ಹಿಂದೂ ಧರ್ಮದಲ್ಲಿ ನಕ್ಷತ್ರಪುಂಜಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಇತರರಿಗಿಂತ ಭಿನ್ನವಾಗಿಸುವ 4 ನಕ್ಷತ್ರಗಳ ಬಗ್ಗೆ ತಿಳಿಯೋಣ.
ಬೆಂಗಳೂರು : ಸಾಮಾನ್ಯವಾಗಿ ಮನೆಯಲ್ಲಿ ಮಗು ಹುಟ್ಟಿದಾಗ ಆ ಮಗು ಯಾವ ನಕ್ಷತ್ರದಲ್ಲಿ ಜನಿಸಿದೆ ಎನ್ನುವುದನ್ನು ನೋಡಲಾಗುತ್ತದೆ. ಯಾವ ನಕ್ಷತ್ರದಲ್ಲಿ ಮಗು ಜನಿಸಿದೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಜೀವನ, ಗುರಿ ಮತ್ತು ವ್ಯಕ್ತಿತ್ವಕ್ಕೆ ಸಂಬಂಧಿಸಿದ ವಿಷಯಗಳನ್ನು ಈ ನಕ್ಷತ್ರದಿಂದ ತಿಳಿದುಕೊಳ್ಳಬಹುದು. ಕೆಲವು ನಕ್ಷತ್ರಪುಂಜಗಳನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ನಕ್ಷತ್ರಪುಂಜಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಇತರರಿಗಿಂತ ಭಿನ್ನವಾಗಿಸುವ 4 ನಕ್ಷತ್ರಗಳ ಬಗ್ಗೆ ತಿಳಿಯೋಣ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಕ್ಷತ್ರ ಎಂದರೇನು ವೈದಿಕ ಜ್ಯೋತಿಷ್ಯದಲ್ಲಿ ನಕ್ಷತ್ರಪುಂಜಗಳ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ, ವಿದ್ವಾಂಸರು ರಾಶಿಚಕ್ರವನ್ನು 27 ವಿಭಿನ್ನ ನಕ್ಷತ್ರಪುಂಜಗಳಲ್ಲಿ ವಿಂಗಡಿಸಿದ್ದಾರೆ. ಪ್ರತಿ ನಕ್ಷತ್ರಪುಂಜವು ನಿಖರವಾಗಿ 13 ಡಿಗ್ರಿ ಮತ್ತು ಒಟ್ಟು 20 ನಿಮಿಷಗಳ ದೂರದಲ್ಲಿರುತ್ತದೆ. ಜ್ಯೋತಿಷಿಗಳು ಅಶ್ವಿನಿ ನಕ್ಷತ್ರದಿಂದ ನಕ್ಷತ್ರವನ್ನು ಲೆಕ್ಕಾಚಾರ ಮಾಡಲು ಪ್ರಾರಂಭಿಸುತ್ತಾರೆ. ಮತ್ತು 0 ರಿಂದ 30 ಡಿಗ್ರಿಗಳವರೆಗೆ ವೃತ್ತಾಕಾರದ ಚಲನೆಯಲ್ಲಿ ರೇವತಿ ನಕ್ಷತ್ರದೊಂದಿಗೆ ಕೊನೆಯಾಗುತ್ತದೆ. ನಕ್ಷತ್ರಗಳ ಪೈಕಿ 4 ನಕ್ಷತ್ರಗಳಲ್ಲಿ ಜನಿಸಿದ ಮಕ್ಕಳು ಅದೃಷ್ಟವಂತರಾಗಿರುತ್ತಾರೆ ಎಂದು ಹೇಳಲಾಗುತ್ತದೆ.
ಅಶ್ವಿನಿ ನಕ್ಷತ್ರ ರಾಶಿಚಕ್ರದ ಮೊದಲ ಚಂದ್ರನ ನಕ್ಷತ್ರಪುಂಜವಾಗಿರುವುದರಿಂದ, ಅಶ್ವಿನಿ ನಕ್ಷತ್ರವನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಈ ನಕ್ಷತ್ರದಲ್ಲಿ ಹುಟ್ಟಿದ ಮಕ್ಕಳು ತೀಕ್ಷ್ಣವಾದ ಶಕ್ತಿ, ಘನತೆ ಮತ್ತು ದೃಢ ಮನಸ್ಸನ್ನು ಹೊಂದಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದ ಮಕ್ಕಳು, ಕೆಲವು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಅವುಗಳೆಂದರೆ 1- ತನ್ನ ಕೆಲಸವನ್ನು ಅತ್ಯಂತ ವೇಗವಾಗಿ ಪೂರೈಸುವುದು. 2-ಸಕಾರಾತ್ಮಕ ಚಿಂತನೆಯೊಂದಿಗೆ ಮುಂದುವರಿಯುವುದು . 3- ಕೆಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.
