ಗ್ರೀನ್ ಟೀ ಕುಡಿಯುವಾಗ ನೀವೂ ಈ ತಪ್ಪುಗಳನ್ನು ಮಾಡ್ತೀರಾ? ಎಚ್ಚರ!

                                         

Green Tea: ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲೂ ತ್ವರಿತವಾಗಿ ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರಿಗೆ ಗ್ರೀನ್ ಟೀ ವರದಾನವಿದ್ದಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ತೂಕ ಇಳಿಕೆಯಲ್ಲಿ ಗ್ರೀನ್ ಟೀ ಅನ್ನು ವರದಾನ ಎಂತಲೇ ಹೇಳಲಾಗುತ್ತದೆ. ಆದರೆ, ಇದನ್ನು ಯಾವಾಗ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂದು ತಿಳಿದಿರಬೇಕು. ಇಲ್ಲದಿದ್ದರೆ, ಅದು ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಆರೋಗ್ಯ ತಜ್ಞರ ಪ್ರಕಾರ, ಗ್ರೀನ್ ಟೀ ಕುಡಿಯುವ ವೇಳೆ ಎಂದಿಗೂ ಕೂಡ ಕೆಲವು ತಪ್ಪುಗಳನ್ನು ಮಾಡಲೇಬಾರದು. ಆ ಸಾಮಾನ್ಯ ತಪ್ಪುಗಳು ಯಾವುವು ಎಂದು ತಿಳಿಯೋಣ... 

2 /6

ಕೆಲವರಿಗೆ ಬೆಳಿಗ್ಗೆ ಬೆಡ್ ಕಾಫಿ ಕುಡಿಯುವ ಅಭ್ಯಾಸದಂತೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವ ಅಭ್ಯಾಸವಿರುತ್ತದೆ. ಆದರೆ, ಎಂದಿಗೂ ಈ ತಪ್ಪನ್ನು ಮಾಡಬಾರದು. 

3 /6

ವೈದ್ಯರ ಪ್ರಕಾರ, ಆಹಾರ ಸೇವಿಸಿದ ಕೂಡಲೇ ಗ್ರೀನ್ ಟೀ ಕುಡಿಯುವುದು ಒಳ್ಳೆಯದಲ್ಲ. ಆಹಾರ ಸೇವಿಸುವ ಎರಡು ಗಂಟೆಗಳ ಮೊದಲು ಇಲ್ಲವೇ ಎರಡು ಗಂಟೆಗಳ ನಂತರ ಗ್ರೀನ್ ಟೀ ಕುಡಿಯಲು ಸಲಹೆ ನೀಡಲಾಗುತ್ತದೆ.  

4 /6

ಮೊದಲೇ ತಿಳಿಸಿದಂತೆ ತ್ವರಿತ ತೂಕ ಇಳಿಕೆ ಗ್ರೀನ್ ಟೀ ತುಂಬಾ ಪ್ರಯೋಜನಕಾರಿ. ಹಾಗಂತ ಇದನ್ನು ಅತಿಯಾಗಿ ಕುಡಿಯುವುದರಿಂದ ಹೊಟ್ಟೆ ನೋವು, ಮಲಬದ್ಧತೆಯಂತಹ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು.   

5 /6

ತಜ್ಞರ ಪ್ರಕಾರ, ಪ್ರತಿ ದಿನ ಎರಡರಿಂದ ಮೂರು ಕಪ್ ಗ್ರೀನ್ ಟೀ ಸೇವಿಸಬಹುದು. ಇದಕ್ಕಿಂತ ಹೆಚ್ಚಿನ ಗ್ರೀನ್ ಟೀ ಸೇವನೆ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ. 

6 /6

ತಜ್ಞರ ಪ್ರಕಾರ, ಗರ್ಭಿಣಿ ಸ್ತ್ರೀಯರು, ಹಾಲುಣಿಸುವ ಮಹಿಳೆಯರು ಗ್ರೀನ್ ಟೀ ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.