ಫಿಟ್ ಆಗಿರಲು ನಿಮ್ಮ ರಾತ್ರಿ ಭೋಜನದಲ್ಲಿರಲಿ ಈ ತರಕಾರಿಗಳು

                                

ಆರೋಗ್ಯವಂತರಾಗಿ, ಫಿಟ್ ಆಗಿರಬೇಕು ಎಂಬುದು ಎಲ್ಲರ ಬಯಕೆ. ಆದರೆ, ಇದಕ್ಕಾಗಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಕೂಡ ತುಂಬಾ ಅಗತ್ಯ. ಆರೋಗ್ಯ ತಜ್ಞರ ಪ್ರಕಾರ, ನಿತ್ಯ ರಾತ್ರಿ ಭೋಜನದಲ್ಲಿ ಕೆಲವು ತರಕಾರಿಗಳನ್ನು ತಿನ್ನುವುದರಿಂದ ಆರೋಗ್ಯಕರವಾದ, ಫಿಟ್ ಆದ ದೇಹವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಆ ತರಕಾರಿಗಳು ಯಾವುವು ತಿಳಿಯೋಣ... 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಉತ್ತಮ  ಆರೋಗ್ಯಕ್ಕೆ ಸೋರೆಕಾಯಿ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ನಿಮ್ಮ ರಾತ್ರಿ ಭೋಜನದಲ್ಲಿ ಸೋರೆಕಾಯಿ ತಿನ್ನುವುದರಿಂದ ದುಪ್ಪಟ್ಟು ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. 

2 /5

ಎಲ್ಲಾ ಋತುವಿನಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಹಣ್ಣು ಬಾಳೆಹಣ್ಣು. ತೂಕ ಇಳಿಕೆಗೆ ಬಾಳೆಹಣ್ಣು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ರಾತ್ರಿ ವೇಳೆ ಊಟದ ಸಮಯದಲ್ಲಿ ಬಾಳೆ ಹಣ್ಣನ್ನು ತಿನ್ನುವುದರಿಂದ ಹೊಟ್ಟೆಯ ಕೊಬ್ಬು ಕರಗುತ್ತದೆ ಎನ್ನಲಾಗುವುದು. 

3 /5

ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದಂಶವಿರುವುದರಿಂದ ಇದನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಪಾಲಕ್ ಸೊಪ್ಪನ್ನು ವರದಾನ ಎಂದು ಪರಿಗಣಿಸಲಾಗುತ್ತದೆ. ರಾತ್ರಿ ಭೋಜನದಲ್ಲಿ ಪಾಲ ಸೊಪ್ಪನ್ನು ನಿಮ್ಮ ಭಾಗವಾಗಿಸುವುದರಿಂದ ಹೆಚ್ಚಿನ ಪ್ರಯೋಜನ ಲಭ್ಯವಾಗುತ್ತದೆ. 

4 /5

ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರು ನಿತ್ಯ ನಿಮ್ಮ ರಾತ್ರಿ ಭೋಜನದಲಿ ಬ್ರೊಕೊಲಿಯನ್ನು ತಿನ್ನಲು ಪ್ರಯತ್ನಿಸಬಹುದು. 

5 /5

ಸೌತೆಕಾಯಿಯನ್ನು ಹಲವು ರೋಗಗಳಿಗೆ ರಾಮಬಾಣ ಎಂದು ಪರಿಗಣಿಸಲಾಗಿದೆ. ನಿತ್ಯ ರಾತ್ರಿ ಭೋಜನದ ವೇಳೆ ಸೌತ್ಕಾಯಿನನು ಸೇವಿಸುವುದರಿಂದ ಇದು ತೂಕ ಇಳಿಕೆಗೂ ಕೂಡ ಸಹಕಾರಿ ಎಂದು ಹೇಳಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.