂಟಾಗಲಿದೆ. ಆದರೆ, 3 ರಾಶಿಗಳ ಜನರ ಪಾಲಿಗೆ ಇದು ಅತ್ಯಂತ ಧನಲಾಭಕಾರಿ ಸಾಬೀತಾಗಲಿದ್ದು ಇದರಿಂದ ಅವರ ಭಾಗ್ಯೋದಯ ನಿಶ್ಚಿತ ಎನ್ನಲಾಗುತ್ತಿದೆ.

 

ಇದನ್ನೂ ಓದಿ-Isht Dev: ಹನ್ನೆರಡು ರಾಶಿಗಳ ಮೇಲಿರುತ್ತೆ ವಿವಿಧ ದೇವ-ದೇವತೆಗಳ ಅನುಗ್ರಹ, ನಿಮ್ಮ ಮೇಲೆ ಯಾರ ಅನುಗ್ರಹ ಇಲ್ಲಿ ತಿಳಿದುಕೊಳ್ಳಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ವೃಷಭ ರಾಶಿ: ವೃಷಭ ರಾಶಿಯ ಜಾತಕದವರ ಪಾಲಿಗೆ ಚತುರ್ಗ್ರಹಿ ಯೋಗ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದನ್ನು ಆದಾಯ ಮತ್ತು ಲಾಭದ ಸ್ಥಾನ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಕರೆಯಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನೀವು ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವನ್ನು ನೋಡಬಹುದು. ಇದಲ್ಲದೆ ಹಳೆ ಹೂಡಿಕೆಯಿಂದಲೂ ಕೂಡ ನಿಮಗೆ ಲಾಭ ಸಿಗಲಿದೆ. ಆ ಅವಧಿಯಲ್ಲಿ ನೀವು ಪಾರ್ಟ್ನರಶಿಪ್ ನಲ್ಲಿ ಹೊಸ ವ್ಯವಸಾಯವನ್ನು ಕೂಡ ಪ್ರಾರಂಭಿಸಬಹುದು. ಷೇರು ಮಾರುಕಟ್ಟೆ, ಲಾಟರಿಗಳಲ್ಲಿ ನೀವು ನಿಮ್ಮ ಭಾಗ್ಯವನ್ನು ಪರಿಶೀಲಿಸಬಹುದು, ಉತ್ತಮ ಧನಲಾಭದ ಸಾಧ್ಯತೆಗಳಿವೆ.  

2 /3

ಮಿಥುನ ರಾಶಿ: ಮಿಥುನ ಜಾತಕದವರಿಗೆ ಚತುರ್ಗ್ರಹಿ ಯೋಗ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಒದಗಿ ಬರುವ ಸಾಧ್ಯತೆ ಇದೆ. ಅಲ್ಲದೆ ವ್ಯಾಪಾರಿಗಳಿಗೆ ಉತ್ತಮ ಧನಲಾಭ ಪ್ರಾಪ್ತಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವೃತ್ತಿಜೀವನದಲ್ಲಿ ನಿಮ್ಮ ಶತ್ರುಗಳು ನಿಮ್ಮ ಮೇಲೆ ಹಿಡಿತ ಸಾಧಿಸಲು ವಿಫಲರಾಗಲಿದ್ದಾರೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯ ಸಂಪೂರ್ಣ ಬೆಂಬಲ ಸಿಗಲಿದೆ. ಇನ್ನೊಂದೆಡೆ ನಿಮಗೆ ಯಾವುದೇ ಒಂದು ಕಾರ್ಯದಲ್ಲಿ ಪ್ರಶಸ್ತಿ ಲಭಿಸುವ ಸಾಧ್ಯತೆ ಇದೆ. ರಾಜಕೀಯದೊಂದಿಗೆ ಸಂಬಂಧ ಹೊಂದಿದ ಜನರಿಗೆ ಸ್ಥಾನಮಾನ ಪ್ರಾಪ್ತಿಯಾಗುವ ಸಾಧ್ಯತೆ ಕೂಡ ಇದೆ.

3 /3

ಕುಂಭ ರಾಶಿ: ಚತುರ್ಗ್ರಹಿ ಯೋಗ ರಚನೆ ಕುಂಭ ರಾಶಿಯ ಜಾತಕದವರಿಗೆ ಶುಭ ಫಲದಾಯಿ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ದ್ವಿತೀಯ ಭಾವದಲ್ಲಿ ರೂಪಗೊಳ್ಳುತ್ತಿದೆ ಮತ್ತು ಜೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಧನ ಹಾಗೂ ವಾಣಿಯ ಸ್ಥಾನ ಎಂದು ಭಾವಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನ ಪ್ರಾಪ್ತಿಯಾಗಲಿದೆ. ಜೊತೆಗೆ ಈ ಸಮಯದಲ್ಲಿ ನೀವು ಆಸ್ತಿ-ಪಾಸ್ತಿಗಳಲ್ಲಿ ಹೂಡಿಕೆಯನ್ನು ಮಾಡುವ ಸಾಧ್ಯತೆ ಇದೆ. ಜೊತೆಗೆ ವ್ಯಾಪಾರದಲ್ಲಿ ಹೂಡಿಕೆ ಮಾಡಲೂ ಕೂಡ ಈ ಸಮಯ ಅತ್ಯಂತ ಅನುಕೂಲಕರವಾಗಿದೆ. ಪ್ರತ್ಯೇಕ ಕಾರ್ಯಗಳಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಮುಂದಿನ ವ್ಯಕ್ತಿಯ ಮೇಲೆ ನಿಮ್ಮ ವಾಣಿ ಅಂದರೆ ಮಾತಿನಿಂದ ಪ್ರಭಾವ ಬೀರುವಿರಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

You May Like

Sponsored by Taboola