Priyanka Chopra: ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ಸಿನಿರಂಗ ಪ್ರವೇಶಿಸಿರುವ ಪ್ರಿಯಾಂಕಾ ಚೋಪ್ರಾ ಇಂದು ಮಾಡಿರುವ ಸಾಧನೆ ಅಂತಿಂಥದಲ್ಲ. ಈ ನಟಿ ತನ್ನ ಫ್ಯಾಶನ್ ಸೆನ್ಸ್, ನಟನೆಯಿಂದ ಪ್ರಪಂಚದಾದ್ಯಂತದ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ಸಿನಿರಂಗ ಪ್ರವೇಶಿಸಿರುವ ಪ್ರಿಯಾಂಕಾ ಚೋಪ್ರಾ ಇಂದು ಮಾಡಿರುವ ಸಾಧನೆ ಅಂತಿಂಥದಲ್ಲ. ಈ ನಟಿ ತನ್ನ ಫ್ಯಾಶನ್ ಸೆನ್ಸ್, ನಟನೆಯಿಂದ ಪ್ರಪಂಚದಾದ್ಯಂತದ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.
ಈ ನಟಿಗೆ ಈಗ 42 ವರ್ಷ ವಯಸ್ಸು. ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದಾಗ, ಕೇವಲ 18 ವರ್ಷ ವಯಸ್ಸಿನವರು.
ಪ್ರಿಯಾಂಕಾ ಚೋಪ್ರಾ ಜುಲೈ 18, 1982 ರಂದು ಈಗ ಜಾರ್ಖಂಡ್‌ನ ಭಾಗವಾಗಿರುವ ಜಮ್ಶೆಡ್‌ಪುರದಲ್ಲಿ ಜನಿಸಿದರು. ಇವರ ತಂದೆ ಭಾರತೀಯ ಸೇನೆಯಲ್ಲಿ ವೈದ್ಯರಾಗಿದ್ದರು. ಆದ್ದರಿಂದಲೇ ನಟಿ ತನ್ನ ಬಾಲ್ಯವನ್ನು ಯುಪಿ, ಬಿಹಾರ ಮತ್ತು ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಕಳೆದರು.
ಪ್ರಿಯಾಂಕಾ ಚೋಪ್ರಾ ಇನ್ನು ಸಿನಿರಂಗಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ಇವರ ಹೆಸರು ಅನೇಕ ನಟರ ಜೊತೆ ತಳುಕು ಹಾಕಿತ್ತು. ಅದರಲ್ಲಿ ಒಬ್ಬರು ಶಾರುಖ್ ಖಾನ್. ಈ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡಿತ್ತು.
ಇನ್ನೊಂದೆಡೆ ಸಿನಿಮಾ ಜಗತ್ತಿನಲ್ಲಿ ಹೆಸರು ಮಾಡ ಹೊರಟ ಪ್ರಿಯಾಂಕಾಗೆ ತಾಯಿಯಿಂದ ಸಂಪೂರ್ಣ ಬೆಂಬಲ ಸಿಕ್ಕಿತ್ತು. ಹೀಗೆ ಗ್ಲಾಮರ್ ಲೋಕದಲ್ಲಿ ನಟಿಯ ಪಯಣ ಶುರುವಾಗಿದ್ದಲ್ಲದೆ, ಮಿಸ್ ಇಂಡಿಯಾ ಸ್ಪರ್ಧೆಗೆ ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಕೆಲವು ಫೋಟೋಗಳನ್ನು ಕಳುಹಿಸಿದ್ದರು. ಇದಾದ ನಂತರ ನಟಿಗೆ ಈ ಸ್ಪರ್ಧೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು.
ಪ್ರಿಯಾಂಕಾ ಚೋಪ್ರಾ 17 ನೇ ವಯಸ್ಸಿನಲ್ಲಿ ಮಿಸ್ ಇಂಡಿಯಾದಲ್ಲಿ ಭಾಗವಹಿಸಿನ ಪ್ರಶಸ್ತಿ ಗೆದ್ದರು. ಇದಾದ ನಂತರ ನಟಿ ಮಿಸ್ ವರ್ಲ್ಡ್ ಸ್ಪರ್ಧೆಯತ್ತ ದೃಷ್ಟಿ ನೆಟ್ಟಿದ್ದರು. ಲಂಡನ್‌ನ ಮಿಲೇನಿಯಮ್ ಡೋಮ್‌ನಲ್ಲಿ ನಡೆದ ವಿಶ್ವ ಸುಂದರಿ 2000 ಸ್ಪರ್ಧೆಯಲ್ಲಿ ಭಾಗವಹಿಸಿ, ಕಿರೀಟ ಗೆದ್ದರು.
ಇಲ್ಲಿಂದ ಸಾಧನೆಯ ಶಿಖರವನ್ನೇ ಏರಿದ್ದ ಪ್ರಿಯಾಂಕ ಇದೀಗ ಹಾಲಿವುಡ್ ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು ಮದುವೆಯಾಗಿದ್ದಾರೆ. ಮಾಲ್ತಿ ಎಂಬ ಮುದ್ದಾದ ಹೆಣ್ಣು ಮಗುವಿನ ತಾಯಿಯಾಗಿರುವ ಪ್ರಿಯಾಂಕ ಬಾಲಿವುಡ್ʼನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಇವರು ಒಂದು ಸಿನಿಮಾಗೆ ಸುಮಾರು 15 ರಿಂದ 25 ಕೋಟಿವರೆಗೆ ಚಾರ್ಜ್ ಮಾಡುತ್ತಾರೆ ಎಂದು ಕೆಲ ವರದಿಗಳು ಹೇಳುತ್ತವೆ.