Diwali Business Idea: ದೀಪಾವಳಿಗೂ ಮುನ್ನವೇ ಈ ಬಿಸಿನೆಸ್ ಆರಂಭಿಸಿ ಬಂಪರ್ ಲಾಭ ಪಡೆದುಕೊಳ್ಳಿ

New Business Idea: ಇಂದಿನ ಕಾಲದಲ್ಲಿ ಕೆಲಸ ಬಿಟ್ಟು ಸ್ವಂತ ಉದ್ದಿಮೆ ಆರಂಭಿಸಲು ಬಯಸುವ ಸಾಕಷ್ಟು ಜನರಿದ್ದಾರೆ. ಆದರೆ ಹೊಸ ಉದ್ಯಮವನ್ನು ಪ್ರಾರಂಭಿಸಲು ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಈ ಹಬ್ಬದ ಋತುವಿನಲ್ಲಿ ನೀವು ಯಾವುದಾದರೊಂದು ವ್ಯವಹಾರವನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದ್ದರೆ, ನಿಮ್ಮ ಕೆಲವು ಸಮಸ್ಯೆಗಳಿಗೆ ನಾವು ಪರಿಹಾರವನ್ನು ಸೂಚಿಸುತ್ತೇವೆ. 
 

New Business Idea: ಇಂದಿನ ಕಾಲದಲ್ಲಿ ಕೆಲಸ ಬಿಟ್ಟು ಸ್ವಂತ ಉದ್ದಿಮೆ ಆರಂಭಿಸಲು ಬಯಸುವ ಸಾಕಷ್ಟು ಜನರಿದ್ದಾರೆ. ಆದರೆ ಹೊಸ ಉದ್ಯಮವನ್ನು ಪ್ರಾರಂಭಿಸಲು ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಈ ಹಬ್ಬದ ಋತುವಿನಲ್ಲಿ ನೀವು ಯಾವುದಾದರೊಂದು ವ್ಯವಹಾರವನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದ್ದರೆ, ನಿಮ್ಮ ಕೆಲವು ಸಮಸ್ಯೆಗಳಿಗೆ ನಾವು ಪರಿಹಾರವನ್ನು ಸೂಚಿಸುತ್ತೇವೆ. ದೀಪಾವಳಿಯ ಸಮಯದಲ್ಲಿ ನೀವು ಯಾವ ವ್ಯಾಪಾರ ಆರಂಭಿಸಬೇಕು ಮತ್ತು ಅದರಿಂದ ನೀವು ಉತ್ತಮ ಆದಾಯವನ್ನು ಗಳಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Dhanteras 2022: ಧನತ್ರಯೋದಶಿಯ ದಿನ ಈ ಚಿಕ್ಕ ಕೆಲಸ ಮಾಡಿ, ಜೀವನದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

1. ನೀರಿನಿಂದ ಉರಿಯುವ ದೀಪಗಳನ್ನು ತಯಾರಿಸಿ- ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ, ಅನೇಕ ಸ್ಟಾರ್ಟ್‌ಅಪ್‌ಗಳು ದೀಪಾವಳಿಯಂದು ಮಾರುಕಟ್ಟೆಯಲ್ಲಿ ನೀರು-ಬೆಳಕಿನ ದೀಪಗಳನ್ನು ಮಾರಾಟ ಮಾಡಲು ಪ್ರಾರಂಭಿಸಿವೆ, ಈ ದೀಪಗಳಿಗೆ ವಿದ್ಯುತ್ ಅಥವಾ ತೈಲದ ಅಗತ್ಯ ಬೀಳುವುದಿಲ್ಲ.  ಈ ದೀಪಗಳಲ್ಲಿ ನೀರು ಸುರಿದ ತಕ್ಷಣ ಅವು ಉರಿಯಲು ಪ್ರಾರಂಭಿಸುತ್ತವೆ. ವಾಸ್ತವವಾಗಿ ಈ ದೀಪಗಳಲ್ಲಿ ಸಣ್ಣ ಕೋಶಗಳನ್ನು ಅಳವಡಿಸಲಾಗಿದೆ, ಇದರಲ್ಲಿ ಬೆಳಕು ಸಂವೇದಕದೊಂದಿಗೆ ಲಗತ್ತಿಸಲಾಗಿದೆ. ಈ ದೀಪಗಳು ನೀರಿನ ಸಂಪರ್ಕಕ್ಕೆ ಬಂದ ತಕ್ಷಣ, ಅವು ಪ್ರಕಾಶಮಾನವಾಗಿ ಉರಿಯಲು ಪ್ರಾರಂಭಿಸುತ್ತವೆ. ನೀವು ಅವುಗಳನ್ನು ದೆಹಲಿ, ಮುಂಬೈ ಅಥವಾ ಇತರ ದೊಡ್ಡ ನಗರಗಳಲ್ಲಿನ ಸಗಟು ಮಾರುಕಟ್ಟೆಗಳಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಿ ಮಾರಾಟ ಮಾಡಿದರೆ, ನೀವು ಉತ್ತಮ ಲಾಭವನ್ನು ಗಳಿಸಬಹುದು ಮತ್ತು ನಿಮ್ಮ ಗ್ರಾಹಕರಿಗೆ ಕೆಲವು ಹೊಸ ಉತ್ಪನ್ನಗಳನ್ನು ನೀವು ಪರಿಚಯಿಸಬಹುದು.

