ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರೂ, ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿ ಒಂದಾದ ಜೋಡಿಗಳಿವು .!

 ನಾವಿಲ್ಲಿ ಹೇಳ ಹೊರಟಿರುವುದು ವಿಚ್ಛೇದನ ಪಡೆದ ಜೋಡಿಗಳ ಕತೆಯಲ್ಲ. ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಕೊನೆ ಕ್ಷಣದಲ್ಲಿ ಮನಸ್ಸು  ಬದಲಾಯಿಸಿ ಮತ್ತೆ ಒಂದಾದ ಜೋಡಿಗಳ ಬಗ್ಗೆ.

Celebs Who Give Marriage Second Chance: ಸಾಮಾನ್ಯವಾಗಿ ಪ್ರತಿಯೊಬ್ಬರ ವೈವಾಹಿಕ ಜೀವನವು ಸಮಸ್ಯೆಗಳನ್ನು ಎದುರಿಸುತ್ತದೆ. ಅದರಲ್ಲೂ ಮನರಂಜನಾ ಲೋಕದಲ್ಲಿ ಇಂತಹ ಪ್ರಕರಣಗಳು ಸ್ವಲ್ಪ ಹೆಚ್ಚು ಎಂದರೂ ತಪ್ಪಲ್ಲ. ಇಲ್ಲಿ ಮದುವೆಯ ಕೆಲವು ವರ್ಷಗಳ ನಂತರ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಅನೇಕ ಜೋಡಿಗಳಿವೆ. ಆದರೆ ನಾವಿಲ್ಲಿ ಹೇಳ ಹೊರಟಿರುವುದು ವಿಚ್ಛೇದನ ಪಡೆದ ಜೋಡಿಗಳ ಕತೆಯಲ್ಲ. ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಕೊನೆ ಕ್ಷಣದಲ್ಲಿ ಮನಸ್ಸು  ಬದಲಾಯಿಸಿ ಮತ್ತೆ ಒಂದಾದ ಜೋಡಿಗಳ ಬಗ್ಗೆ. ಇವರು ಮತ್ತೆ ಒಂದಾಗಿರುವುದು ಮಾತ್ರವಲ್ಲ ಸುಖಕರ ಜೀವನವನ್ನು ಕೂಡಾ ನಡೆಸುತ್ತಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /5

ಟಿವಿ ಧಾರಾವಾಹಿ ತಾರೆಯರಾದ ಚಾರು ಅಸೋಪಾ ಮತ್ತು ರಾಜೀವ್ ಸೇನ್  ದಾಂಪತ್ಯ ಯಾವಾಗಲೂ ಏರಿಳಿತಗಳೊಂದಿಗೆಯೇ ಸಾಗಿದೆ. ಮದುವೆಯ ನಂತರ ಈ ಜೋಡಿ ಎರಡು ಬಾರಿ ಬೇರೆಯಾಗಲು ನಿರ್ಧರಿಸಿತ್ತು.  ಆದರೆ ಮತ್ತೆ ಮನಸ್ಸು ಬದಲಿಸಿ, ತಮ್ಮ ಮದುವೆಗೆ ಎರಡನೇ ಅವಕಾಶ ನೀಡಿದ್ದಾರೆ.  

2 /5

ಕಾಲಿವುಡ್ ಸೂಪರ್‌ಸ್ಟಾರ್ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಕೂಡ ತಮ್ಮ  ವೈವಾಹಿಕ ಸಂಬಂಧವನ್ನು ಕೊನೆಗೊಳಿಸುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಸಮಯದ ಹಿಂದೆ ಘೋಷಿಸಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಕುಟುಂಬಗಳ ಮನವೊಲಿಸಿದ ನಂತರ, ಈ ಇಬ್ಬರೂ ಸ್ಟಾರ್‌ಗಳು ತಮ್ಮ ಎರಡನೇ ಮದುವೆಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ.

3 /5

ಬಾಲಿವುಡ್ ಸ್ಟಾರ್ ನವಾಜುದ್ದೀನ್ ಸಿದ್ದಿಕಿ ಮತ್ತು ಆಲಿಯಾ ನಡುವೆ ವಿಚ್ಛೇದನ ಕೂಡ ಇತ್ತು. ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿ ಆಲಿಯಾ ಅವರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು.  ಆದರೂ  ನವಾಜುದ್ದೀನ್ ಸಿದ್ದಿಕಿ ಮತ್ತು ಆಲಿಯಾ ಅಂತಿಮವಾಗಿ ತಮ್ಮ ಮದುವೆಗೆ ಎರಡನೇ ಅವಕಾಶವನ್ನು ನೀಡಿದರು.  

4 /5

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಕೂಡ ಪ್ರೇಮ ವಿವಾಹವಾಗಿದ್ದರು.  ಇವರಿಗೆ ಇಬ್ಬರು ಮಕ್ಕಳು.  ಆದರೆ  ಮೂಲಗಳ  ಪ್ರಕಾರ ಮೊದಲ ಮಗು ಗೌತಮ್ ಹುಟ್ಟಿದ ನಂತರ ನಮ್ರತಾ ಶಿರೋಡ್ಕರ್ ಮತ್ತು ಮಹೇಶ್ ಬಾಬು ನಡುವೆ ಮನಸ್ತಾಪ ಉಂಟಾಗಿತ್ತು. ಇದರಿಂದಾಗಿ ಈ ಸ್ಟಾರ್ ಜೋಡಿ ಸುಮಾರು 1 ವರ್ಷ ಬೇರ್ಪಟ್ಟಿತ್ತು. ವರದಿಗಳ ಪ್ರಕಾರ, ಆ ಸಮಯದಲ್ಲಿ ನಮ್ರತಾ ಶಿರೋಡ್ಕರ್ ಮಹೇಶ್ ಬಾಬುಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದರು. ನಂತರ ಇಬ್ಬರೂ ತಮ್ಮ ಮದುವೆಗೆ ಎರಡನೇ ಅವಕಾಶವನ್ನು ನೀಡಿದ್ದು, ಇದೀಗ ಒಟ್ಟಿಗೆ ಬದುಕುತ್ತಿದ್ದಾರೆ.   

5 /5

ಸಿನಿಮಾ ತಾರೆಯರಾದ ರಿಷಿ ಕಪೂರ್ ಮತ್ತು ನೀತು ಕಪೂರ್ ಮದುವೆ ಕೂಡ ಸಾಕಷ್ಟು ಏರಿಳಿತಗಳನ್ನು ಕಂಡಿತ್ತು. ನೀತು ಕಪೂರ್ ತನ್ನ ಪತಿಯ  ಕುಡಿತದ ಚಟದಿಂದ ತೊಂದರೆಗೀಡಾಗಿದ್ದರು. ಇದರಿಂದ ಈ ಮದುವೆಯ ಬಂಧದಿಂದ ಹೊರಬರಲು ನಿರ್ಧರಿಸಿದ್ದರು.  ಆದರೆ ಮತ್ತೆ  ಇಬ್ಬರೂ ರಾಜಿ ಮಾಡಿಕೊಂಡಿದ್ದರು. ಇದಾದ ಬಳಿಕ ರಿಷಿ ಕಪೂರ್ ಕೊನೆ ಉಸಿರಿರುವವರೆಗೂ ನೀತು ರಿಷಿ ಕಪೂರ್ ಜೊತೆಗೇ ಇದ್ದರು.