Dream Interpretation: ದುರ್ಗಾ ಮಾತೆಗೆ ಸಂಬಂಧಿಸಿದ ಇಂತಹ ಕನಸುಗಳು ನಿಮ್ಮ ಜೀವನ ಬದಲಾಗುವ ಸಂಕೇತವಂತೆ

Dream Interpretation: ನವರಾತ್ರಿಯ ಸಮಯದಲ್ಲಿ ಕೆಲವು ಕನಸುಗಳನ್ನು ಹೊಂದುವುದು ತುಂಬಾ ಶುಭಕರ. ದುರ್ಗಾ ಮಾತೆ ಕನಸಿನಲ್ಲಿ ನಿರ್ದಿಷ್ಟ ರೂಪದಲ್ಲಿ ಕಾಣಿಸಿಕೊಂಡರೆ, ಅದಕ್ಕೆ ವಿಶೇಷ ಅರ್ಥವಿದೆ. 

  • Oct 08, 2021, 13:14 PM IST

Dream Interpretation: ನಾವು ನಿದ್ರೆ ಮಾಡುವಾಗ ಹಲವು ಬಾರಿ ಕನಸುಗಳನ್ನು ಕಾಣುತ್ತೇವೆ. ಕನಸುಗಳು ಶುಭ ಮತ್ತು ಅಶುಭ ಚಿಹ್ನೆಗಳನ್ನು ನೀಡುತ್ತವೆ ಎಂದು ನಂಬಲಾಗಿದೆ. ಈ ಕನಸುಗಳ ಅರ್ಥಗಳನ್ನು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ವಿಶೇಷವಾಗಿ ಈ ಕನಸುಗಳು ನಿರ್ದಿಷ್ಟ ಸಮಯದಲ್ಲಿ ಬಂದರೆ, ಅವುಗಳ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚಾಗುತ್ತದೆ. ಇದೀಗ ನವರಾತ್ರಿ (Navratri 2021) ಆರಂಭವಾಗಿದೆ. ನವರಾತ್ರಿಯಲ್ಲಿ ಬೀಳುವ ಕನಸುಗಳು ಬಹಳ ಮುಖ್ಯ. ನವರಾತ್ರಿ ವೇಳೆ ದುರ್ಗಾ ಮಾತೆಯನ್ನು ಕನಸಿನಲ್ಲಿ ಕಾಣುವುದರ ಅರ್ಥವೇನು ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಕನಸಿನಲ್ಲಿ ದೇವರನ್ನು ಕಾಣುವುದು ತುಂಬಾ ಶುಭಕರ. ಅದರಲ್ಲೂ ದುರ್ಗಾ ಮಾತೆಯನ್ನು ಕೆಂಪು ಬಟ್ಟೆಯಲ್ಲಿ ನೋಡಿದರೆ, ನಿಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದು ಸಂಭವಿಸಲಿದೆ ಎಂದರ್ಥ. ಇದು ಯಶಸ್ಸಿನ ಸೂಚಕವಾಗಿದೆ ಎಂದು ಹೇಳಲಾಗುತ್ತದೆ.  

2 /4

ಅವಿವಾಹಿತ ಹುಡುಗ-ಹುಡುಗಿಯರು ತಮ್ಮ ಕನಸಿನಲ್ಲಿ ತಾಯಿ ದುರ್ಗಾಳನ್ನು ಕೆಂಪು ವಸ್ತ್ರದಲ್ಲಿ ನೋಡಿದರೆ, ಅವರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರಲಿದೆ ಎಂದರ್ಥ. ಇದನ್ನೂ ಓದಿ- Navratri 2021: ನವರಾತ್ರಿಯಲ್ಲಿ ಈ 4 ರಾಶಿಯವರ ಮೇಲೆ ದುರ್ಗಾ ಮಾತೆಯ ವಿಶೇಷ ಕೃಪೆ

3 /4

ದುರ್ಗಾ ಮಾತೆ ಕನಸಿನಲ್ಲಿ ಸಿಂಹ ಸವಾರಿ ಮಾಡುತ್ತಿರುವುದನ್ನು ನೋಡಿದರೆ, ಅದು ತುಂಬಾ ಶುಭಕರವಾಗಿದೆ. ಅಂತಹ ಕನಸುಗಳನ್ನು ಕಂಡರೆ ನಿಮ್ಮ ಜೀವನದ ಎಲ್ಲಾ ತೊಂದರೆಗಳು ಕೊನೆಗೊಳ್ಳಲಿವೆ ಎಂದರ್ಥ. ಇದರೊಂದಿಗೆ, ತಾಯಿಯ ಕೃಪೆಯಿಂದ ನಿಮ್ಮ ಶತ್ರುಗಳ ಮೇಲೆ ಜಯವನ್ನು ಪಡೆಯುತ್ತೀರಿ ಎಂದೂ ಕೂಡ ಹೇಳಲಾಗುತ್ತದೆ. ಇದನ್ನೂ ಓದಿ- Navratri 2021: ನವರಾತ್ರಿಯಲ್ಲಿ ಈ ಗಿಡಗಳನ್ನು ನೆಡುವುದು ಅತ್ಯಂತ ಶುಭ, ದೂರವಾಗುತ್ತೆ ಹಣಕ್ಕೆ ಸಂಬಂಧಿಸಿದ ಸಮಸ್ಯೆ

4 /4

ನವರಾತ್ರಿಯಲ್ಲಿ ತಾಯಿ ಪಾರ್ವತಿಯನ್ನು ಕನಸಿನಲ್ಲಿ ಕಂಡರೆ, ಅದು ಕೂಡ ಶುಭ ಸಂಕೇತ. ಈ ಕನಸು ಹಣದ ಲಾಭವನ್ನು ಸೂಚಿಸುತ್ತದೆ. ಇದು ನಿಮ್ಮ ಜೀವನ ಬದಲಾಗಲಿದೆ, ನೀವು ಶೀಘ್ರದಲ್ಲೇ ಸಿರಿವಂತರಾಗುವಿರಿ ಎಂದು ಸೂಚಿಸುತ್ತದೆ. (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)