Coconut Water Intake At Night: ನಿತ್ಯ ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿ, ಬೆಳಗ್ಗೆ ಶರೀರದಲ್ಲಾಗಲಿವೆ 5 ಬದಲಾವಣೆಗಳು

Benefits Of Drinking Coconut Water At Night - ತೆಂಗಿನ ನೀರು ಅಥವಾ ಎಳನೀರು ಕುಡಿಯಲು ಸರಿಯಾದ ಸಮಯ: ತೆಂಗಿನ ನೀರು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಹೆಚ್ಚಿನ ಜನರು ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಲು ಸರಿಯಾದ ಸಮಯ ಎಂದು ಹೇಳುತ್ತಾರೆ. ಆದರೆ ರಾತ್ರಿ ಹೊತ್ತು ತೆಂಗಿನ ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳನ್ನು ನೀಡುತ್ತದೆ ಎಂದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು.
 

Coconut Water For Morning Better Health - ಹಿರಿಯರು, ಮಕ್ಕಳು, ರೋಗಿಗಳು ಮತ್ತು ಗರ್ಭಿಣಿಯರಿಗೆ ತೆಂಗಿನ ನೀರು ಸೇವನೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ ಇದು ಏಕಕಾಲದಲ್ಲಿ ಅನೇಕ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುವ ಒಂದು ಪಾನೀಯವಾಗಿದೆ. ಉದಾಹರಣೆಗೆ ವಿಟಮಿನ್ ಎ, ಎಲೆಕ್ಟ್ರೋಲೈಟ್‌ಗಳು, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇತ್ಯಾದಿಗಳು ಇದರಲ್ಲಿವೆ. ಜನರು ಬೆಳಿಗ್ಗೆ, ಸಂಜೆ ಅಥವಾ ಹಗಲಿನಲ್ಲಿ ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಸೇವಿಸುತ್ತಾರೆ. ಆದರೆ ರಾತ್ರಿಯ ಹೊತ್ತು  ಎಳನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ?  ಹೌದು, ಇದು ನಿಜ, ಆದರೆ, ಮಧುಮೇಹಿಗಳು ರಾತ್ರಿಯಲ್ಲಿ ಇದನ್ನು ಕುಡಿದ ತಕ್ಷಣ ಮಲಗಬಾರದು, ಇತರ ಜನರು ಮಲಗುವ ಮೊದಲು ಇದನ್ನು ಕುಡಿಯಬಹುದು. ವಾಸ್ತವದಲ್ಲಿ, ರಾತ್ರಿಯಲ್ಲಿ ಇದನ್ನು ಕುಡಿಯುವುದು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಇದಲ್ಲದೇ ರಾತ್ರಿ ವೇಳೆ ಎಳನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. 

 

ಇದನ್ನೂ ಓದಿ-Fenugreek Tea: ಮೆಂತೆ ಚಹಾ ಸೇವನೆಯಿಂದ ಆರೋಗ್ಯಕ್ಕೆ ಅದ್ಭುತ ಲಾಭಗಳು ಸಿಗುತ್ತವೆ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
      

1 /5

1. ಮಲಬದ್ಧತೆ ನಿವಾರಣೆ - ಮಲಬದ್ಧತೆಯ ಸಮಸ್ಯೆಯ ನಿವಾರಣೆಗೆ ಎಳನೀರು ತುಂಬಾ ಸಹಾಯಕವಾಗಿದೆ. ಸಾಮಾನ್ಯವಾಗಿ ಮಲಬದ್ಧತೆಯ ಸಮಸ್ಯೆ ಇರುವವರು ರಾತ್ರಿ ಮಲಗುವ ಮೊದಲು ಎಳನೀರನ್ನು ಕುಡಿಯಬೇಕು. ತೆಂಗಿನಕಾಯಿಯಲ್ಲಿರುವ ಹೆಚ್ಚಿನ ಫೈಬರ್ ಮಲಬದ್ಧತೆಯನ್ನು ತ್ವರಿತವಾಗಿ ನಿವಾರಿಸುತ್ತದೆ. ಇದಲ್ಲದೆ, ಕೆಲವು ರಾತ್ರಿಗಳ ಕಾಲ ಈ ಕೆಲಸವನ್ನು ನಿಯಮಿತವಾಗಿ ಮಾಡುವುದರಿಂದ ಹೊಟ್ಟೆ ಸೇರಿದಂತೆ ಮೂತ್ರಪಿಂಡ, ಯಕೃತ್ತು ಮತ್ತು ಕರುಳನ್ನು ಸ್ವಚ್ಛಗೊಳಿಸಲು ಇದು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ನಿಮಗೆ ಅಲ್ಸರ್ ಸಮಸ್ಯೆ ಇರುವುದಿಲ್ಲ.

