ಗಂಟಲು, ಎದೆ ಭಾಗದಲ್ಲಿ ಕಟ್ಟಿ ಕುಳಿತಿರುವ ಕಫವನ್ನು ನೀರಾಗಿಸಿ ಕೆಮ್ಮಿನಿಂದ ತಕ್ಷಣದ ರಿಲೀಫ್ ನೀಡುತ್ತದೆ ಈ ಎಲೆ ! ನೆಗಡಿ, ತಲೆ ನೋವಿಗೂ ಇದೇ ಪರಿಹಾರ

Written ByRanjitha R K
Published: Nov 15, 2024, 02:47 PM IST|Updated: Nov 15, 2024, 02:47 PM IST

ಕೆಲವೊಮ್ಮೆ ಕಣ್ಣ ಮುಂದೆಯೇ ಪರಿಹಾರ ಇದ್ದರೂ ನಾವದನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಅದಕ್ಕೆ ಇರಬೇಕು ಹಿರಿಯರು ದೊಡ್ಡವರು ಹಿತ್ತಲ ಗಿಡ ಮದ್ದಲ್ಲ ಎನ್ನುವುದು. 

ಬೆಂಗಳೂರು : ಕೆಮ್ಮು ಕಫ ಜಾಸ್ತಿಯಾದಾಗ ಯಾವಾ ಕೆಲಸ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಬಹಳ ಮುಖ್ಯವಾಗಿ ಇದು ತೊಂದರೆ ಕೊಡುವುದೇ ನಿದ್ದೆಗೆ. ಮಲಗುವುದಕ್ಕೆ ಹೊರಟಾಗ ಕೆಮ್ಮು ಹೆಚ್ಚಾಗಿ ಬಾಧಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 Home Remedy for cough 1/7

ಕೆಮ್ಮಿಗೆ ಮನೆ ಮದ್ದು

ಕೆಲವೊಮ್ಮೆ ಕಣ್ಣ ಮುಂದೆಯೇ ಪರಿಹಾರ ಇದ್ದರೂ ನಾವದನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಅದಕ್ಕೆ ಇರಬೇಕು ಹಿರಿಯರು ದೊಡ್ಡವರು ಹಿತ್ತಲ ಗಿಡ ಮದ್ದಲ್ಲ ಎನ್ನುವುದು. 

 Home Remedy for cough 2/7

ಕೆಮ್ಮಿಗೆ ಮನೆ ಮದ್ದು

ಕೆಮ್ಮಿಗೆ ಮಾತ್ರೆ ಸಿರಪ್ ತೆಗೆದುಕೊಳ್ಳುವ ಬದಲು ದೊಡ್ಡ ಪತ್ರೆಯನ್ನು ಬಳಸಬಹುದು. ಇದರ ರಸವನ್ನು ಸೇವಿಸಿದ ಕೂಡಲೇ  ಕೆಮ್ಮು ಮಾಯವಾಗಿ ಬಿಡುತ್ತದೆ.   

 Home Remedy for cough 3/7

ಕೆಮ್ಮಿಗೆ ಮನೆ ಮದ್ದು

ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ,ಕೆಮ್ಮು ಹೇಳ ಹೆಸರಿಲ್ಲದೆ ದೂರವಾಗುತ್ತದೆ.ಈ ರಸವನ್ನು ಚಿಕ್ಕ ಮಕ್ಕಳಿಗೆ ನೀಡಿದರೂ ಅಡ್ಡಿಯಿಲ್ಲ. 

 Home Remedy for cough 4/7

ಕೆಮ್ಮಿಗೆ ಮನೆ ಮದ್ದು

ಬರೀ ದೊಡ್ಡ ಪತ್ರೆ ಮಾತ್ರ ಬಳಸುವುದಾದರೆ ಇದರ ಎಲೆಯನ್ನು ಒಂದು ತವಾ ಮೇಲೆ ಹಾಕಿ ಬಾಡಿಸಿ ಹಿಸುಕಿದರೆ ಚೆನ್ನಾಗಿ ರಸ ಬಿಡುತ್ತದೆ. ಹೀಗೆ ತೆಗೆದ ರಸಕ್ಕೆ  ಸ್ವಲ್ಪ ಜೇನು ತುಪ್ಪ ಬೆರೆಸಿ ಕುಡಿದರೆ ಶೀತ ಕೆಮ್ಮಿಗೆ ಉತ್ತಮ ಪರಿಹಾರವಾಗಿ ಬಿಡುತ್ತದೆ. 

 Home Remedy for cough 5/7

ಕೆಮ್ಮಿಗೆ ಮನೆ ಮದ್ದು

ಇನ್ನು ಮೂಗು ಕಟ್ಟಿ ತಲೆ ನೋವು ಅತಿಯಾಗಿ ಕಾಡುತ್ತಿದ್ದರೆ, ದೊಡ್ಡ ಪತ್ರೆ ಎಲೆ ಯನ್ನು ತವಾ ಮೇಲೆ ಹಾಕಿ ಬಾಡಿಸಿ ಹಣೆಯ ಭಾಗದಲ್ಲಿ ಇಟ್ಟರೆ ಕಟ್ಟಿದ  ಮೂಗಿನಿಂದ ಪರಿಹಾರ ಸಿಗುವುದು.ತಲೆ ನೋವು ಕೂಡಾ ಕಡಿಮೆಯಾಗುವುದು.

 Home Remedy for cough 6/7

ಕೆಮ್ಮಿಗೆ ಮನೆ ಮದ್ದು

ಮಕ್ಕಳಿಗೆ ಕೆಮ್ಮು ಬಾಧಿಸುತ್ತಿದ್ದರೆ ಈ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಎದೆಯ ಭಾಗಕ್ಕೆ ಇಟ್ಟರೂ ಕಫ ಕರಗುತ್ತದೆ ಎಂದು ಹೇಳಲಾಗುತ್ತದೆ. 

 Home Remedy for cough 7/7

ಕೆಮ್ಮಿಗೆ ಮನೆ ಮದ್ದು

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.