ಭರಣಿ ನಕ್ಷತ್ರ ಭರಣಿ ನಕ್ಷತ್ರದಲ್ಲಿ ಹುಟ್ಟುವ ಮಕ್ಕಳು ತುಂಬಾ ಧೀಮಂತರು ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಶಿಚಕ್ರದ ಎರಡನೇ ನಕ್ಷತ್ರಪುಂಜವಾಗಿರುವುದರಿಂದ, ಭರಣಿ ನಕ್ಷತ್ರವು ತನ್ನ ಅಧಿಪತಿ ಶುಕ್ರನ ಪ್ರಭಾವ ಹೊಂದಿರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದ ಮಕ್ಕಳು ಈ ಗುಣಗಳನ್ನು ಹೊಂದಿದ್ದಾರೆ: 1- ಆಸೆ ಮತ್ತು ತ್ಯಾಗದ ಭಾವನೆ. 2- ಮಾತು ಕಡಿಮೆ ಕೆಲಸ ಹೆಚ್ಚು 3- ಮನಮೋಹಕ ಕಣ್ಣುಗಳು ಮತ್ತು ಮುಖದ ಮೇಲೆ ಆಕರ್ಷಕ ನಗು. 4- ಅತ್ಯಂತ ಧೈರ್ಯ ಶಾಲಿಗಳಾಗಿರುತ್ತಾರೆ
ಪುಷ್ಯ ನಕ್ಷತ್ರ ಪುಷ್ಯ ನಕ್ಷತ್ರವು ರಾಶಿಚಕ್ರದ ಎಂಟನೇ ನಕ್ಷತ್ರವಾಗಿದೆ. ಪುಷ್ಯ ನಕ್ಷತ್ರವು ಎಲ್ಲಾ ಚಂದ್ರನ ರಾಶಿಗಳಲ್ಲಿ ಹೆಚ್ಚು ಗುಣಗಳನ್ನು ಹೊಂದಿರುವ ನಕ್ಷತ್ರವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದ ಮಕ್ಕಳು ತೀಕ್ಷ್ಣವಾದ ಮನಸ್ಸಿನವರು. ಈ ನಕ್ಷತ್ರದಲ್ಲಿ ಹುಟ್ಟಿದ ಮಕ್ಕಳು ಈ ಗುಣಗಳ ಒಡೆಯರಾಗಿರುತ್ತಾರೆ. 1- ಪಾಲಕತ್ವದ ಗುಣ. 2- ಆಧ್ಯಾತ್ಮಿಕತೆಯಲ್ಲಿ ನಂಬಿಕೆ ಇರುತ್ತದೆ. 3. ಸಂಬಂಧಗಳು, ಜನರು ಮತ್ತು ಸನ್ನಿವೇಶಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. 4.-ಸುತ್ತಲಿನ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ.
ಮಾಘ ನಕ್ಷತ್ರ ಇದು ರಾಶಿಚಕ್ರದ ಹತ್ತನೇ ನಕ್ಷತ್ರವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದ ಮಕ್ಕಳು ಗೌರವಾನ್ವಿತ ಮತ್ತು ರಾಜ ಸ್ವಭಾವದಿಂದ ಹುಟ್ಟಿನಿಂದಲೇ ನಾಯಕರಾಗಿ ಬೆಳೆಯುತ್ತಾರೆ. ಈ ಮಕ್ಕಳು ಯಾವ ಕ್ಷೇತ್ರಕ್ಕೆ ಹೋದರೂ ಅದರಲ್ಲಿ ಮಿಂಚುತ್ತಾರೆ. ಇದಲ್ಲದೆ, ಈ ರಾಶಿಯಲ್ಲಿ ಜನಿಸಿದ ಮಕ್ಕಳು ಈ ಗುಣಗಳನ್ನು ಹೊಂದಿರುತ್ತಾರೆ. 1- ತಮ್ಮ ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡಲು ಸಾಧ್ಯವಾಗುತ್ತದೆ. 2-ವೆಚ್ಚಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. 3- ಪೋಷಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ.