ಸಿರೀಯಲ್‌ನಲ್ಲಿ ಅತ್ತೆ-ಅಳಿಯನಾಗಿ ನಟಿಸಿ ನಿಜಜೀವನದಲ್ಲಿ ಮದುವೆಯಾದ ಈ ಜೋಡಿಗೆ 20 ವರ್ಷ ಕಳೆದರೂ ಮಕ್ಕಳಾಗಿಲ್ಲ! ಕಾರಣ ಏನು ಗೊತ್ತೇ?

Famous Serial Actors: ಜನಪ್ರಿಯ ಸಿರೀಯಲ್‌ನಲ್ಲಿ ಅತ್ತೆ-ಅಳಿಯನಾಗಿ ನಟಿಸಿದ ನಿಜ ಜೀವನದಲ್ಲಿ ಮದುವೆಯಾದ ಜೋಡಿ ಇದು.. ಸಂತೋಷವಾಗಿರುವ ಈ ಸಂಸಾರದಲ್ಲಿರುವ ಕೊರತೆ ಎಂದರೇ ಅದು ಮಕ್ಕಳಾಗಿಲ್ಲ ಎನ್ನುವುದು.. 

1 /8

 ಚಕ್ರವಾಕಂ ಧಾರಾವಾಹಿ ಆ ಸಮಯದಲ್ಲಿ ಸೂಪರ್ ಹಿಟ್ ಆಗಿತ್ತು. ಇದು ಪ್ರಸಾರವಾಗುವ ಹೊತ್ತಿಗೆ ಪ್ರೇಕ್ಷಕರು ಟಿವಿ ಮುಂದೆ ಕೂರಲು ಸಿದ್ಧರಾಗಿರುತ್ತಿದ್ದರು.. ಸುಮಾರು ಕೆಲವು ವರ್ಷಗಳ ಕಾಲ ಓಡಿದ ಈ ಧಾರಾವಾಹಿಯ ಟಿಆರ್‌ಪಿಯೂ ಭರ್ಜರಿಯಾಗಿತ್ತು..   

2 /8

ಕರೋನಾ ಸಮಯದಲ್ಲಿ ಎರಡನೇ ಬಾರಿಗೆ ಪ್ರಸಾರವಾದ ಈ ಧಾರಾವಾಹಿ ಮತ್ತೇ ಸೂಪರ್ ಹಿಟ್ ಆಯಿತು. ಈ ಸಿರೀಯಲ್‌ನಲ್ಲಿ ನಟ ಇಂದ್ರನಿಲ್ ಅಳಿಯನ ಪಾತ್ರದಲ್ಲಿ ಮಿಂಚಿದ್ದರು. ಮೇಘನಾ ಅತ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು..   

3 /8

ಆದರೆ ಈ ಧಾರಾವಾಹಿ ಎರಡನೇ ಬಾರಿಗೆ ಪ್ರಸಾರವಾಗುವ ವೇಳೆಗೆ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು.. ಇದರಿಂದ ಅಳಿಯ-ಅತ್ತೆ ಮದುವೆ ಎಂದು ಜನ ಟ್ರೋಲ್ ಮಾಡಿದ್ದರು.  

4 /8

ಧಾರಾವಾಹಿಯ ಚಿತ್ರೀಕರಣದ ವೇಳೆ ಪ್ರೀತಿಯಲ್ಲಿ ಬಿದ್ದಿದ್ದ ಇವರಿಬ್ಬರು ಮದುವೆ ಮಾಡಿಕೊಳ್ಳಲು ಬಹಳ ಸಮಯ ಹಿಡಿಯಿತು.. ಹಲವಾರು ಸಂಕಷ್ಟಗಳ ನಡುವೆ ಮದುವೆಯಾದ ಈ ಜೋಡಿಗೆ ಈ 20 ವರ್ಷವಾದರೂ ಮಕ್ಕಳಾಗಿಲ್ಲ...  

5 /8

ನಟಿ ಮೇಘನಾ ಮತ್ತು ಇಂದ್ರನೀಲ್ ಅವರು 40 ವರ್ಷ ದಾಟಿದ್ದಾರೆ.. ಮಗುವಿನ ವಿಚಾರದ ಬಗ್ಗೆ ಮಾತನಾಡಿದ ಅವರು "ಈಗ ನಾವು ಮಕ್ಕಳನ್ನು ಮಾಡಿಕೊಂಡು ಅವರಿಗೆ ತೊಂದರೆ ಕೊಡುವುದಿಲ್ಲ.. ನಮಗೆ ಈಗಾಗಲೇ ವಯಸ್ಸಾಗಿದೆ.. ಹಣವನ್ನ ಅವರಿಗಾಗಿ ಸಂಪಾದಿಸಬಹುದು ಆದರೆ ಎಲ್ಲದರಲ್ಲೂ ಅವರ ಜೊತೆ ಇರಲು ಸಾಧ್ಯವಾಗುವುದಿಲ್ಲ.." ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.  

6 /8

"ನಮಗೆ ಈಗ ಮಕ್ಕಳು ಹುಟ್ಟಿದರೂ ಅವರು ಬೆಳೆದು ನಿಲ್ಲುವಷ್ಟರಲ್ಲಿ ನಮಗೆ 60 ವರ್ಷ.. ಆ ಸಮಯದಲ್ಲಿ ಏನಾದ್ರೂ ನಡೆದರೆ ಯಾರು ನೋಡಿಕೊಳ್ಳುತ್ತಾರೆ.. ಮಕ್ಕಳು ರಸ್ತೆಗೆ ಬೀಳುತ್ತಾರೆ.. ಹೀಗಾಗಿ ವಯಸ್ಸಿನಲ್ಲಿ ನಮಗೆ ಮಕ್ಕಳು ಬೇಉ ಎಂದೆನಿಸಿಲ್ಲ.." ಎಂದು ಹೇಳಿಕೊಂಡಿದ್ದಾರೆ..   

7 /8

ಇತ್ತೀಚೆಗೆ ಮತ್ತೊಂದು ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೇಘನಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಕ್ಕಳಾಗದಿರುವ ಬಗ್ಗೆ ಶಾಕಿಂಗ್ ವಿಷಯ ಹೇಳಿದ್ದರು.. ಗರ್ಭಿಣಿಯಾಗಿದ್ದಾಗ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು.. ಆದರೆ ಆ ಸಮಯದಲ್ಲಿ ನಿರ್ದೇಶಕರ ಕೆಲಸದಿಂದ ಗರ್ಭಪಾತವಾಯಿತು ಎಂದಿದ್ದಾರೆ..   

8 /8

ಎಂದರೇ ಆ ತೆಲುಗು ಧಾರಾವಾಹಿಯಲ್ಲಿ ನಟಿಸುವಾಗ ನಿರ್ದೇಶಕ ತನ್ನನ್ನು 40 ಬಾರಿ ಮೆಟ್ಟಿಲು ಹತ್ತಿ ಇಳಿಯುವಂತೆ ಮಾಡಿದರು... ಇದರಿಂದ ಗರ್ಭಪಾತವಾಯಿತು ಎಂದು ಹೇಳಿದ್ದಾಳೆ.