Deep Dive Dubai: Toilet ನಿಂದ ಹಿಡಿದು ATM ವರೆಗೆ ಇಡೀ ನಗರವೇ ಇದೆ ಈ ಸ್ವಿಮ್ಮಿಂಗ್ ಪೂಲ್ ನಲ್ಲಿ

Deep Dive Dubai: ವಿಶ್ವದ ಅತ್ಯಂತ ಆಳವಾದ ಸ್ವಿಮ್ಮಿಂಗ್ ಪೂಲ್ (Deepest Swimming Pool In The World) ಅಡಿ ಒಂದು ನಗರವೇ ಮುಳುಗಿದ್ದು, ಇದರಲ್ಲಿ ಹಳೆ ಕಾರುಗಳು, ಒಂದು ಅಪಾರ್ಟ್ಮೆಂಟ್ ಅಷ್ಟೇ ಅಲ್ಲ ಒಂದು ಎಕ್ಸರ್ಸೈಜ್ ಬೈಕ್ ಕೂಡ ಇದೆ. ಹಾಗಾದರೆ ಬನ್ನಿ, ಈ ಆಳವಾದ ಸ್ವಿಮ್ಮಿಂಗ್ ಪೂಲ್ ಕುರಿತು ತಿಳಿದುಕೊಳ್ಳೋಣ.

Deep Dive Dubai: ವಿಶ್ವದ ಅತ್ಯಂತ ಆಳವಾದ ಸ್ವಿಮ್ಮಿಂಗ್ ಪೂಲ್ (Deepest Swimming Pool In The World) ಅಡಿ ಒಂದು ನಗರವೇ ಮುಳುಗಿದ್ದು, ಇದರಲ್ಲಿ ಹಳೆ ಕಾರುಗಳು, ಒಂದು ಅಪಾರ್ಟ್ಮೆಂಟ್ ಅಷ್ಟೇ ಅಲ್ಲ ಒಂದು ಎಕ್ಸರ್ಸೈಜ್ ಬೈಕ್ (Exercise Bike) ಕೂಡ ಇದೆ. ಹಾಗಾದರೆ ಬನ್ನಿ, ಈ ಆಳವಾದ ಸ್ವಿಮ್ಮಿಂಗ್ ಪೂಲ್ ಕುರಿತು ತಿಳಿದುಕೊಳ್ಳೋಣ.

 

ಇದನ್ನೂ ಓದಿ - Neem Oil Benefits: ಬೇವಿನ ಎಣ್ಣೆಯ ಬಳಕೆಯ ಬಗ್ಗೆ ನಿಮಗೆಷ್ಟು ತಿಳಿದಿದೆ? ಹಲವು ರೋಗಗಳಿಗೆ ರಾಮಬಾಣ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

1. 60 ಮೀಟರ್ ಆಳವಾಗಿದೆ ಈ ಸ್ವಿಮ್ಮಿಂಗ್ ಪೂಲ್ - ಮಿರರ್ ನಲ್ಲಿ  ಪ್ರಕಟಗೊಂಡ ವರದಿಯೊಂದರ ಪ್ರಕಾರ ಡೀಪ್ ಡೈವ್ ದುಬೈ ಹೆಸರಿನ ಈ ಸ್ವಿಮ್ಮಿಂಗ್ ಪೂಲ್ 60 ಮೀಟರ್ ಆಳವಾಗಿದೆ ಹಾಗೂ ವಿಶ್ವದ ಈ ಅತ್ಯಂತ ಆಳವಾದ ಸ್ವಿಮ್ಮಿಂಗ್ ಪೂಲ್ ಹೆಸರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್  (Guinness World Record) ನಲ್ಲಿಯೂ ಕೂಡ ಶಾಮೀಲಾಗಿದೆ. (Image: AFP via Getty Images)

2 /5

2. ಕೆಳಗಿಳಿಯಲು ಮೆಟ್ಟಿಲುಗಳು ಕೂಡ ಇವೆ - ಕಳೆದ ವಾರ ಟಿಕ್ ಟಾಕ್ ಬಳಕೆದಾರ @abdulla_alsenaani ಈ ಪೂಲ್ ಒಳಗಿನ ಕೆಲ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದರು. ಅವರು ವಿಡಿಯೋ ತುಣುಕುಗಳ ಸೀರಿಸ್ ವೊಂದನ್ನು ಕೂಡ ತೋರಿಸಿದ್ದು, ಈ ವಿಡಿಯೋ ಇಂಡೋರ್ ಪೂಲ್ ನಿಂದ ಆರಂಭವಾಗುತ್ತದೆ. ಈ ಪೂಲ್ ಒಳಗಡೆ ಪ್ರವೇಶಿಸಲು ಮೆಟ್ಟಿಲುಗಳು ಕೂಡ ಇವೆ. (Image: AFP via Getty Images)

