ʼʼನಾನು ನನ್ನ ಪತಿಯೊಂದಿಗೆ..ʼʼ ಕೊನೆಗೂ ಡಿವೋರ್ಸ್‌ ವದಂತಿ ಬಗ್ಗೆ ಮೌನ ಮುರಿದ ನಟಿ ಭಾವನಾ!!

Actress Bhavana Menon: ನಟಿ ಭಾವನಾ ಮೆನನ್ ಅವರ ಬಗ್ಗೆ ಕನ್ನಡ ಸಿನಿಪ್ರೇಮಿಗಳಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರೊಂದಿಗೆ ತೆರೆಹಂಚಿಕೊಂಡ ಈ ಚೆಲುವೆ ಇಂದಿಗೂ ಕನ್ನಡ ಸಿನಿರಂಗದಲ್ಲಿ ಸಕ್ರಿಯವಾಗಿದ್ದಾರೆ.. ಇತ್ತೀಚೆಗೆ ನಟಿ ತಮ್ಮ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಯೊಂದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.. 
 

1 /7

ಭಾವನಾ ಮೆನನ್ ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಜನಪ್ರಿಯ ನಟಿ. ಕನ್ನಡದಲ್ಲಿ ಅಪ್ಪು ಅಭಿನಯದ ಜಾಕಿ, ಕಿಚ್ಚ ಸುದೀಪ್‌ ಅವರ ವಿಷ್ಣುವರ್ಧನ್‌ ಸಿನಿಮಾಗಳಲ್ಲಿ ನಟಿಸಿ ದೊಡ್ಡ ಖ್ಯಾತಿ ಗಳಸಿದರು.. ಇವರ ಅದ್ಭುತ ಅಭಿನಯಕ್ಕೆ ಅಪಾರ ಅಭಿಮಾನಿಗಳ ಬಳಗವೇ ಇದೆ..   

2 /7

ಇತ್ತೀಚೆಗೆ ನಟಿ ಖ್ಯಾತ ನಟಿ ಭಾವನಾ ಪತಿಯಿಂದ ವಿಚ್ಛೇದನ ಪಡೆದು ಒಂಟಿ ಜೀವನ ನಡೆಸುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಮಾದ್ಯಮಗಳಲ್ಲಿ ಹರಿದಾಡುತ್ತಿತ್ತು.. ಇದೀಗ ಈ ಊಹಾಪೋಹಗಳಿಗೆ ನಟಿ ತೆರೆ ಎಳೆದಿದ್ದಾರೆ..   

3 /7

ಹೌದು ನಟಿ ಭಾವನಾ ಮೊದಲ ಬಾರಿಗೆ ವಿಚ್ಛೇದನದ ವದಂತಿಯ ಬಗ್ಗೆ ಮಾತನಾಡಿದ್ದಾರೆ. "ನಾನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ನಾನು ಹೆಚ್ಚು ಹಂಚಿಕೊಂಡಿಲ್ಲ. ನಾನು ನನ್ನ ಪತಿಯೊಂದಿಗೆ ಫೋಟೋಗಳನ್ನು ಏಕೆ ಹಂಚಿಕೊಳ್ಳುವುದಿಲ್ಲ ಎಂದು ಪ್ರಶ್ನಿಸುತ್ತಾರೆ.."  

4 /7

"ಇದರಿಂದಾಗಿ ನಾವು ವಿಚ್ಛೇದನ ಪಡೆದಿದ್ದೇವೆ.. ನಾನು ನನ್ನ ಗಂಡನಿಂದ ಬೇರ್ಪಟ್ಟಿದ್ದೇನೆ ಮತ್ತು ನಾನು ಒಬ್ಬಂಟಿಯಾಗಿದ್ದೇನೆ, ಆದರೆ ಎಲ್ಲವನ್ನೂ ಸೋಷಿಯಲ್‌ ಮಿಡಿಯಾದಲ್ಲಿ ಸಾಬೀತು ಪಡಿಸುವ ಅಗತ್ಯವಿಲ್ಲ ನಾವೀಬ್ಬರೂ ಚೆನ್ನಾಗಿಯೇ ಇದ್ದೇವೆ"   

5 /7

"ಅಲ್ಲದೇ ಪ್ರತಿಬಾರಿಯೂ ನಾನು ನನ್ನ ಗಂಡನ ಬಳಿಗೆ ಹೋಗಿ ನಮ್ಮ ಸಂಬಂಧದ ಪೋಟೋ ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಾಕಲು ಸಾಧ್ಯವಿಲ್ಲ, ನಾವು ಒಟ್ಟಿಗೆ ಇದ್ದೇವೆ ಎಂದು ಪ್ರತಿಬಾರಿ ಜನರಿಗೆ ತೋರಿಸುವ ಅಗತ್ಯವೂ ಇಲ್ಲ.." ಎಂದು ನಟಿ ವಿಚ್ಚೇದನ ವದಂತಿಗೆ ಫುಲ್‌ ಸ್ಟಾಪ್‌ ಹಾಕಿದ್ದಾರೆ..   

6 /7

2018 ರಿಂದ ಯಾವುದೇ ಚಿತ್ರದಲ್ಲಿ ನಟಿಸದ ನಂತರ ಭಾವನಾ 2023 ರಲ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ.. ಅವರು ನಟಿಸಿರುವ ಮಲಯಾಳಂ ಚಿತ್ರ ಹಂಟ್ ಬಿಡುಗಡೆಯಾಗಿರುವುದು ಗಮನಾರ್ಹ.  

7 /7

2018ರಲ್ಲಿ ನವೀನ್ ಎಂಬ ಉದ್ಯಮಿಯನ್ನು ಮದುವೆಯಾಗಿದ್ದ ಭಾವನಾ ಸದ್ಯ ಮದುವೆಯ ನಂತರವೂ ಬ್ಯುಸಿ ನಟಿಯಾಗಿ ಮಿಂಚುತ್ತಿದ್ದಾರೆ..