ಅದೃಷ್ಟಲಕ್ಷ್ಮೀ ಕೈಹಿಡಿಯಬೇಕಾದರೆ ಕನ್ನಡಿಯನ್ನು ಮನೆಯ ಈ ದಿಕ್ಕಿನಲ್ಲಿಯೇ ಇಡಿ: ಬಡತನ ದೂರಾಗಿ, ಸಮೃದ್ಧ ಜೀವನ ಆ ಕ್ಷಣದಿಂದಲೇ ಶುರುವಾಗುವುದು!

Vastu Tips for Mirror at Home: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ಇನ್ನು ವಾಸ್ತು ಶಾಸ್ತ್ರದಲ್ಲಿ, ಯಾವ ವಸ್ತುವನ್ನು ಎಲ್ಲಿಟ್ಟರೆ ಒಳಿತಾಗುವುದು? ಕೆಡುಕಾಗುವುದು? ಯಾವುದು ಮನೆಯ ವಾಸ್ತುವಿಗೆ ಸೂಕ್ತ ಎಂಬೆಲ್ಲಾ ವಿಚಾರದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /9

 ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ಇನ್ನು ವಾಸ್ತು ಶಾಸ್ತ್ರದಲ್ಲಿ, ಯಾವ ವಸ್ತುವನ್ನು ಎಲ್ಲಿಟ್ಟರೆ ಒಳಿತಾಗುವುದು? ಕೆಡುಕಾಗುವುದು? ಯಾವುದು ಮನೆಯ ವಾಸ್ತುವಿಗೆ ಸೂಕ್ತ ಎಂಬೆಲ್ಲಾ ವಿಚಾರದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

2 /9

ಇನ್ನು ಅಂತಹ ವಸ್ತುಗಳಲ್ಲಿ ಕನ್ನಡಿ ಕೂಡ ಒಂದು. ಎಲ್ಲಾದರೂ ಹೊರಡುವಾಗ ಹೆಚ್ಚಾಗಿ ಕನ್ನಡಿ ನೋಡುತ್ತೇವೆ. ಇದು ನಮ್ಮ ಮುಖಚರ್ಯೆ ಹೇಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುವ ಸಾಧನ. ಹೀಗಿರುವಾಗ ಕನ್ನಡಿಯನ್ನು ಮನೆಯಲ್ಲಿ ಸರಿಯಾದ ದಿಕ್ಕಿಗೆ ಇಡಬೇಕು. ಹೀಗೆ ಮಾಡಿದರೆ ಮನೆಗೆ ಸಮೃದ್ಧಿಯನ್ನು ತರುತ್ತದೆ.     

3 /9

ಮನೆಯಲ್ಲಿ ಕನ್ನಡಿಗಳನ್ನು ಅಳವಡಿಸುವಾಗ, ವಾಸ್ತುಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ನೀಡಬೇಕು. ವಾಸ್ತು ಪ್ರಕಾರ, ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಅದೃಷ್ಟದ ಬಾಗಿಲು ತೆರೆಯುತ್ತದೆ.  

4 /9

ಕನ್ನಡಿ ಇಡಲು ಪೂರ್ವ ಮತ್ತು ಉತ್ತರ ದಿಕ್ಕು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಉತ್ತರ ದಿಕ್ಕು ಸಂಪತ್ತಿನ ದೇವರಾದ ಕುಬೇರನ ಕೇಂದ್ರವಾಗಿದ್ದು, ಆದ್ದರಿಂದ ಈ ದಿಕ್ಕಿನಲ್ಲಿ ಕನ್ನಡಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ.     

5 /9

ಇದಲ್ಲದೆ,  ಸ್ನಾನಗೃಹದಲ್ಲಿ ಕನ್ನಡಿಯನ್ನು ಇಡುತ್ತಿದ್ದರೆ ಅದನ್ನು ಪೂರ್ವ ಅಥವಾ ಉತ್ತರದ ಗೋಡೆಗಳ ಮೇಲೆ ಇರಿಸಿ. ಇದರಿಂದ ನೆಗೆಟಿವ್ ಎನರ್ಜಿ ದೂರವಾಗಿ ಆರೋಗ್ಯ ಸುಧಾರಿಸುತ್ತದೆ.     

6 /9

ಇದರ ಹೊರತಾಗಿ ಕನ್ನಡಿಯನ್ನು ಎಂದಿಗೂ ಪಶ್ಚಿಮ ಅಥವಾ ದಕ್ಷಿಣದ ಗೋಡೆಯ ಮೇಲೆ ಇಡಬಾರದು. ಈ ದಿಕ್ಕಿನಲ್ಲಿ ಕನ್ನಡಿ ಇಡುವುದರಿಂದ ಮನೆಯ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.  

7 /9

ಹಾಗೆಯೇ ಚೂಪಾದ, ಮಸುಕಾದ ಅಥವಾ ಕೊಳಕು ಕನ್ನಡಿಯನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಅಂತಹ ಕನ್ನಡಿಯನ್ನು ಮನೆಯಲ್ಲಿ ಇಡುವುದರಿಂದ ಬಡತನ ಬರುತ್ತದೆ. ಹಾಗೆಯೇ ಕುಟುಂಬ ಸದಸ್ಯರ ಪ್ರಗತಿ ನಿಲ್ಲುತ್ತದೆ.     

8 /9

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಕನ್ನಡಿ ಇಡಬಾರದು. ಹಾಸಿಗೆಯ ಪ್ರತಿಬಿಂಬ ಕನ್ನಡಿಯಲ್ಲಿ ಗೋಚರಿಸಬಾರದು ಎಂಬ ನಂಬಿಕೆಯಿದೆ. ಹಾಗೆಯೇ ಅಡುಗೆ ಮನೆಯಲ್ಲಿ ಕನ್ನಡಿ ಹಾಕಬಾರದು. ಅದರಿಂದ ಹೊರಹೊಮ್ಮುವ ನಕಾರಾತ್ಮಕ ಶಕ್ತಿಯು ಕುಟುಂಬದ ಸದಸ್ಯರ ಆರೋಗ್ಯವನ್ನು ಹಾಳು ಮಾಡುತ್ತದೆ.  

9 /9

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.