ಕನಸುಗಳು ಕೂಡಾ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ. ಈ ಕೆಲವು ಕನಸುಗಳು ಭಯಾನಕವಾಗಿರಬಹುದು.
ನವದೆಹಲಿ : ನಿದ್ದೆಯ ವೇಳೆ ಕನಸು ಬೀಳುವುದು ಸಹಜ. ಆದರೆ, ಆ ಕನಸುಗಳಿಗೂ ವಿಶೇಷ ಅರ್ಥವಿರುತ್ತದೆ. ಕನಸುಗಳು ಕೂಡಾ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ. ಈ ಕೆಲವು ಕನಸುಗಳು ಭಯಾನಕವಾಗಿರಬಹುದು. ಆದರೆ ಅವು ಶುಭ ಫಲವನ್ನು ನೀಡುತ್ತದೆ. ಮತ್ತೊಂದೆಡೆ, ಕನಸಿನಲ್ಲಿ ಸಂತೋಷವಾಗಿರುವಂತೆ ಕಾಣುವ ಘಟನೆಗಳು ನಿಜವಾಗಿಯೂ ಅಶುಭ ಫಲವನ್ನು ನೀಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕನಸಿನಲ್ಲಿ ಸತ್ತ ಹಾವನ್ನು ನೋಡುವುದೆಂದರೆ ಭಯ ಹುಟ್ಟಿಸುತ್ತದೆ. ಆದರೆ ಈ ಕನಸು ಮಂಗಳಕರವಾಗಿದೆ. ಈ ಕನಸು ಬಿದ್ದರೆ ಜೀವನದಲ್ಲಿನ ದುಃಖಗಳು ಮತ್ತು ತೊಂದರೆಗಳು ಕೊನೆಗೊಳ್ಳಲಿವೆ ಎಂದರ್ಥ. ಈ ಕನಸು ರಾಹುವಿನ ಅಶುಭ ಪರಿಣಾಮವನ್ನು ನಿವಾರಿಸುತ್ತದೆ.
ಕನಸಿನಲ್ಲಿ ಶವವನ್ನು ನೋಡಿದರೆ ಬೆಚ್ಚಿ ಬೀಳುವುದಂತೂ ಖಂಡಿತಾ. ಆದರೆ ಈ ಕನಸು ತುಂಬಾ ಮಂಗಳಕರವಾಗಿರುತ್ತದೆ. ಇಂಥಹ ಕನಸು ಶುಭ ಫಲಿಗಳನ್ನೇ ನೀಡುತ್ತದೆ. ಇದು ಆರ್ಥಿಕ ಪ್ರಗತಿಯನ್ನು ಸೂಚಿಸುತ್ತದೆ.
ಒಬ್ಬ ಉದ್ಯಮಿಯ ಶವ ಯಾತ್ರೆಯನ್ನು ನೋಡಿದರೆ, ಅದು ತುಂಬಾ ಮಂಗಳಕರವಾಗಿರುತ್ತದೆ. ಅಂತಹ ಕನಸು ಬಿದ್ದರೆ ದೊಡ್ಡ ಮಟ್ಟದ ಲಾಭವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.
ವಯಸ್ಸಾದ ವ್ಯಕ್ತಿಯು ಕನಸಿನಲ್ಲಿ ಶವವಾಗಿ ಕಂಡರೆ ಅದು ಕೂಡಾ ಶುಭ ಸೂಚಕ ಎಂದು ಹೇಳಾಗುತ್ತದೆ. ಇಂಥಹ ಕನಸು ಬಿದ್ದರೆ ವ್ಯಕ್ತಿ ರೋಗ ಮುಕ್ತನಾಗುತ್ತಾನೆ ಎನ್ನುವುದು ನಂಬಿಕೆ.
ಕನಸಿನಲ್ಲಿ ಶವ ಅಥ್ವಾ ಶವಯಾತ್ರೆ ನೋಡುವುದು ಶುಭಾವಾಗಿರುತ್ತದೆ. ಆದರೆ ಉರಿಯುತ್ತಿರುವ ಚಿತೆ ಕಂಡರೆ ಅದು ಅಶುಭ ಎನ್ನಲಾಗಿದೆ. ಅಂತಹ ಕನಸು ಸಹೋದರ ಅಥವಾ ನಿಕಟ ವ್ಯಕ್ತಿಯೊಂದಿಗೆ ಗಂಭೀರ ಜಗಳವನ್ನು ಹೊಂದಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ.