Vitamin A Rich Vegetables: ದೃಷ್ಟಿದೋಷಕ್ಕೆ ಕಾರಣವಾಗುವ Vitamin A ಕೊರತೆ ದೂರ ಮಾಡಲು ಈ 5 ತರಕಾರಿ ಸೇವಿಸಿ

Vitamin A Rich Vegetables: ವಿಟಮಿನ್ ಎ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದು. ವಿಟಮಿನ್ ಎ ಕೊರತೆಯಾದಲ್ಲಿ ದೃಷ್ಟಿ ಮಂದವಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸಹ ವಿಟಮಿನ್ ಎ ಸಮೃದ್ಧವಾಗಿರುವ ಆಹಾರವನ್ನು ತಿನ್ನಬೇಕು. ರಾತ್ರಿ ಕುರುಡುತನದಂತಹ ಕಾಯಿಲೆ ನಿವಾರಣೆಗೆ ಇದು ಅಗತ್ಯ.  

1 /5

ಬ್ರೊಕೊಲಿಯು ತುಂಬಾ ಪೌಷ್ಟಿಕಾಂಶ ಹೊಂದಿರುವ ತರಕಾರಿ. ಇದನ್ನು ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ. ನೀವು ಈ ತರಕಾರಿಯನ್ನು ಅರ್ಧ ಕಪ್ ತಿಂದರೆ, ದೇಹವು ಸುಮಾರು 60 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ಅನ್ನು ಪಡೆಯುತ್ತದೆ.

2 /5

ಕ್ಯಾರೆಟ್ ತಿನ್ನುವುದು ಕೂಡ ಉತ್ತಮ. ಚಳಿಗಾಲದ ಸಂದರ್ಭದಲ್ಲಿ ಈ ತರಕಾರಿಗಳನ್ನು ಸೇವಿಸಿದರೆ ದೇಹಕ್ಕೆ ಉತ್ತಮ ಆರೋಗ್ಯ ಲಭಿಸುತ್ತದೆ. ಕೆಂಪು, ಕಿತ್ತಳೆ ಮತ್ತು ಕಪ್ಪು ಬಣ್ಣವನ್ನು ಹೊಂದಿರುವ ಕ್ಯಾರೆಟ್ ನ್ನು ಅರ್ಧ ಕಪ್ ತಿಂದರೆ 459 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ಸಿಗುತ್ತದೆ.

3 /5

ಕುಂಬಳಕಾಯಿಯೂ ಸಹ ಉತ್ತಮ ಆರೋಗ್ಯಕರ ಪೋಷಕಾಂಶಗಳನ್ನು ಹೊಂದಿರುವ ತರಕಾರಿ. 100 ಗ್ರಾಂ ಕುಂಬಳಕಾಯಿಯನ್ನು ಬೇಯಿಸಿ ಸೇವಿಸಿದರೆ, 170% ವಿಟಮಿನ್ ಎ ಅನ್ನು ದೇಹ ಪಡೆಯುತ್ತದೆ.

4 /5

ಸ್ಪಿನಾಚ್ ಅಥವಾ ಪಾಲಕ್ ಸೊಪ್ಪಿನಲ್ಲಿ ಅನೇಕ ಜೀವಸತ್ವಗಳಿದ್ದು, ಇದು ದೇಹಕ್ಕೆ ಪೋಷಕಾಂಶವನ್ನು ನೀಡುತ್ತದೆ. ಅರ್ಧ ಕಪ್ ಬೇಯಿಸಿದ ಪಾಲಕ್ ಸೇವಿಸಿದರೆ, ದೇಹವು ಸುಮಾರು 573 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ಅನ್ನು ಪಡೆಯುತ್ತದೆ.

5 /5

ಗೆಣಸು ಬೀಟಾ-ಕ್ಯಾರೋಟಿನ್ ರೂಪದಲ್ಲಿ ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದು ಎಎಮ್‌ಡಿ ವಿರುದ್ಧ ಹೋರಾಡಿ ದೇಹಕ್ಕೆ ರಕ್ಷಣೆ ನೀಡುತ್ತದೆ. ಇಡೀ ಸಿಹಿ ಗೆಣಸನ್ನು ಬೇಯಿಸಿ ತಿಂದರೆ ದೇಹಕ್ಕೆ 1403 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ಸಿಗುತ್ತದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)