ಕೈಯಿಂದ ಈ ಐದು ವಸ್ತುಗಳು ಬೀಳುವುದು ಅಶುಭ ! ಜೀವನದಲ್ಲಿ ಬಿರುಗಾಳಿ ಏಳುವ ಮುನ್ಸೂಚನೆ .!

 ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೈಯಿಂದ ಕೆಲವು ವಸ್ತುಗಳು ಬೀಳುವುದನ್ನು ಅಶುಭವೆಂದು  ಹೇಳಲಾಗುತ್ತದೆ. 

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೈಯಿಂದ ಕೆಲವು ವಸ್ತುಗಳು ಬೀಳುವುದನ್ನು ಅಶುಭವೆಂದು  ಹೇಳಲಾಗುತ್ತದೆ. ಈ ವಸ್ತುಗಳು ವ್ಯಕ್ತಿಯ ಕೈಯಿಂದ ಕೆಳಗೆ ಬಿತ್ತು ಎಂದರೆ ಆ ವ್ಯಕ್ತಿಯ ಕೆಟ್ಟ ಸಮಯ ಆರಂಭವಾಯಿತು ಎಂದೇ ಅರ್ಥ.  ದುರಾದೃಷ್ಟ ಬಾಗಿಲ ಬಳಿ ಬರುತ್ತಿದೆ  ಎನ್ನುವುದನ್ನು ಈ ಘಟನೆಗಳು ಸೂಚಿಸುತ್ತವೆಯಂತೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಜ್ಯೋತಿಷ್ಯ ಶಾಸ್ತ್ರದಲ್ಲಿ, ಹಾಲು ಚೆಲ್ಲುವುದು ಅಥವಾ ಕುದಿಯುವ ಸಮಯದಲ್ಲಿ ಚೆಲ್ಲುವುದು ಅಶುಭ . ಹಾಲಿಗೂ ಚಂದ್ರನಿಗೂ ನೇರ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಾಲು ಚೆಲ್ಲಿದರೆ ಅದು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎನ್ನುವುದನ್ನು ಸೂಚಿಸುತ್ತದೆ.  

2 /5

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಹಾರವನ್ನು ಬಡಿಸುವಾಗ ಜಾಗರೂಕರಾಗಿರಬೇಕು. ಆಹಾರದ ತಟ್ಟೆಯನ್ನು ಕೈಯಿಂದ ಬೀಳಿಸುವುದು ಅಶುಭ. ಆಹಾರದ ತಟ್ಟೆ ಕೈಯಿಂದ ಬೀಳುತ್ತದೆ ಎಂದರೆ ನಕಾರಾತ್ಮಕತೆ ಮತ್ತು ಬಡತನ ಮನೆಗೆ ಕಾಲಿಡಲಿದೆ ಎಂದರ್ಥ.   

3 /5

ಪೂಜೆ ಮಾಡುವಾಗ, ಅನೇಕ ಬಾರಿ ಜನರು ತಮ್ಮ ಕೈಯಿಂದ ತಟ್ಟೆಯನ್ನು  ಬೀಳಿಸಿಕೊಳ್ಳುತ್ತಾರೆ. ಹೀಗಾದಾಗ ದೇವರ ಕೃಪೆ ಕಡಿಮೆಯಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತದೆ ಜ್ಯೋತಿಷ್ಯ.

4 /5

ಎಣ್ಣೆಯನ್ನು ಬಳಸುವಾಗ ವ್ಯಕ್ತಿ ಯಾವಾಗಲೂ ಜಾಗರೂಕರಾಗಿರಬೇಕು. ಎಣ್ಣೆ ಬೀಳುವುದು ಅಶುಭ ಸಂಕೇತವನ್ನು ಸೂಚಿಸುತ್ತದೆ. ವ್ಯಕ್ತಿಯ ಕೈಯಿಂದ ಪದೇ ಪದೇ ಎಣ್ಣೆ ಕೆಳಗೆ ಬೀಳುತ್ತಿದ್ದರೆ, ಜೀವನದಲ್ಲಿ ಏನಾದರೂ ದೊಡ್ಡ ಸಮಸ್ಯೆ ಬರಲಿದೆ ಎಂದರ್ಥ. 

5 /5

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೈಯಿಂದ ಉಪ್ಪು ಬೀಳುವುದನ್ನು ಅಶುಭವೆಂದು ಹೇಳಲಾಗುತ್ತದ. ಯಾರ ಕೈಯ್ಯಿಂದ ಉಪ್ಪು ಪದೇ ಪದೇ ಕೆಳಗೆ ಬೀಳುತ್ತಿರುತ್ತದೆಯೋ ಅವರ ಜಾತಕದಲ್ಲಿ ಶುಕ್ರ ಮತ್ತು ಚಂದ್ರ ದುರ್ಬಲರಾಗಿದ್ದಾರೆ ಎನ್ನಲಾಗುತ್ತದೆ. ಈ ಕಾರಣದಿಂದಾಗಿ ವ್ಯಕ್ತಿಯು ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.  (Disclaimer: ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)