EV Scooters: ಇವೇ ನೋಡಿ 2024ರ ಟಾಪ್‌ 5 ಇಲೆಕ್ಟ್ರಿಕ್ ಸ್ಕೂಟರ್‌ಗಳು

EV Scooters 2024: ವಿವಿಧ ಕಂಪನಿಗಳು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿವೆ. ಭಾರತೀಯರು ಇಷ್ಟಪಟ್ಟು ಖರೀದಿಸುತ್ತಿರುವ ಸ್ಕೂಟರ್‌ಗಳು ಬಿಸಿದೋಸೆಯಂತೆ ಖರ್ಚಾಗುತ್ತಿವೆ. ​

EV Scooters 2024: ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ಇಲೆಕ್ಟ್ರಿಕ್ ಸ್ಕೂಟರ್‌ಗಳ ಹವಾ ಜೋರಾಗಿದೆ. ವಿವಿಧ ಕಂಪನಿಗಳು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿವೆ. ಭಾರತೀಯರು ಇಷ್ಟಪಟ್ಟು ಖರೀದಿಸುತ್ತಿರುವ ಸ್ಕೂಟರ್‌ಗಳು ಬಿಸಿದೋಸೆಯಂತೆ ಖರ್ಚಾಗುತ್ತಿವೆ. ಬಜೆಟ್‌ ಬೆಲೆಗೆ ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಇವಿ ಸ್ಕೂಟರ್‌ಗಳು ಭಾರತೀಯ ಮಾರುಕಟ್ಟೆಯಲ್ಲಿದ್ದು, ಜನರ ಗಮನ ಸೆಳೆಯುತ್ತಿವೆ. 2024ರಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್‌ ಇವಿ ಸ್ಕೂಟರ್‌ಗಳ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

Ola S1 Pro ಟಾಪ್‌ ಇಲೆಕ್ಟ್ರಿಕ್ ಸ್ಕೂಟರ್‌ ಆಗಿದೆ. 181 ಕಿಮೀ ಬ್ಯಾಟರಿ ಶ್ರೇಣಿ ಹೊಂದಿರುವ ಈ ಸ್ಕೂಟರ್ 115 ಕಿಮೀ/ಗಂ‌ ಟಾಪ್ ಸ್ಪೀಡ್ ಹೊಂದಿದೆ. ಸೂಪರ್‌ ಚಾರ್ಜಿಂಗ್, ಎಟ್ರಾಕ್ಟಿವ್ ಡಿಜಿಟಲ್ ಡಿಸ್ಪ್ಲೇ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಕೂಟರ್‌ ಚಾರ್ಜ್‌ ಮಾಡಲು 6.5 ಗಂಟೆ ತೆಗೆದುಕೊಳ್ಳುತ್ತದೆ. 

2 /5

ಟಾಪ್‌ ಇವಿ ಸ್ಕೂಟರ್‌ಗಳ ಪೈಕಿ Ather 450X ಸಹ ಒಂದು. 146km ಬ್ಯಾಟರಿ ಶ್ರೇಣಿಯನ್ನು ಹೊಂದಿರುವ ಈ ಸ್ಕೂಟರ್‌ 80 ಕಿಮೀ/ಗಂ ಟಾಪ್ ಸ್ಪೀಡ್ ಹೊಂದಿದೆ. ಟಚ್‌ಸ್ಕ್ರೀನ್ ಡಿಸ್‌ಪ್ಲೇ, ನ್ಯಾವಿಗೇಶನ್, ಡ್ಯುಯಲ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಕೂಟರ್‌ ಚಾರ್ಜ್‌ ಮಾಡಲು 5.45 ಗಂಟೆ ಬೇಕಾಗುತ್ತದೆ. 

3 /5

TVS iQube ST ಸ್ಕೂಟರ್‌ ಸಹ ಜನರಿಗೆ ತುಂಬಾ ಇಷ್ಟವಾಗಿದೆ. 145 ಕಿಮೀ ಬ್ಯಾಟರಿ ಶ್ರೇಣಿಯನ್ನು ಹೊಂದಿರುವ ಈ ಸ್ಕೂಟರ್‌ 82 ಕಿಮೀ/ಗಂ ಟಾಪ್ ಸ್ಪೀಡ್ ಹೊಂದಿದೆ. ಆರ್‌ಟಿಫ್, ಜಿಯೋ-ಫೆನ್ಸಿಂಗ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವಾರು ವೈಶಿಷ್ಟ್ಯ ಹೊಂದಿರುವ ಈ ಸ್ಕೂಟರ್‌ ಚಾರ್ಜ್‌ ಮಾಡಲು 4.5 ಗಂಟೆ ಬೇಕಾಗುತ್ತದೆ. 

4 /5

Bajaj Chetak ಸಹ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಇಲೆಕ್ಟ್ರಿಕ್ ಸ್ಕೂಟರ್‌ ಆಗಿದೆ. 95 ಕಿಮೀ ಬ್ಯಾಟರಿ ಶ್ರೇಣಿ ಹೊಂದಿರುವ ಈ ಸ್ಕೂಟರ್‌ 70 ಕಿಮೀ/ಗಂ ಟಾಪ್ ಸ್ಪೀಡ್ ಹೊಂದಿದೆ. ರೆಟ್ರೋ ವಿನ್ಯಾಸ, ಒಳ್ಳೆಯ ಕಟ್ಟಡ ಗುಣಮಟ್ಟ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಪ್ಯಾನೆಲ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಕೂಟರ್‌ ಚಾರ್ಜ್‌ ಮಾಡಲು 5 ಗಂಟೆ ತೆಗೆದುಕೊಳ್ಳುತ್ತದೆ. 

5 /5

Hero Electric Optima HX ಸಹ ಹಲವಾರು ವಿಶೇಷತೆಗಳನ್ನು ಹೊಂದಿದ್ದು, ಗ್ರಾಹಕರಿಗೆ ತುಂಬಾ ಇಷ್ಟವಾಗಿದೆ. 122 ಕಿಮೀ ಬ್ಯಾಟರಿ ಶ್ರೇಣಿಯನ್ನು ಹೊಂದಿರುವ ಈ ಸ್ಕೂಟರ್‌ 42 ಕಿಮೀ/ಗಂ ಟಾಪ್ ಸ್ಪೀಡ್ ಹೊಂದಿದೆ. ಕಡಿಮೆ ಬೆಲೆ, ಸರಳ ವಿನ್ಯಾಸ, ಡಿಸ್ಕ್ ಬ್ರೇಕ್‌ಗಳೊಂದಿಗೆ ಬರುವ ಈ ಸ್ಕೂಟರ್‌ ಚಾರ್ಜ್‌ ಮಾಡಲು 4-5 ಗಂಟೆ ಬೇಕಾಗುತ್ತದೆ.