2 /5

2. ರಂಗುಗಳಿಲ್ಲದೆ ಹಬ್ಬಗಳು ನೀರಸ- ಬಣ್ಣವು ಸಂತೋಷದ ಸಂಕೇತವಾಗಿದೆ. ಬಣ್ಣವು ಜನರ ಜೀವನದಲ್ಲಿ ಬಹಳಷ್ಟು ಸಂತೋಷವನ್ನು ತರುತ್ತದೆ. ದೀಪಾವಳಿ, ಹೋಳಿ, ನವರಾತ್ರಿ ಹೀಗೆ ಎಲ್ಲಾ ಹಬ್ಬಗಳಲ್ಲೂ ಬಣ್ಣಗಳನ್ನು ಚೆನ್ನಾಗಿ ಬಳಸುತ್ತಾರೆ. ಬಣ್ಣಗಳಿಲ್ಲದೆ ಹೋಳಿ ಅಥವಾ ದೀಪಾವಳಿ ನೀರಸವಾಗಿ ಕಾಣುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವೂ ರಂಗೋಲಿ ತಯಾರಿಸುವ ಉದ್ಯಮವನ್ನು ಆರಂಭಿಸಿ. ಅದರ ಒಂದು ಚಿಕ್ಕ ಪ್ಲಾಂಟ್ ಆಂಭಿಸಿ ಲಕ್ಷಗಟ್ಟಲೆ ಆದಾಯ ಗಳಿಸಬಹುದು.

3 /5

3. ಚೈನಾ ಮಾರುಕಟ್ಟೆಯ ವರ್ಚಸ್ಸು ಕಡಿಮೆಯಾಗುತ್ತದೆ - ಭಾರತದಲ್ಲಿ ಬಹುತೇಕ ಎಲ್ಲರೂ ತಮ್ಮ ಮಕ್ಕಳಿಗೆ ಆಟಿಕೆಗಳನ್ನು ಖರೆಡಿಸಿ ಕೊಡುತ್ತಾರೆ ಎಂದು ಮಾರುಕಟ್ಟೆಯ ಸಂಶೋಧನೆಯಲ್ಲಿ ಬಹಿರಂಗಗೊಂಡಿದೆ. ಇಲ್ಲಿ ಅನೇಕ ಹಬ್ಬಗಳನ್ನು ಆಚರಿಸುತ್ತೇವೆ. ಇದಲ್ಲದೇ ಮಗುವಿನ ಬರ್ತ್ ಡೇ ಪಾರ್ಟಿಗೆ ನೀವೂ ಹೋದರೆ ಒಂದಷ್ಟು ಉಡುಗೊರೆಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತೀರಿ. ಚೀನಾದ ಆಟಿಕೆ ಉದ್ಯಮದ ವರ್ಚಸ್ಸನ್ನು ಕಡಿಮೆ ಮಾಡಲು ಸರ್ಕಾರವು ಕೂಡ ಅನೇಕ ಪ್ರಯತ್ನಗಳನ್ನು ನಡೆಸುತ್ತಿದೆ. ಈ ರೀತಿಯಾಗಿ ನೀವು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಆದಾಗ್ಯೂ, ಈ ವ್ಯವಹಾರವನ್ನು ಪ್ರಾರಂಭಿಸುವ ಮೊದಲು, ನೀವು ಮಾರುಕಟ್ಟೆಯ ಉತ್ತಮ ಅಧ್ಯಯನ ನಡೆಸಬೇಕು.

4 /5

4. ಅಲಂಕಾರಿಕ ದೀಪಗಳಿಗೆ ಹೆಚ್ಚಾದ್ದ ಬೇಡಿಕೆ - ದೀಪಾವಳಿ ಸಂದರ್ಭದಲ್ಲಿ ಅಲಂಕಾರಿಕ ದೀಪಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ವಿಶೇಷವೆಂದರೆ ಈ ದೀಪಗಳ ವ್ಯಾಪಾರ ದೀಪಾವಳಿಯಂದು ಮಾತ್ರವಲ್ಲದೆ ಭವಿಷ್ಯದಲ್ಲಿಯೂ ಹಣ ಗಳಿಕೆಯ ಅವಕಾಶವನ್ನು ನೀಡುತ್ತದೆ. ದೀಪಾವಳಿಯ ನಂತರ ಮದುವೆಯ ಸೀಸನ್ ಶುರುವಾಗಲಿದ್ದು, ಆಮೇಲೆ ಕ್ರಿಸ್ ಮಸ್ ಮತ್ತು ಹೊಸ ವರ್ಷದಂದು ಇದಕ್ಕೆ ಭಾರಿ ಬೇಡಿಕೆ ಇರುತ್ತದೆ. ಅಂದರೆ ಈ ಉದ್ಯಮ ಆರಂಭಿಸಲು ನಿಮಗೆ ಇದೊಂದು ಉತ್ತಮ ಅವಕಾಶ.

5 /5

5. ಬಟ್ಟೆ ವ್ಯಾಪಾರ - ಬಟ್ಟೆ ವ್ಯಾಪಾರ ಆರಂಭಿಸಲು ಇದೀಗ ಸ್ವಲ್ಪ ತಡವಾದರೂ ಕೂಡ  ನೀವು ಇನ್ನೂ ಇದನ್ನು ಪ್ರಾರಂಭಿಸಿದರೆ ದೀಪಾವಳಿಯಲ್ಲಿ ನೀವು ಉತ್ತಮ ಲಾಭವನ್ನು ಗಳಿಸಬಹುದು. ಈ ವ್ಯವಹಾರವನ್ನು ನೀವು ಕಡಿಮೆ ಹೂಡಿಕೆಯಲ್ಲಿ ಪ್ರಾರಂಭಿಸಬಹುದಾಗಿದೆ.