Post Office Savings Scheme: ಪೋಸ್ಟ್ ಆಫೀಸ್ ಅನ್ನು ಯಾವಾಗಲೂ ಅತ್ಯುತ್ತಮ ಹೂಡಿಕೆ ಆಯ್ಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅಂಚೆ ಕಚೇರಿಯ ಯೋಜನೆಯೊಂದರಲ್ಲಿ ನೀವು ತಿಂಗಳಿಗೆ 5,000 ರೂ.ಗಳನ್ನು ಹೂಡಿಕೆ ಮಾಡುವ ಮೂಲಕ ಮಿಲೇನಿಯರ್ ಆಗಬಹುದು.
Post Office Savings Scheme: ಯಾವುದೇ ಹೂಡಿಕೆಗಳಿಗೆ ಅಂಚೆ ಕಚೇರಿ ಉಳಿತಾಯ ಯೋಜನೆಗಳನ್ನು ಸುರಕ್ಷಿತ ಹೂಡಿಕೆ ಎಂದು ಭಾವಿಸಲಾಗುತ್ತದೆ. ನೀವೂ ಕೂಡ ನಿಮ್ಮ ಹಣವನ್ನು ಸುರಕ್ಷಿತ ಮತ್ತು ಲಾಭದಾಯಕ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಅಂಚೆ ಕಚೇರಿಯ ಮರುಕಳಿಸುವ ಠೇವಣಿ (ಆರ್ಡಿ) ಯೋಜನೆಯು ನಿಮಗೆ ಪ್ರಯೋಜನಕಾರಿ ಎಂದು ಸಾಬೀತು ಪಡಿಸಬಹುದು. ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 5,000 ರೂ.ಗಳನ್ನು ಹೂಡಿಕೆ ಮಾಡುವ ಮೂಲಕ 3,48,480 ಲಕ್ಷ ರೂ.ಗಳನ್ನು ಗಳಿಸಬಹುದು. ಅದು ಹೇಗೆ ಎಂದು ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಅಂಚೆ ಕಚೇರಿಯ ಮರುಕಳಿಸುವ ಠೇವಣಿ (ಆರ್ಡಿ) ಯಲ್ಲಿ ಸಿಗುತ್ತೆ ಇಷ್ಟು ಬಡ್ಡಿ: ಪ್ರಸ್ತುತ, ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (ಆರ್ಡಿ) ಯಲ್ಲಿ ವಾರ್ಷಿಕ 5.8 ರಷ್ಟು ಬಡ್ಡಿ ದರವನ್ನು ನೀಡಲಾಗುತ್ತಿದೆ. ಜೊತೆಗೆ ಇದು ಸುರಕ್ಷಿತ ಠೇವಣಿ ಆಗಿದ್ದು ನಿಮ್ಮ ಹಣಕ್ಕೂ ಯಾವುದೇ ಅಪಾಯವಿರುವುದಿಲ್ಲ.
5000 ಹೂಡಿಕೆಯಿಂದ ಮಿಲೇನಿಯರ್ ಆಗಬಹುದು: ನೀವು ಅಂಚೆ ಕಚೇರಿಯ ಮರುಕಳಿಸುವ ಠೇವಣಿ (ಆರ್ಡಿ) ಯಲ್ಲಿ 5 ವರ್ಷಗಳ ಕಾಲ ತಿಂಗಳಿಗೆ 5000ರೂ.ಗಳನ್ನು ಹೂಡಿಕೆ ಮಾಡುವುದರಿಂದ ಮೆಚ್ಯೂರಿಟಿ ವೇಳೆಗೆ 3,48,480 ರೂಪಾಯಿಗಳನ್ನು ಪಡೆಯುತ್ತೀರಿ. ವಾಸ್ತವವಾಗಿ, ನೀವು ಆರ್ಡಿಯಲ್ಲಿ ಮೂರು ವರ್ಷಗಳವರೆಗೆ ಪ್ರತಿ ತಿಂಗಳು 5,000ರೂ.ಗಳನ್ನು ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆ ಮೊತ್ತ 3 ಲಕ್ಷ ರೂ. ಆಗಿರುತ್ತದೆ. ಇದರಲ್ಲಿ ನೀವು 48,480 ರೂ.ಗಳವರೆಗೆ ಬಡ್ಡಿಯನ್ನು ಪಡೆಯುತ್ತೀರಿ.
100 ರೂ.ನಿಂದ ಹೂಡಿಕೆ ಆರಂಭಿಸಬಹುದು: ಪೋಸ್ಟ್ ಆಫೀಸ್ ನಲ್ಲಿ ನೀವು ಆರ್ಡಿಯಲ್ಲಿ ಕನಿಷ್ಠ 100 ರೂ.ನಿಂದ ಹೂಡಿಕೆ ಆರಂಭಿಸಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ.
ನಿಮ್ಮ ಹೂಡಿಕೆ ಮೇಲೆ ಸಾಲ ಸೌಲಭ್ಯವೂ ಲಭ್ಯ: ಹೂಡಿಕೆಯಲ್ಲಿ ಹೆಚ್ಚಿನ ಬಡ್ಡಿ ಮೊತ್ತವನ್ನು ಮಾತ್ರವಲ್ಲ, ನೀವು ನಿಮ್ಮ ಆರ್ಡಿ ಮೇಲೆ ಸಾಲ ಸೌಲಭ್ಯವನ್ನೂ ಪಡೆಯಬಹುದು. ಉದಾಹರಣೆಗೆ, ನೀವು 12 ಕಂತುಗಳನ್ನು ಠೇವಣಿ ಮಾಡಿದಾಗ, ನೀವು 50 ಪ್ರತಿಶತದವರೆಗೆ ಸಾಲವನ್ನು ಪಡೆಯಬಹುದು. ಆದರೆ, ನಿಮ್ಮ ಸಾಲ ಮರುಪಾವತಿಗೆ ನೀವು ಶೇ.2ರಷ್ಟು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಜಂಟಿ ಖಾತೆಯನ್ನೂ ತೆರೆಯಬಹುದು: ಪೋಸ್ಟ್ ಆಫೀಸ್ ನೀವು ಜಂಟಿಯಾಗಿಯೂ ಆರ್ಡಿಯನ್ನು ತೆರೆಯಬಹುದು.