Chocolates side effects : ಚಾಕೊಲೇಟ್... ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟ ಪಡುವ ಸಿಹಿ ತಿಂಡಿ. ವಿದೇಶದಿಂದ ಯಾರಾದರೂ ಬಂದರೆ ಮೊದಲು ಕೇಳುವುದು ಚಾಕಲೇಟ್. ಚಾಕೊಲೇಟ್ ಕೆಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆಯಾದರೂ, ಅಧಿಕವಾಗಿ ಸೇವಿಸಿದಾಗ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.
ಹೆಚ್ಚಾಗಿ ಯುವತಿಯರು ಮತ್ತು ಮಕ್ಕಳು ಚಾಕೊಲೇಟ್ ಅಂದ್ರೆ ಜೀವ ಬಿಡ್ತಾರೆ.. ಯುವತಿಯರಂತೂ ಬಾಯ್‌ಪ್ರೇಂಡ್ ಮೀಟಾಗೋಕೆ ಬಂದಾಗೆಲ್ಲ ಅವನು ಚಾಕ್ಲೇಟ್ ತಂದಿಲ್ಲ ಅಂದ್ರೆ ಕೋಪ ಮಾಡ್ಕೋತಾರೆ..
ಹೆಚ್ಚು ಚಾಕೊಲೇಟ್ ಸೇವಿಸುವುದರಿಂದ ಹೊಟ್ಟೆ ಉಬ್ಬುವುದು, ಮಲಬದ್ಧತೆ ಮತ್ತು ಹೊಟ್ಟೆ ಸೆಳೆತದಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಇದಕ್ಕೆ ಕಾರಣ ಚಾಕೊಲೇಟ್‌ನಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು, ಸಕ್ಕರೆ ಮತ್ತು ಕೆಫೀನ್.
ಚಾಕೊಲೇಟ್ ಹೆಚ್ಚಿನ ಮಟ್ಟದ ಸಿಹಿಯನ್ನು ಹೊಂದಿರುತ್ತದೆ, ಇದನ್ನು ಅಧಿಕವಾಗಿ ಸೇವಿಸಿದಾಗ ತಕ್ಷಣವೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಆಯಾಸ, ಕಿರಿಕಿರಿ, ತೂಕ ಹೆಚ್ಚಾಗುವುದು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಬರಬಹುದು.
ಚಾಕೊಲೇಟ್‌ನಲ್ಲಿ ಕೆಫೀನ್ ಅಧಿಕವಾಗಿದ್ದು, ಇದನ್ನು ಅತಿಯಾಗಿ ಸೇವಿಸಿದರೆ ಆತಂಕ, ನಡುಕ ಮತ್ತು ಹೃದಯ ಬಡಿತ ಹೆಚ್ಚಾಗಬಹುದು. ಇದು ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ.
ಚಾಕೊಲೇಟ್‌ನಲ್ಲಿ ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನಂಶವಿದೆ. ಆದ್ದರಿಂದ ಇದನ್ನು ಅತಿಯಾಗಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು.
ಕೆಲವರಿಗೆ ಚಾಕಲೇಟ್‌ನಲ್ಲಿರುವ ಹಾಲು, ನಟ್ಸ್ ಅಥವಾ ಸೋಯಾ ಅಲರ್ಜಿಯ ಕಾರಣ, ಅಲರ್ಜಿ ಸಮಸ್ಯೆ ಇರುವವರು ಇದನ್ನು ಹೆಚ್ಚು ಸೇವಿಸಿದರೆ ತುರಿಕೆ, ಊತ, ಉಸಿರಾಟದ ತೊಂದರೆ ಅನುಭವಿಸಬೇಕಾಗುತ್ತದೆ..