Ducati India: ಲಕ್ಸರಿ ಬೈಕ್ ತಯಾರಕ ಕಂಪನಿ Ducati India ಭಾರತದಲ್ಲಿ ತನ್ನ BS6 Scrambler ಮಾದರಿಯ ಎರಡು ಬೈಕ್ ಗಳಾಗಿರುವ Scrambler Nightshift ಹಾಗೂ Scrambler Desert Sled ಬಿಡುಗಡೆ ಮಾಡಿದೆ.
Ducati India: ಲಕ್ಸರಿ ಬೈಕ್ ತಯಾರಕ ಕಂಪನಿ Ducati India ಭಾರತದಲ್ಲಿ ತನ್ನ BS6 Scrambler ಮಾದರಿಯ ಎರಡು ಬೈಕ್ ಗಳಾಗಿರುವ Scrambler Nightshift ಹಾಗೂ Scrambler Desert Sled ಬಿಡುಗಡೆ ಮಾಡಿದೆ. ತುಂಬಾ ಆಕರ್ಷಕವಾಗಿರುವ ಈ ಮೋಟಾರ್ ಸೈಕಲ್ ತುಂಬಾ ವಿಶಿಷ್ಠವಾಗಿದೆ. ಈ ಬೈಕ್ ಗಳಿಗೆ ಬುಕಿಂಗ್ ಪ್ರಕ್ರಿಯೆಯನ್ನೂ ಕೂಡ ಕಂಪನಿ ಇಂದಿನಿಂದ ಆರಂಭಿಸಿದೆ. ಈ ಬೈಕ್(Bike) ಗಳಿಗಾಗಿ ದೇಶಾದ್ಯಂತ ಇರುವ ಒಟ್ಟು 9 ಡೀಲರ್ ಗಳ ಬಳಿ ನೀವು ಬುಕ್ ಮಾಡಬಹುದು.
ಇದನ್ನೂ ಓದಿ-SPLENDOR+ BS6 ಹೊಸ ಮಾಡೆಲ್ ಲಾಂಚ್ , ವೈಶಿಷ್ಟ್ಯಗಳೇನು ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಬೈಕ್ ಬೆಲೆ ಎಷ್ಟು? - BS6 Scrambler ಮಾದರಿಯ ಎರಡು ಬೈಕ್ ಗಳಾಗಿರುವ Scrambler Nightshift ನ ಎಕ್ಸ್-ಷೋರೂಂ ಬೆಲೆ ರೂ. 9,80,000 ಆಗಿದ್ದರೆ, Scrambler Desert Sled ಬೆಲೆ 10,89,000 ರೂ. ಆಗಿದೆ. (Ducati India)
2. ಎರಡು ಬೈಕ್ ಗಳಲ್ಲಿ ಜಬರ್ದಸ್ತ್ ಇಂಜಿನ್ - Ducati Scrambler Nightshift ಹಾಗೂ Desert Sled ಎರಡೂ ಬೈಕ್ ಗಳು 803 ಸಿಸಿ ಎಲ್-ಟ್ವಿನ್ ಎರಡು-ವಾಲ್ವ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತವೆ. ಇದು ಅತ್ಯುತ್ತಮ ಟಾರ್ಕ್ ಹೊಂದಿದ್ದು, ಇದು ಸವಾರಿಯಲ್ಲಿ ಅಪಾರ ಶಕ್ತಿಯ ಅನುಭವವನ್ನು ನೀಡುತ್ತದೆ. ಲೇಟ್ ನೈಟ್ ರೈಡ್ ಈ ಬೈಕ್‌ನೊಂದಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ಇದರ ಎಂಜಿನ್ 8,250 ಆರ್‌ಪಿಎಂನಲ್ಲಿ 73 ಎಚ್‌ಪಿ ಶಕ್ತಿಯನ್ನು ನೀಡುತ್ತದೆ ಮತ್ತು 5,750 ಆರ್‌ಪಿಎಂನಲ್ಲಿ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. (Ducati India)
3. ಆರು ಸ್ಪೀಡ್ ಗಿಯರ್ ಬಾಕ್ಸ್ - ಈ ಎರಡೂ ಬೈಕ್ ಗಳಲ್ಲಿ 6 ಸ್ಪೀಡ್ ಗಿಯರ್ ಬಾಕ್ಸ್ ಗಳನ್ನು ಅಳವಡಿಸಲಾಗಿದೆ. ಇದರಲ್ಲಿರುವ ಮಲ್ಟಿ ಪ್ಲೇಟ್ ಕ್ಲಚ್ ಹೈಡ್ರೋಲಿಕ್ ಕಂಟ್ರೋಲ್ ನೊಂದಿಗೆ ಬರುತ್ತದೆ. (Ducati India)
4. ಈ ನಗರಗಳಲ್ಲಿ ಬುಕಿಂಗ್ ಮಾಡಬಹುದು - ದೇಶದ 9 ನಗರಗಲಾಗಿರುವ ದೆಹಲಿ-NCR, ಮುಂಬೈ, ಪುಣೆ, ಅಹ್ಮದಾಬಾದ್, ಹೈದರಾಬಾದ್, ಬೆಂಗಳೂರು, ಕೊಚ್ಚಿ, ಕೊಲ್ಕತ್ತಾ ಹಾಗೂ ಚೆನ್ನೈನಲ್ಲಿ ನೀವು Ducati India ಡೀಲರ್ ಬಳಿ ಹೋಗಿ ನೀವೂ ಕೂಡ ಈ ಬೈಕ್ ಬುಕಿಂಗ್ ಮಾಡಬಹುದು. (Ducati India)
5.Desert Sled ಬೈಕ್ ನ ಟಾಯರ್ ಗಳು - ದುಕಾತಿಯ Desert Sled ಬೈಕ್ ನ ಮುಂಭಾಗದಲ್ಲಿ Pirelli SCORPION™ RALLY STR 120/70 R19 ಟಾಯರ್ ಹಾಗೂ ಹಿಂಭಾಗದಲ್ಲಿ Pirelli SCORPION™ RALLY STR 170/60 R17 ಟ್ಯಾಯರ್ ಅಳವಡಿಸಲಾಗಿದ್ದು, ಇದು ಆಫ್ ರೋಡ್ ಹಾಗೂ ದೂರದ ಪ್ರಯಾಣದ ವೇಳೆ ಅಧ್ಭುತ ಬ್ಯಾಲೆನ್ಸ್ ನೀಡುತ್ತದೆ. (Ducati India)