3 /5

3. ಸ್ವಿಮ್ಮಿಂಗ್ ಪೂಲ್ ನಲ್ಲಿ ನಿರ್ಮಾಣ ಗೊಂಡಿದೆ ನಗರ - ಆದರೆ, ಮೇಲ್ಮೈ ಕೆಳಗಡೆ ಕ್ಯಾಮರಾ ಕಣ್ಣು ಹರಿದಾಗ, ಒಂದು ಸಂಪೂರ್ಣ ನಗರವನ್ನೇ ನೋಡಲಾಗಿದೆ.  ಅದರಲ್ಲಿಅಪಾರ್ಟ್ಮೆಂಟ್ ಕೂಡ ಇದ್ದು, ಹಳೆ ಬೈಕ್, ಕಾರುಗಳು, ATM, ಆಟವಾಡಲು ಕೆಲ ಗೇಮ್ ಗಳನ್ನು ಇರಿಸಲಾಗಿದೆ. ಪೂಲ್ ಒಳಗಡೆ ಕಟ್ಟಡಕ್ಕೆ ಕಿಟಕಿಗಳು ಕೂಡ ಇವೆ. ಕ್ಲಿಪ್ ವೊಂದರಲ್ಲಿ ಓರ್ವ ವ್ಯಕ್ತಿಯನ್ನು ಸ್ಪಿನ್ ಬೈಕ್ ಮಾಡುತ್ತಿರುವುದು ಕೂಡ ಕಂಡುಬರುತ್ತಿದೆ.  (Image: AFP via Getty Images)

4 /5

4. ಡೀಪ್ ಡೈವ್ ದುಬೈ ನಲ್ಲಿ 14 ಮಿಲಿಯನ್ ಲೀಟರ್ ನೀರಿದೆ - ಮತ್ತೊಂದು ವಿಡಿಯೋ ಕ್ಲಿಪ್ ನಲ್ಲಿ ಭೇಟಿ ನೀಡುವವರಿಗೆ ಅಪಾರ್ಟ್ಮೆಂಟ್ ನಲ್ಲಿ ಬಾತ ರೂಮ್ ಸಿದ್ಧವಿರುವುದನ್ನು ನೀವು ನೋಡಬಹುದು. 14 ಮಿಲಿಯನ್ ಲೀಟರ್ ನೀರು ಹೊಂದಿರುವ ಡೀಪ್ ಡೈವ್ ದುಬೈ ಅನ್ನು ಈ ವರ್ಷದ ಜೂನ್ ತಿಂಗಳಿನಲ್ಲಿ ತೆರೆಯಲಾಗಿದೆ. (Image: AFP via Getty Images)

5 /5

5. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ವಿಮ್ಮಿಂಗ್ ಪೂಲ್ ಹೆಸರು - ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಮಾಹಿತ ಪ್ರಕಾರ, ಈ ಪೂಲ್ ನಲ್ಲಿ ಧ್ವನಿ ಹಾಗೂ ಮೂಡ್ ಗೆ ತಕ್ಕ ಹಾಗೆ ಲೈಟಿಂಗ್ ಸಿಸ್ಟಮ್  (Mood Lighting Systems) ಜೊತೆಗೆ ಈಳ್ಟಾಟೀಓಣ್ ಸಿಸ್ಟಮ್ ಕೂಡ ಇದ್ದು, ಇದನ್ನು NASA ಅಭಿವೃದ್ಧಿಗೊಳಿಸಿದೆ. ಈ ವಿಶಾಲ ಗಾತ್ರದ ಪೂಲ್ ನಲ್ಲಿ ನೀವು ಸ್ಕೂಬಾ ಡೈವಿಂಗ್ ಹಾಗೂ ಫ್ರೀ ಡೈವಿಂಗ್ ಮಾಡಬಹುದಾಗಿದೆ.  (Image: AFP via Getty Images)