Modimosa ಎಂದು ಹ್ಯಾಷ್‌ ಟ್ಯಾಗ್‌ ಬಳಸಿ ಕಾಂಗ್ರೇಸ್‌ ಟ್ವೀಟ್‌ ..!

Congress : ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಅವರನ್ನು ಹಲವು ಪ್ರಶ್ನೆ ಕೇಳಿದೆ.

Congress Tweet : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಲ್ಳಲು ಭಾನುವಾರ ರಾಜ್ಯಕ್ಕೆ ಆಗಮಿಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ #ModiMosa ಎಂಬ ಹ್ಯಾಷ್‌ಟ್ಯಾಗ್ ಬಳಕೆ ಮಾಡಿಕೊಂಡು ಟ್ವೀಟ್ ಮಾಡುವ ಮೂಲಕ ನರೇಂದ್ರ ಮೋದಿಯನ್ನು ಸ್ವಾಗತಿಸಿದೆ, ರಾಜ್ಯ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ. 

Photo Credits : @INC Karnataka 

1 /6

ಪೆಟ್ರೋಲ್, ಡೀಸೆಲ್ ಬೆಲೆ ಕೈ ಸುಡುತ್ತಿವೆ, ಅಡುಗೆ ಅನಿಲದ ಬೆಲೆ ಮೈ ಸುಡುತ್ತಿವೆ! ಅವರೇ, ನಿಮ್ಮ ಅಚ್ಚೇ ದಿನಗಳು ಜನರ ಬದುಕನ್ನು ಭಾರವಾಗಿಸುತ್ತಿವೆ, ಬಿಜೆಪಿ ಈಗಾಗಲೇ ಜನರ ಭವಿಷ್ಯದ ಭರವಸೆ ಕಿತ್ತುಕೊಂಡಿರುವಾಗ "ಬಿಜೆಪಿಯೇ ಭರವಸೆ" ಎನ್ನುವುದು ಜೋಕ್ ಅಲ್ಲದೆ ಇನ್ನೇನು? #ModiMosa #narendramodi #bsybjp   

2 /6

ಡಬಲ್ ಇಂಜಿನ್ ವೇಗ ಸಿಕ್ಕಿದ್ದು ಅಭಿವೃದ್ಧಿಗಲ್ಲ, ಭ್ರಷ್ಟಾಚಾರಕ್ಕೆ ಮಾತ್ರ! ಕರ್ನಾಟಕದಲ್ಲಿ ಡಬಲ್ ವೇಗದಲ್ಲಿ ಸಾಗುತ್ತಿರುವ 40% ಲೂಟಿಯ ಬಗ್ಗೆ "ನಾ ಖಾವುಂಗಾ ನಾ ಖಾನೆದುಂಗಾ" ಡೈಲಾಗ್ ಖ್ಯಾತಿಯ ಅವರು ತೆಗೆದುಕೊಂಡ ಕ್ರಮಗಳೇನು? ರಾಜ್ಯದಲ್ಲಿನ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಒಂದೂ ಪದ ಮಾತಾಡದಿರುವುದೇಕೆ? #ModiMosa #narendramodi #bsybjp   

3 /6

 ಅವರೇ, ನೀವು ಹಿಂದೊಮ್ಮೆ ಬೆಂಗಳೂರಿಗೆ ಬಂದಾಗ ಎರಡೇ ದಿನಕ್ಕೆ ಕಿತ್ತುಬಂದ ರಸ್ತೆಯಲ್ಲಿ "ವಿಕಾಸ್" ಕಂಡಿತ್ತು! ಮತ್ತೊಮ್ಮೆ ನೀವು ಹೀಗೆ ಹೋಗಿ ಹಾಗೆ ಬರುವುದರಲ್ಲಿ 'ಮಾಡಾಳ್' ಭ್ರಷ್ಟಾಚಾರ ಹೊರಬಂದಿದೆ. ಭ್ರಷ್ಟಾಚಾರದ ಪರ್ವತವನ್ನೇ ಹೊತ್ತಿರುವ ಪರವಾಗಿ ಮತ ಕೇಳಲು ನಾಚಿಕೆ ಎನಿಸುವುದಿಲ್ಲವೇ? #ModiMosa #narendramodi #bsybjp   

4 /6

"ಭ್ರಷ್ಟಾಚಾರಕ್ಕೆ ಬಿಜೆಪಿಯೇ ಭರವಸೆ, ಭ್ರಷ್ಟರಿಗೆ ಮೋದಿಯೇ ಭರವಸೆ"! 40% ಕಮಿಷನ್ ಲೂಟಿಯ ಬಗ್ಗೆ ಹಲವು ಪತ್ರಗಳನ್ನು ಬರೆದರೂ ಇತ್ತ ಸುಳಿಯದ ಚುನಾವಣೆಗಾಗಿ ವಾರಕ್ಕೊಮ್ಮೆ ಕರ್ನಾಟಕದಲ್ಲಿ ಚಾಪೆ ಹಾಸಿ ಮಲಾಗುತ್ತಿರುವುದು ಅವರ ಆತ್ಮವಂಚಕತನಕ್ಕೆ ಸಾಕ್ಷಿ. PSI ಹಗರಣದಿಂದ ನೊಂದ ಯುವಕರ ಬಗ್ಗೆ ಮೋದಿ ಮಾತಾಡುವರೇ?   #ModiMosa #narendramodi #bsybjp   

5 /6

ರಾಜ್ಯದಲ್ಲಿ ನೆರೆ ಬಂದಾಗ ಸಿಎಂ ಆಗಿದ್ದ ಅವರು ಪ್ರಧಾನಿ ಕಚೇರಿ ಅಲೆದರೂ ಭೇಟಿಗೆ ಅವಕಾಶ ಕೊಟ್ಟಿರಲಿಲ್ಲ. ತಿಂಗಳುಗಟ್ಟಲೆ ಸಂಪುಟ ರಚನೆಗೆ ಅವಕಾಶ ಕೊಡದೆ ಇಳಿವಯಸ್ಸಿನ BSYರನ್ನು ಗೋಳು ಹೊಯ್ದುಕೊಂಡ ಅವರು ಕಣ್ಣೀರು ಹಾಕಿಸಿ ಅಧಿಕಾರ ಕಿತ್ತುಕೊಂಡಿದ್ದೇಕೆ ಎಂಬ ನಿಗೂಢ ಪ್ರಶ್ನೆಗೆ ಉತ್ತರಿಸುವರೇ? #ModiMosa #narendramodi #bsybjp 

6 /6

ನೆರೆ ಬಂದಾಗ ಬರಲಿಲ್ಲ,ಬರ ಬಂದಾಗ ಬರಲಿಲ್ಲ, ಕರ್ನಾಟಕಕ್ಕೆ ಆಕ್ಸಿಜನ್ ಕೊಡಲಿಲ್ಲ,ವ್ಯಾಕ್ಸಿನ್ ನೀಡಲಿಲ್ಲ, GST ಪಾಲು ಸಿಗಲಿಲ್ಲ. ಅವರು ಪ್ರಧಾನಿ ಕಚೇರಿಯ ಬಾಗಿಲು ಕಾದರೂ ಭೇಟಿಯಾಗಿರಲಿಲ್ಲ. ಚುನಾವಣೆಗಾಗಿ ಹಲ್ಲು ಕಿಸಿದು, ಕೈಬೀಸಿ ಹೋಗಲು ಬರುವ ಕರ್ನಾಟಕಕ್ಕೆ ಮಾಡಿದ್ದು ಮಹಾ ವಂಚನೆ. #ModiMosa #narendramodi #bsybjp