ನೀವು ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಗ್ರಾಹಕರಾಗಿದ್ದರೆ ಅಥವಾ ಆದಾಯ ತೆರಿಗೆ ರಿಟರ್ನ್ ಅನ್ನು ತಡವಾಗಿ ಸಲ್ಲಿಸಿದ್ದರೆ ಮತ್ತು ಇನ್ನೂ ಪರಿಶೀಲಿಸದಿದ್ದರೆ, ಆಗಸ್ಟ್ 31 ರ ಗಡುವು ನಿಮಗೆ ಮುಖ್ಯವಾಗಿರುತ್ತದೆ.
ಬೆಂಗಳೂರು : ಈಗ ಆಗಸ್ಟ್ ತಿಂಗಳ ಅಂತ್ಯಕ್ಕೆ ಕೆಲವೇ ಕೆಲವು ದಿನಗಳು ಮಾತ್ರ ಉಳಿದಿವೆ. ಈ ಮಧ್ಯೆ ಈ ತಿಂಗಳ ಒಳಗೆ ಪೂರೈಸಲೇ ಬೇಕಾದ ಕೆಲವು ಕೆಲಸಗಳಿವೆ. ಅಂದರೆ ಆಗಸ್ಟ್ 31 ರ ಒಳಗೆ ಈ ಕೆಲಸವನ್ನು ಮುಗಿಸಲೇ ಬೇಕಾಗುತ್ತದೆ. ಇಲ್ಲವಾದರೆ ನಷ್ಟ ಅನುಭವಿಸಬೇಕಾಗುತ್ತದೆ. ಹಾಗಿದ್ದರೆ ಆ ಕೆಲಸಗಳು ಯಾವುವು ನೋಡೋಣ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನೀವು ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಗ್ರಾಹಕರಾಗಿದ್ದರೆ ಅಥವಾ ಆದಾಯ ತೆರಿಗೆ ರಿಟರ್ನ್ ಅನ್ನು ತಡವಾಗಿ ಸಲ್ಲಿಸಿದ್ದರೆ ಮತ್ತು ಇನ್ನೂ ಪರಿಶೀಲಿಸದಿದ್ದರೆ, ಆಗಸ್ಟ್ 31 ರ ಗಡುವು ನಿಮಗೆ ಮುಖ್ಯವಾಗಿರುತ್ತದೆ. ಇವುಗಳನ್ನು ಸಕಾಲದಲ್ಲಿ ಮಾಡದಿದ್ದರೆ ಆರ್ಥಿಕವಾಗಿ ನಷ್ಟವನ್ನು ಎದುರಿಸಬೇಕಾಗುತ್ತದೆ.
ನೀವು ಪಿಎಂ ಕಿಸಾನ್‌ನ ಫಲಾನುಭವಿಯಾಗಿದ್ದರೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಅಪ್‌ಡೇಟ್ ಆಗಿರುವುದು ಮುಖ್ಯ. ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈಗ ಇಕೆವೈಸಿ ಗಡುವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ಇದಕ್ಕೂ ಮೊದಲು ಈ ಗಡುವನ್ನು ಜುಲೈ 31 ಎಂದು ನಿಗದಿ ಮಾಡಲಾಗಿತ್ತು. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 12 ನೇ ಕಂತು ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. ಈ ಯೋಜನೆಯಡಿ, ನೋಂದಾಯಿತ ರೈತರು 2 ಸಾವಿರ ರೂಪಾಯಿಗಳಂತೆ ವರ್ಷಕ್ಕೆ 6 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ. ಆದರೆ ಮುಂದಿನ ಕಂತಿನ ಲಾಭ ಪಡೆಯಲು KYC ಮಾಡಿಸುವುದು ಅನಿವಾರ್ಯವಾಗಿರುತ್ತದೆ.
ನೀವು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಾಗಿದ್ದರೆ, ಆಗಸ್ಟ್ 31 ರೊಳಗೆ KYC ಅನ್ನು ಪೂರ್ಣಗೊಳಿಸಬೇಕು. ಈ ಬಾರಿ KYC ಅನ್ನು ಗಡುವಿನೊಳಗೆ ಪೂರ್ಣಗೊಳಿಸದಿದ್ದರೆ, ಖಾತೆಯನ್ನು ತಡೆಹಿಡಿಯಬಹುದು ಎಂದು ಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ. ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳ ಪ್ರಕಾರ, ಗ್ರಾಹಕರ KYC ಅನ್ನು 31 ಮಾರ್ಚ್ 2022 ರೊಳಗೆ ಪೂರ್ಣಗೊಳಿಸದಿದ್ದರೆ, ಅವರು ಆಗಸ್ಟ್ 31 ರೊಳಗೆ ಶಾಖೆಗೆ ಭೇಟಿ ನೀಡಿ ಈ ಕಾರ್ಯವನ್ನು ಪೂರ್ಣಗೊಳಿಸಬೇಕು.
ನೀವು ತೆರಿಗೆ ಪಾವತಿದಾರರಾಗಿದ್ದರೆ, ಆಗಸ್ಟ್ 31 ರ ಮೊದಲು ಪರಿಶೀಲನೆ ನಡೆಸುವುದು ಅಗತ್ಯ. ಸರ್ಕಾರದ ಆದೇಶದ ಪ್ರಕಾರ, ತೆರಿಗೆದಾರರು ಜುಲೈ 31 ರ ನಂತರ ರಿಟರ್ನ್ ಸಲ್ಲಿಸಿದರೆ, ಅವರು ಪರಿಶೀಲನೆಗೆ ಕೇವಲ 30 ದಿನಗಳನ್ನು ಮಾತ್ರ ಪಡೆಯುತ್ತಾರೆ. ಆದರೆ ಜುಲೈ 31 ರವರೆಗೆ ರಿಟರ್ನ್ಸ್ ಸಲ್ಲಿಸುವವರಿಗೆ ಮೊದಲಿನಂತೆ 120 ದಿನಗಳ ಪರಿಶೀಲನೆಗೆ ಅವಕಾಶವಿದೆ.