Famous Comedian Vadivelu: ಪ್ರಸಿದ್ಧ ಹಾಸ್ಯ ಕಲಾವಿದನಿಗೆ ಬರ್ತ್ ಡೇ ಗಿಫ್ಟ್ ಆಗಿ ತಾಯಿಯ ಫೋಟೋ ಸಿಕ್ಕಾಗ...

                  

Famous Comedian Vadivelu: ತಮಿಳು ಚಿತ್ರರಂಗದ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿ ಅವರ ಮನಸ್ಸನ್ನು ಸಂತಸಗೊಳಿಸಿದ ಹಾಸ್ಯನಟರಲ್ಲಿ ವೈಗೈ ಪುಯಲ್ ವಡಿವೇಲು ಅವರಿಗೆ ವಿಶೇಷ ಸ್ಥಾನವಿದೆ. ಜನರನ್ನು ನಗಿಸುವುದು ಸಾಮಾನ್ಯ ಸಂಗತಿಯಲ್ಲ, ಇದು ಒಂದು ಕಲೆ. ಆ ಕಲೆಯ ಶ್ರೇಷ್ಠ ಕಲಾವಿದ ನಟ ವಡಿವೇಲು ಎಂದರೆ ಅತಿಶಯೋಕ್ತಿಯಲ್ಲ. ವಡಿವೇಲು ಸೆಪ್ಟೆಂಬರ್ 12, 1960 ರಂದು ಜನಿಸಿದರು. ಅವರ ತಾಯಿ ವೈತೀಶ್ವರಿ, ತಂದೆ ನಟರಾಜನ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ವಡಿವೇಲು ಎಂದೇ ಖ್ಯಾತಿ ಪಡೆದಿರುವ ವೈಗೈ ಪುಯಲ್ ವಡಿವೇಲು ಅವರು ಸುದೀರ್ಘ ವಿರಾಮದ ನಂತರ ಪ್ರಸ್ತುತ ತಮಿಳು ಚಿತ್ರರಂಗಕ್ಕೆ ಮರು ಪ್ರವೇಶಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮೊನ್ನೆಯಷ್ಟೇ (ಸೆಪ್ಟೆಂಬರ್ 12) ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದರು. ಈ ಸಂಭ್ರಮಾಚರಣೆಯ ಫೋಟೋ ವೈರಲ್ ಆಗುತ್ತಿದೆ.

2 /4

ವಡಿವೇಲು (Vadivelu) ಅವರ ಈ ಹುಟ್ಟುಹಬ್ಬಕ್ಕೆ ಅವರು ಪಡೆದ ಉಡುಗೊರೆ ಒಂದು ಅವರನ್ನು ಬಹಳ ಭಾವುಕರನ್ನಾಗಿ ಮಾಡಿದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ತಾಯಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ತಾಯಿಗೆ ಸರಿಸಾಟಿ ಯಾವುದು ಇಲ್ಲ ಎಂಬುದನ್ನು ಮರೆಯುವಂತಿಲ್ಲ. ವಾಸ್ತವವಾಗಿ, ವಡಿವೇಲು ತಮ್ಮ ಜನ್ಮದಿನದಂದು ಅವರ ತಾಯಿಯ ವರ್ಣಚಿತ್ರವನ್ನು ಉಡುಗೊರೆಯಾಗಿ ಪಡೆದ ಕ್ಷಣ ಇದನ್ನು ನೆನಪಿಸುವಂತಿತ್ತು. ಇದನ್ನೂ ಓದಿ- 'ಉದಯ್ ಚೋಪ್ರಾ ಮತ್ತು ನಾನು 5 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇವೆ'

3 /4

ತನ್ನ ಹಾಸ್ಯ ಕಲೆಯ ಮೂಲಕ ಲಕ್ಷಾಂತರ ಜನರ ಮೊಗದಲ್ಲಿ ನಗು ಅರಳಿಸುವ ಕಲಾವಿದ ವಡಿವೇಲು ತಾಯಿಯ ಪೇಂಟಿಂಗ್ ಕಂಡ ಕ್ಷಣ ಭಾವುಕರಾದರು.  ವಾಸ್ತವವಾಗಿ, ಅಭಿಮಾನಿಯೊಬ್ಬರು ನೀಡಿರುವ ಈ ಪೇಂಟಿಂಗ್ ನಲ್ಲಿ ನಟ ವಡಿವೇಲು ಅವರ ತಾಯಿಯನ್ನು ಪ್ರೀತಿಯಿಂದ ತಬ್ಬಿಕೊಂಡಿರುವಂತಿದೆ. ಇದನ್ನೂ ಓದಿ- 55ನೇ ಚಿತ್ರದಲ್ಲಿ ‘ಕ್ರಾಂತಿ’ ಮಾಡಲು ಸಜ್ಜಾದ ಚಾಲೆಂಜಿಗ್ ಸ್ಟಾರ್ ದರ್ಶನ್..!

4 /4

ಸುದೀರ್ಘ ವಿರಾಮದ ನಂತರ ತಮಿಳು ಚಿತ್ರರಂಗಕ್ಕೆ ಮರು ಎಂಟ್ರಿ ನೀಡಿರುವ ವಡಿವೇಲು ತಮ್ಮ ತಾಯಿಯ ಈ ಪೇಂಟಿಂಗ್ ಕಂಡೊಡನೆ ಮಗು ತನ್ನ ತಾಯಿಯನ್ನು ಕಂಡೊಡನೆ ಅಪ್ಪಿ ಮುದ್ದಾಡುವಂತೆ ತಾಯಿಯ ಫೋಟೋಗೆ ಚುಂಬಿಸಿದರು. (Photo Credit: ಈ ಎಲ್ಲಾ ಫೋಟೋಗಳನ್ನು ಜೀ ಹಿಂದೂಸ್ಥಾನ್ ತಮಿಳ್ ಡಿಜಿಟಲ್ ನಿಂದ ತೆಗೆದುಕೊಳ್ಳಲಾಗಿದೆ.)