Deepika Padukone : ದೀಪಿಕಾ ಬೇಬಿ ಬಂಪ್ ಫೋಟೋಶೂಟ್‌..! ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪ್‌ವೀರ್

Deepika Padukone Baby Bump : ಮದುವೆಯಾದ ಆರು ವರ್ಷಗಳ ನಂತರ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಬಿಟೌನ್‌ ಕ್ಯೂಟ್‌ ಜೋಡಿ.. ಬೇಬಿ ಬಂಪ್‌ ಫೋಟೋಶೂಟ್‌ ಮಾಡಿಸಿದ್ದು, ಚಿತ್ರಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..

1 /13

ಬಾಲಿವುಡ್‌ ಕ್ಯೂಟ್‌ ಜೋಡಿಗಳಲ್ಲಿ ಒಂದಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಮಗುವಿನ ಆಗಮನಕ್ಕಾಗಿ ದಂಪತಿ ಕಾಯುತ್ತಿದ್ದಾರೆ. ಇದರ ನಡುವೆ ಬೇಬಿ ಬಂಪ್‌ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌ ನೀಡಿದ್ದಾರೆ..  

2 /13

ಫೋಟೋಗಳಲ್ಲಿ ತಾಯಿಯಾಗಲಿರುವ ದೀಪಿಕಾ ತನ್ನ ಮಗುವಿನ ಬಂಪ್ ಅನ್ನು ತೋರಿಸುತ್ತಿರುವುದನ್ನು ಕಾಣಬಹುದು.. ಕಳೆದ ಕೆಲವು ದಿನಗಳ ಹಿಂದೆ ದೀಪಿಕಾ ಆಗಲೇ ಮಗುವಿಗೆ ಜನ್ಮ ನೀಡಿದ್ದಾಗಿ ಸುದ್ದಿಯಾಗಿತ್ತು.. ಆದರೆ ಅದೇಲ್ಲಾ ಸುಳ್ಳು ಎನ್ನುವುದು ಈ ಫೊಟೋಸ್‌ ಮೂಲಕ ಜೋಡಿ ಕ್ಲಾರೀಟಿ ನೀಡಿದೆ.  

3 /13

ದೀಪಿಕಾ ಪಡುಕೋಣೆ ಮೆಟರ್ನಿಟಿ ಫೋಟೋಶೂಟ್‌ನಲ್ಲಿ ಅವರು ಕಪ್ಪು ಸೂಟ್‌ ಧರಿಸಿದ್ದಾರೆ. ಸ್ಪಷ್ಟವಾಗಿ ಮಗುವಿನ ಬಂಪ್ ಅನ್ನು ಪ್ರದರ್ಶಿಸಿದ್ದಾರೆ. ಡಿಂಪಲ್ ಸ್ಮೈಲ್ ನೋಡಿದ್ರೆ ದೀಪಿಕಾ ಖುಷಿ ಎಷ್ಟಿದೆ ಅಂತ ಗೊತ್ತಾಗುತ್ತದೆ.. ಅಲ್ಲದೆ ರಣವೀರ್‌ ಸಹ ಅಪ್ಪನಾಗಲಿದ್ದು, ಆ ನಗು ಅವರ ಮುಖದಲ್ಲಿ ಸ್ಪಷ್ಟವಾಗಿದೆ.  

4 /13

ಅನೇಕ ಊಹಾಪೋಹಗಳ ನಂತರ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಂತಿಮವಾಗಿ ಈ ವರ್ಷದ ಫೆಬ್ರವರಿಯಲ್ಲಿ ತಮ್ಮ ಗರ್ಭಧಾರಣೆಯನ್ನು ಘೋಷಿಸಿದರು. ಅಲ್ಲದೆ, ದಂಪತಿ ತಮ್ಮ ಮಗು ಸೆಪ್ಟೆಂಬರ್ 2024 ರಲ್ಲಿ ಬರಲಿದೆ ಎಂದು ಹಂಚಿಕೊಂಡಿದ್ದರು.   

5 /13

ದೀಪಿಕಾ ಪಡುಕೋಣೆ ಮತ್ತು ರಣವೀರ್ ಫೆಬ್ರವರಿ 29 ರಂದು, ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭಕ್ಕೆ ಹೋಗುವ ಮುಂಚೆ ತಮ್ಮ ಪ್ರಗ್ನೆನ್ಸಿ ಸುದ್ದಿಯನ್ನು ಹಂಚಿಕೊಂಡಿದ್ದರು.    

6 /13

ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಜೊನಾಸ್, ವಿಕ್ರಾಂತ್ ಮಾಸ್ಸೆ, ಆಯುಷ್ಮಾನ್ ಖುರಾನಾ ಮತ್ತು ಸೋನಮ್ ಕಪೂರ್ ಅಹುಜಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ದೀಪಿಕಾ ರಣವೀರ್‌ಗೆ ಶುಭಕೋರಿದ್ದರು. ಪೋಷಕರ ಕೂಟಕ್ಕೆ ಸ್ವಾಗತ ಕೋರಿದ್ದರು..   

7 /13

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ರಲ್ಲಿ ಇಟಲಿಯಲ್ಲಿ ಆತ್ಮೀಯ ಮತ್ತು ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ಸಧ್ಯ ಈ ತಿಂಗಳ ಕೊನೆಯಲ್ಲಿ ದಂಪತಿ ಮೊದಲ ಮಗುವನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿದ್ದಾರೆ. ಅಭಿಮಾನಿಗಳು ದೀಪ್‌ವೀರ್‌ಗೆ ಶುಭಕೋರುತ್ತಿದ್ದಾರೆ.  

8 /13

ಸೆಪ್ಟೆಂಬರ್ 28 ರಂದು ಮುಂಬೈನ ಆಸ್ಪತ್ರೆಯಲ್ಲಿ ದೀಪಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ. ಶೀಘ್ರದಲ್ಲೇ ತಾಯಿಯಾಗಲಿರುವ ನಟಿ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಇತ್ತೀಚಿಗೆ ದೀಪಿಕಾ ಕಲ್ಕಿ 2898 ಎಡಿ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು..  

9 /13

ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್‌  

10 /13

ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್‌  

11 /13

ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್‌  

12 /13

ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್‌  

13 /13

ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್‌