Deepika Padukone: ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಪಿಂಕ್ ಬ್ಯಾಕ್‌ಲೆಸ್ ಫ್ರಿಲ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಯಾವಾಗಲೂ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ತನ್ನ ಅದ್ಬುತ ನಟನೆಯಿಂದ ಕೋಟಿ ಕೋಟಿ ಅಭಿಮಾನಿಗಳ ಮನ ಗೆದ್ದಿರುವ ದೀಪಿಕಾಗೆ ಈಗ ಪರಿಚಯದ ಅವಶ್ಯಕತೆ ಇಲ್ಲ. ದೀಪಿಕಾ ಪಡುಕೋಣೆ ತಮ್ಮ ನಟನೆಗೆ ಮಾತ್ರವಲ್ಲದೆ ತಮ್ಮ ಶೈಲಿಯಿಂದಲೂ ಹೆಸರುವಾಸಿಯಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿರುವ ದೀಪಿಕಾ ಪಡುಕೋಣೆ: ಚಲನಚಿತ್ರಗಳ ಹೊರತಾಗಿ, ದೀಪಿಕಾ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ್ಗೆ ತನ್ನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಜೀವನದ ಕೆಲವು ಸುಂದರ ಕ್ಷಣಗಳನ್ನೂ ಸಹ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅಭಿಮಾನಿಗಳು ಸಹ ಅವರ ಪೋಸ್ಟ್‌ಗಾಗಿ ಕುತೂಹಲದಿಂದ ಕಾಯುತ್ತಿರುತ್ತಾರೆ.
ಗುಲಾಬಿ ಬಣ್ಣದ ಬ್ಯಾಕ್‌ಲೆಸ್ ಫ್ರಿಲ್ ಗೌನ್‌ನಲ್ಲಿ ದೀಪಿಕಾ ಪಡುಕೋಣೆ: ಇದೀಗ ದೀಪಿಕಾ ತನ್ನ ಇತ್ತೀಚಿನ ಫೋಟೋಶೂಟ್‌ನಿಂದ ಸುದ್ದಿ ಮಾಡುತ್ತಿದ್ದಾರೆ. ಇತ್ತೀಚೆಗೆ, ನಟಿ ತನ್ನ Instagram ಪುಟದಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಗುಲಾಬಿ ಬಣ್ಣದ ಬ್ಯಾಕ್‌ಲೆಸ್ ಫ್ರಿಲ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಐದು ಚಿತ್ರಗಳನ್ನು ಒಟ್ಟಿಗೆ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ವಿಭಿನ್ನ ರೀತಿಯಲ್ಲಿ ಆಕರ್ಷಕವಾಗಿ ಪೋಸ್ ನೀಡಿದ್ದಾರೆ.
ಕನಿಷ್ಠ ಮೇಕಪ್, ಕಿವಿಯೋಲೆಗಳು ಮತ್ತು ಲೈಟ್ ಶೇಡ್ ಲಿಪ್‌ಸ್ಟಿಕ್‌ನೊಂದಿಗೆ ದೀಪಿಕಾ ತನ್ನ ನೋಟವನ್ನು ಪೂರ್ಣಗೊಳಿಸಿದ್ದಾರೆ. ಕೇಶ ವಿನ್ಯಾಸವೂ ಸಹ ತುಂಬಾ ಸರಳವಾಗಿದೆ. ಒಟ್ಟಾರೆಯಾಗಿ ನಟಿಯ ಸ್ಟೈಲ್ ಮತ್ತೊಮ್ಮೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
'83' ಚಿತ್ರದ ಪ್ರಚಾರಕ್ಕಾಗಿ ದೀಪಿಕಾ ಇತ್ತೀಚೆಗೆ ಸೌದಿ ಅರೇಬಿಯಾದ ಜೆಡ್ಡಾವನ್ನು ತಲುಪಿದ್ದರು. ಈ ಸಮಯದಲ್ಲಿ ಅವರು ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಈ ಉಡುಪಿನ ತೋಳುಗಳು ಹಂಸ ಆಕಾರದಲ್ಲಿವೆ, ಇದು ಹಿಂಭಾಗದಿಂದ ತುಂಬಾ ಡೀಪ್ ಆಗಿರುವುದು ಕಂಡು ಬರುತ್ತದೆ. ಒಟ್ಟಿನಲ್ಲಿ ದೀಪಿಕಾ ಪಾಶ್ಚಿಮಾತ್ಯ ಉಡುಪೇ ಆಗಿರಲಿ ಮತ್ತು ಭಾರತೀಯ ಉಡುಪೇ ಆಗಿರಲಿ ಪರಿಪೂರ್ಣವಾಗಿ ಕಾಣುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ.