ಅನೇಕ ಜನರು ಫ್ರಿಡ್ಜ್ ನಲ್ಲಿ ಏನೇ ವಸ್ತುಗಳನ್ನು ತಂದರೂ ಸಹ ಶೇಖರಿಸಿಡುತ್ತಾರೆ. ಆದರೆ ಇದು ಭಾರೀ ಅಪಾಯ. ಹೀಗೆ ಮಾಡಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಫಿಡ್ಜ್ ನಲ್ಲಿ ಈ ವಸ್ತುಗಳನ್ನು ಇಡಲೇಬಾರದು. ಅಂತಹ ವಸ್ತುಗಳು ಯಾವುದೆಂದು ತಿಳಿಯೋಣ.
ಮಾವಿನ ಹಣ್ಣನ್ನು ಎಂದಿಗೂ ಫ್ರಿಡ್ಜ್ ನಲ್ಲಿ ಇಡಬಾರದು. ಇದು ಅದರ ಸ್ವಾದ ಮತ್ತು ಪೌಷ್ಟಿಕತೆಯನ್ನು ಕಡಿಮೆಗೊಳಿಸುತ್ತದೆ.
ಬ್ರೆಡ್ ಗಳನ್ನು ಸಹ ಎರಡು ದಿನಕ್ಕಿಂತ ಹೆಚ್ಚಾಗಿ ಫ್ರಿಡ್ಜ್ ನಲ್ಲಿ ಇಡಬಾರದು. ಇದು ಬೂಸ್ಟ್ ಹಿಡಿಯಲು ಕಾರಣವಾಗುತ್ತದೆ. ಜೊತೆಗೆ ಫ್ರಿಡ್ಜ್ ನಿಂದ ಹೊರಸೂಸುವ ಗಾಳಿಗೆ ಬ್ರೆಡ್ ಬೇಗ ಕೆಡುವ ಸಾಧ್ಯತೆಯಿದೆ.
ಅನೇಕರು ಮಾಂಸಾಹಾರ ವಸ್ತುಗಳನ್ನು ಫ್ರಿಡ್ಜ್ ನಲ್ಲಿ ಇಡುತ್ತಾರೆ. ಆದರೆ ಅದು ರುಚಿಯನ್ನು ನೀಡುವುದಿಲ್ಲ. ಗುಣಮಟ್ಟದ ಮಾಂಸಾಹಾರ ಸೇವಿಸಬೇಕಾದರೆ ಮಾಂಸವನ್ನು ಫ್ರಿಡ್ಜ್ ನಲ್ಲಿ ಇಡಬೇಡಿ
ಜೇನುತುಪ್ಪವನ್ನು ಕೆಲವರು ಫ್ರಿಡ್ಜ್ ನಲ್ಲಿ ಶೇಖರಿಸಿಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಹರಳಿನಂತೆ ಮಾರ್ಪಾಡಾಗುತ್ತದೆ.
ಪುದೀನಾ ಕೊತ್ತಂಬರಿ ಸೊಪ್ಪುಗಳಂತಹ ಪದಾರ್ಥಗಳನ್ನು ಸಹ ಫ್ರಿಡ್ಜ್ನಲ್ಲಿ ಶೇಖರಿಸಿಡಬೇಡಿ. ಇದರಲ್ಲಿರುವ ಕೀಟಾಣುಗಳು ಬೇರೆ ತರಕಾರಿ ಅಥವಾ ಆಹಾರಗಳನ್ನು ಸೇರುವ ಸಾಧ್ಯತೆಯಿದೆ