2 /5

2. ದೌರ್ಬಲ್ಯದ ಅನುಭವ ನಿವಾರಣೆ - ಸಾಮಾನ್ಯವಾಗಿ ಕೆಲ ಜನರಿಗೆ ಬೆಳಗ್ಗೆ ಎದ್ದಾಗ ಆಗಾಗ್ಗ ದೌರ್ಬಲ್ಯದ ಅನುಭವ ಉಂಟಾಗುತ್ತದೆ. ದೇಹದಲ್ಲಿ ರಕ್ತದ ಕೊರತೆಯಿಂದ ಈ ರೀತಿ ಉಂಟಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ಏಳನೀರಿನಲ್ಲಿನ ಕಬ್ಬಿಣಾಂಶ ರಕ್ತದ ಕೊರತೆಯನ್ನು ನೀಗಿಸುತ್ತದೆ. ಇದಲ್ಲದೇ ಮೆಗ್ನೀಸಿಯಮ್, ಪೊಟ್ಯಾಶಿಯಂ, ವಿಟಮಿನ್ ಎ ಮತ್ತು ವಿಟಮಿನ್ ಬಿ ದೇಹದಲ್ಲಿನ ಶಕ್ತಿಯನ್ನು ಕಾಪಾಡುತ್ತದೆ, ಹೇಗಾಗಿ ಬೆಳಗ್ಗೆ ಎದ್ದ ತಕ್ಷಣ ನಿಮಗೆ ದೌರ್ಬಲ್ಯದ ಅನುಭವ ಉಂಟಾಗುವುದಿಲ್ಲ.

3 /5

3. ಮುಖದಲ್ಲಿ ಹೊಳಪು ಕಾಣಿಸಿಕೊಳ್ಳಲಿದೆ - ಎಳನೀರು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದರ ವಿಟಮಿನ್ ಬಿ 2 ಮತ್ತು ವಿಟಮಿನ್ 3 ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಮುಖದಲ್ಲಿನ ಸುಕ್ಕುಗಳು ಅಥವಾ ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ಚರ್ಮದಲ್ಲಿ ಜಲಸಂಚಯನವನ್ನು ಹೆಚ್ಚಿಸುತ್ತದೆ ಮತ್ತು ಇದರಿಂದಾಗಿ ಚರ್ಮವು ಮೃದುವಾಗುತ್ತದೆ ಮತ್ತು ಸುಕ್ಕುಗಟ್ಟುವುದಿಲ್ಲ. ಇದು ದೇಹದಲ್ಲಿನ ರಕ್ತ ಪರಿಚಲನೆ ಸುಧಾರಿಸುವ ಮತ್ತು ದೇಹವನ್ನು ನಿರ್ವಿಷಗೊಳಿಸುವ ಮೂಲಕ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

4 /5

4. ಕಡಿಮೆ ರಕ್ತದೊತ್ತಡ ಸಮಸ್ಯೆ ನಿವಾರಣೆಯಾಗಿ, ತೂಕ ಇಳಿಕೆಗುತ್ತದೆ - ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಲೋ ಬಿಪಿ ಸಮಸ್ಯೆ ಕಾಡುತ್ತದೆ. ಈ ಕಾರಣದಿಂದಾಗಿ, ಅವರು ಬೇಗನೆ ಎದ್ದು ಕೆಲಸ ಮಾಡಲು ಬಯಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾತ್ರಿಯಲ್ಲಿ ಎಳನೀರನ್ನು ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆಗೆ ಸಹಾಯ ಸಿಗುತ್ತದೆ. ಇದಲ್ಲದೆ, ತೂಕ ಇಳಿಕೆಯ ಬಗ್ಗೆ ಯೋಚಿಸುತ್ತಿರುವವರಿಗೂ ಕೂಡ ಇದು ಪ್ರಯೋಜನಕಾರಿಯಾಗಿದೆ. ಏಕೆಂದರೆ ಮೊದಲನೆಯದಾಗಿ ಇದು ಚಯಾಪಚಯ ದರವನ್ನು ವೇಗಗೊಳಿಸುತ್ತದೆ ಮತ್ತು ಕೊಬ್ಬನ್ನು ಸುಡುತ್ತದೆ. ಎರಡನೆಯದಾಗಿ, ಇದು ಬೆಳಗ್ಗೆ ವ್ಯಾಯಾಮ ಮತ್ತು ಯೋಗ ಮಾಡಲು ಶಕ್ತಿಯನ್ನು ನೀಡುತ್ತದೆ, ಇದು ತೂಕ ನಷ್ಟಕ್ಕೆ ಕಾರಣವಾಗುತ್ತದೆ.

5 /5

5. ಉರಿಯೂತ ಮತ್ತು ನೋವು ನಿವಾರಕ - ಎಳನೀರನ್ನು ಹೆಚ್ಚಾಗಿ ಶಕ್ತಿ-ಉತ್ತೇಜಿಸುವ ಪಾನೀಯ ಎಂದು ಬಳಸಲಾಗುತ್ತದೆ, ಇನ್ನೊಂದೆಡೆ ಇದು ದೇಹವನ್ನು ತಂಪಾಗಿಸುತ್ತದೆ, ಇದು ಕೈ ಮತ್ತು ಪಾದಗಳಲ್ಲಿ ಉರಿಯುವ ಸಂವೇದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಎಳನೀರಿನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಉತ್ತಮ ಮತ್ತು ನಿದ್ರೆಗೆ ಸಹಾಯ ಮಾಡುವ ಖನಿಜಗಳಿವೆ. ಇದು ಬೆಳಗ್ಗೆ ಎದ್ದ ತಕ್ಷಣ ಅನುಭವಕ್ಕೆ ಬರುವ ದೇಹದ ನೋವು ಮತ್ತು ಸ್ನಾಯು ನೋವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.